ETV Bharat / state

ಮರಗಳನ್ನು ಕಡಿದ ಆರೋಪ ಪ್ರಕರಣ; ಅರಣ್ಯಾಧಿಕಾರಿಗಳಿಂದ ವಿಕ್ರಂ ಸಿಂಹ ಬಂಧನ - ಮರ ಕಡಿತ ಪ್ರಕರಣ

ಮರಗಳನ್ನು ಕಡಿದ ಆರೋಪದಡಿ ಸಂಸದ ಪ್ರತಾಪ್​ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಬಂಧಿಸಲಾಗಿದೆ.

ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ
ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ
author img

By ETV Bharat Karnataka Team

Published : Dec 30, 2023, 8:47 PM IST

Updated : Dec 30, 2023, 9:31 PM IST

ಬೆಂಗಳೂರು: ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ‌ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹಾಸನದ ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿ ವಿಕ್ರಂ ಸಿಂಹರನ್ನ ಬೆಂಗಳೂರಿನಲ್ಲಿ ಪೊಲೀಸರ ನೆರವಿನೊಂದಿಗೆ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಹಾಸನದ ಬೇಲೂರಿನ‌ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿದಿದ್ದ ಆರೋಪದಡಿ ವಿಕ್ರಂ ಸಿಂಹ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಈ ಕುರಿತು ವಿಚಾರಣೆಗೆ ತನಿಖಾಧಿಕಾರಿಗಳ ಸಂಪರ್ಕಕ್ಕೆ ವಿಕ್ರಂ ಸಿಂಹ ಸಿಕ್ಕಿರಲಿಲ್ಲ. ಬಳಿಕ ಅವರು ಹಾಸನದಿಂದ ಬೆಂಗಳೂರಿಗೆ ತೆರಳಿ ಅಲ್ಲೇ ವಾಸವಾಗಿದ್ದರು. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರು ನಗರ ಪೊಲೀಸರ ಸಹಾಯದಿಂದ ವಿಕ್ರಂ ಸಿಂಹ ಅವರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ವಿಕ್ರಂ ಸಿಂಹ ಅವರನ್ನು ಹಾಸನಕ್ಕೆ ಕರೆದೊಯ್ಯುತ್ತಿರುವುದಾಗಿ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ: ಕಲ್ಲಡ್ಕ‌ ವಿರುದ್ಧ ಮತ್ತೊಂದು ದೂರು

Last Updated : Dec 30, 2023, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.