ಆಯಪ್ಪ ಎದುರು ಸಿಕ್ಕಾಗ ಏನು ಹೇಳಬೇಕೋ ಅದನ್ನು ಹೇಳುತ್ತೇನೆ.. ರಜಾ ವಿರುದ್ಧ ಡಿಕೆಸು - MP DK Suresh
ಸರ್ಕಾರದಲ್ಲಿ ಸಿಎಂ ಇಲ್ಲ, ಗೃಹ ಮಂತ್ರಿಗಳೂ ಕೂಡ ಇಲ್ಲ ಅನ್ನಿಸುತ್ತಿದೆ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸೋದಾಗಿ ಹೇಳಿರುವುದು ಇವರೇ.. ಇಡೀ ಬಿಜೆಪಿಗೆ ಆತಂಕ ಇದೆ. ಇಂತಹವರಿಂದ, ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು. ಅಲ್ಲದೆ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಅನ್ನುವಂತಾಗಿದೆ..
ಬೆಂಗಳೂರು : ಅಕ್ರಮ ಚಟುವಟಿಕೆಗಳನ್ನು ಮುಚ್ಚಿಟ್ಟು ಸರ್ಕಾರ ಅವರನ್ನೇ ರಕ್ಷಣೆ ಮಾಡುತ್ತಿದೆ. ಯುವತಿಯನ್ನು ಡಿಕೆಶಿ ನಿಯಂತ್ರಣ ಮಾಡುತ್ತಿದ್ದಾರೋ, ಎಸ್ಐಟಿ ರಕ್ಷಣೆ ಮಾಡ್ತಿದೆಯೋ ನನಗೆ ಗೊತ್ತಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿದೆ ಮಾತನಾಡಿದ ಅವರು, ಎಸ್ಐಟಿ ಫ್ರೇಮ್ ವರ್ಕ್ ಏನು? ಯುವತಿಯ ಹೇಳಿಕೆ ಮೇಲೆ ಈವರೆಗೆ ವಿಚಾರಣೆಯೇ ನಡೆಯಲಿಲ್ಲ. ಸರ್ಕಾರ ಇಡೀ ಪ್ರಕರಣ ಮುಚ್ಚಿಹಾಕಲು ಡಿಕೆಶಿ ವಿರುದ್ಧ ಆರೋಪ ಮಾಡುತ್ತಿದೆ. ಹೀಗಾಗಿ, ನಾವೂ ಕೂಡ ಯುವತಿಯ ರಕ್ಷಣೆ ಮಾಡಲು ನಿಲ್ಲಬೇಕಾಗುತ್ತದೆ. ಗೃಹ ಸಚಿವರು ಕಾನೂನು ಸುರಕ್ಷತೆಯನ್ನು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ದೂರಿದರು.
ಅವಾಚ್ಯ ಶಬ್ದ ಬಳಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿ ಆಯಪ್ಪ ಎದುರು ಸಿಕ್ಕಾಗ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ಮಾಧ್ಯಮದ ಎದುರು ಹೇಳಲ್ಲ. ಇನ್ನು, ರಮೇಶ್ ಜಾರಕಿಹೊಳಿ ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ, ಬಂದಾಗ ನೋಡೋಣ ಎಂದು ರಮೇಶ್ ಜಾರಕಿಹೋಳಿ ಕನಕಪುರಕ್ಕೆ ಹೋಗಿ ಡಿ ಕೆ ಸಹೋದರರನ್ನು ಸೋಲಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಸರ್ಕಾರದಲ್ಲಿ ಸಿಎಂ ಇಲ್ಲ, ಗೃಹ ಮಂತ್ರಿಗಳೂ ಕೂಡ ಇಲ್ಲ ಅನ್ನಿಸುತ್ತಿದೆ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸೋದಾಗಿ ಹೇಳಿರುವುದು ಇವರೇ.. ಇಡೀ ಬಿಜೆಪಿಗೆ ಆತಂಕ ಇದೆ. ಇಂತಹವರಿಂದ, ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು. ಅಲ್ಲದೆ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಅನ್ನುವಂತಾಗಿದೆ ಎಂದು ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಅವರ ಪಕ್ಷದ ಶಾಸಕರು ಸಿಡಿ ವಿಚಾರವಾಗಿ ಕಿತ್ತಾಡಿದ್ದನ್ನು ನೋಡಿದ್ದೇವೆ. ಇದು ಕಾಂಗ್ರೆಸ್ನವರು ಮಾಡಿದ್ದಲ್ಲ. ಅವರ ಸಪ್ತ ಶಾಸಕರು ಮಾನ ಮುಚ್ಚಿಕೊಳ್ಳೊಕೆ ಕೋರ್ಟ್ ಮೊರೆ ಹೋದವರು. ಎಲ್ಲೋ ಬಿಟ್ಟಿದ್ದ ಮಾನವನ್ನು ಮುಚ್ಕೊಳೋಕೆ ಹೋದವರು ಅವರು. ಇದನ್ನು ಕಾಂಗ್ರೆಸ್ನವರ ಮೇಲೆ ಎತ್ತಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸಿಡಿ ವಿಚಾರದಲ್ಲಿ ಸರ್ಕಾರದ ಪ್ರಾಸ್ತಾವಿಕ ಡ್ರಾಮಾ ನಡೆಯುತ್ತಿದೆ. ಒಬ್ಬ ಮಗಳ ವಯಸ್ಸಿನ ಹೆಣ್ಣು ಮಗಳನ್ನು ಬೆತ್ತಲು ಮಾಡಿದವರ ಬಗ್ಗೆ ಎಲ್ಲೂ ಕೂಡ ಚರ್ಚೆ ಮಾಡುತ್ತಿಲ್ಲ. ಇಂಥವರ ರಕ್ಷಣೆ ಮಾಡುವುದಕ್ಕೆ ರಾಷ್ಟ್ರೀಯ ಪಕ್ಷ ನಿಂತಿರುವುದನ್ನು ನೋಡಿದರೆ ಸಿಡಿಯಿಂದ ನಿಂತಿರುವ ರಾಜ್ಯ ಸರ್ಕಾರ ಹೊರತು ಬೇರೆ ಯಾವುದರ ಮೇಲೂ ನಿಂತಿಲ್ಲ ಎಂದರು.