ETV Bharat / state

ಬಿಜೆಪಿ ವಿರುದ್ಧ ಡಿ.ಕೆ ಸುರೇಶ್ ಕಿಡಿ; ಹೆದರಿಸಿದವರಿಗೆ ಜನರಿಂದ ತಕ್ಕ ಪಾಠ ಎಂದ ಸಂಸದ! - ಬಿಜೆಪಿ ಕಾರ್ಯಕರ್ತರು

ಯಶವಂತಪುರ ಬಿ.ಕೆ. ನಗರದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದ ಸಿದ್ದರಾಮಯ್ಯಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿದ ಘಟನೆ ನಡೆದಿದ್ದು, ಇದೀಗ ದೂರು ದಾಖಲು ಮಾಡಲಾಗಿದೆ.

MP DK Suresh
MP DK Suresh
author img

By

Published : Oct 28, 2020, 2:09 AM IST

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸಂಸದ ಡಿ.ಕೆ ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ವಿರುದ್ಧ ಸಂಸದ ಕಿಡಿ

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಅಡ್ಡಿ: ಮತ್ತೆ ಕೇಳಿದ ಮೋದಿ ಘೋಷಣೆ

ಯಶವಂತಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಯಕರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ ಪಾಡಿಗೆ ಪ್ರಚಾರ ನಡೆಸುತ್ತಿತ್ತು. ಅದಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಇದು ಬರೀ ಆರೋಪವಲ್ಲ. ಕಣ್ಣಿಗೆ ಕಾಣಿಸುತ್ತಿರುವ ಸತ್ಯ. ಈ ರೀತಿ ಬಿಜೆಪಿ ಗೂಂಡಾ ವರ್ತನೆಗಳಿಗೆ ಕಾಂಗ್ರೆಸ್ ಬೆದರುವುದಿಲ್ಲ. ಬಿಜೆಪಿ ಅಭ್ಯರ್ಥಿಯ ಸಂಸ್ಕೃತಿ ಏನು ಅಂತಾ ಸಿಎಂ ಅವರೇ ಹೇಳಲಿ ಎಂದಿದ್ದಾರೆ.

FIR against BJP
ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು

ಆಡಳಿತದಲ್ಲಿದ್ದೇವೆ ಎಂದು ಏನು ಬೇಕಾದರೂ ಮಾಡಬಹುದಾ? ಇಂತಹ ಬೆದರಿಕೆಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಆ ಗೂಂಡಾ ಮಾಜಿ ಕಾರ್ಪೊರೇಟರ್ ಬಂಧನವಾಗಬೇಕು. ಮಾಜಿ ಕಾರ್ಪೋರೇಟರ್ ಜಿ.ಕೆ ವೆಂಕಟೇಶ್ ವಿರುದ್ಧ ಯಶವಂತಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಕಾಂಗ್ರೆಸ್ ಪ್ರಚಾರದ ವೇಳೆ ಅಡ್ಡಿಪಡಿಸಿದ ಜಿ.ಕೆ ವೆಂಕಟೇಶ್ ಮತ್ತು ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಸೆಕ್ಷನ್ 506, 341ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು ಸೂಕ್ತ ಕ್ರಮದ ಭರವಸೆ ಸಿಕ್ಕಿದೆ ಎಂದು ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.