ETV Bharat / state

ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಸಂಪೂರ್ಣ ಕುಸಿತ: ಸರ್ಕಾರದ ವಿರುದ್ಧ ಡಿಕೆಸು ಕಿಡಿ - ಕರ್ನಾಟಕದ ಪಠ್ಯಕ್ರಮದ ಬಗ್ಗೆ ಡಿಕೆ ಸುರೇಶ್ ಪ್ರತಿಕ್ರಿಯೆ

ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಸಂಪೂರ್ಣ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮ ಹೊಂದಿದ್ದಾರೆ. ಇದರ ಜತೆಗೆ ಬೋಧನೆಗೆ ಸಂಬಂಧಪಟ್ಟಂತೆ ಸರ್ಕಾರದ ಮೇಲ್ವಿಚಾರಣೆ ಕೂಡ ಇಲ್ಲ ಎಂದು ಸಂಸದ ಡಿ.ಕೆ ಸುರೇಶ್ ದೂರಿದ್ದಾರೆ.

MP DK Suresh
ಸಂಸದ ಡಿ.ಕೆ ಸುರೇಶ್
author img

By

Published : Feb 1, 2022, 7:13 AM IST

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತ ಶುರುವಾದ ದಿನದಿಂದಲೂ ಎಲ್ಲ ಕ್ಷೇತ್ರಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.

  • ಬಿಜೆಪಿ ಆಡಳಿತದ ಶಾಲಾ ಪಠ್ಯಕ್ರಮದಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ.

    > ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮಗಳನ್ನು ಹೊಂದಿದ್ದಾರೆ
    > ಜೊತೆಗೆ ಬೋಧನೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ವಿಚಾರಣೆ ಕೂಡಾ ಇಲ್ಲ.

    ಸಧ್ಯದ ಪಠ್ಯಪುಸ್ತಕದಲ್ಲಿನ ಚಿತ್ರಗಳು ಸಮಿತಿಯಿಂದ ಸಂಶೋಧಿಸದೇ ಅಂತರ್ಜಾಲದಲ್ಲಿ ತಗೆದ ಚಿತ್ರಗಳಾಗಿವೆ.

    — DK Suresh (@DKSureshINC) January 31, 2022 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಮಲಯಾಳಂ ಚಿತ್ರನಟ 'ಕುಂಚಾಕೋ ಬಾಬನ್' ಅವರ ಚಿತ್ರವನ್ನು ಕರ್ನಾಟಕ ಸರ್ಕಾರ ಶಾಲಾ ಪಠ್ಯಪುಸ್ತಕದಲ್ಲಿ 'ಅಂಚೆಯಣ್ಣನ ಶೀರ್ಷಿಕೆ' ಜತೆ ಅಚ್ಚು ಹಾಕಿದೆ. ಈ ಪ್ರಮಾದದ ಬಗ್ಗೆ ಸ್ವತಃ ಬಾಬನ್ ಟ್ವೀಟ್ ಮಾಡಿ ಕರ್ನಾಟಕ ಸರ್ಕಾರದ ಕಾಲೆಳೆದಿದ್ದಾರೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಸಂಪೂರ್ಣ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮ ಹೊಂದಿದ್ದಾರೆ. ಇದರ ಜತೆಗೆ ಬೋಧನೆಗೆ ಸಂಬಂಧಪಟ್ಟಂತೆ ಸರ್ಕಾರದ ಮೇಲ್ವಿಚಾರಣೆ ಕೂಡ ಇಲ್ಲ. ಸದ್ಯದ ಪಠ್ಯಪುಸ್ತಕಗಳಲ್ಲಿನ ಚಿತ್ರಗಳನ್ನು ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೆ, ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ ಎಂದು ದೂರಿದ್ದಾರೆ.

  • ಅಂದಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು @BCNagesh_bjp ಮತ್ತು @nimmasuresh ಸ್ಪಷ್ಟಪಡಿಸಬೇಕು.

    ಈ ಮೂಲಕ ಬಿಜೆಪಿ ಅವ್ಯವಸ್ಥೆಯಿಂದ ಇಡೀ ದೇಶದ ಎದುರು ರಾಜ್ಯ ತಲೆತಗ್ಗಿಸುವಂತಾಗಿದೆ.

ಅಂದ ಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮತ್ತು ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಬೇಕು. ಬಿಜೆಪಿ ಸರ್ಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕ ಇಡೀ ದೇಶದ ಎದುರು ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೇಲೂರು, ಹಳೆಬೀಡು, ಸೋಮನಾಥಪುರದ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.