ETV Bharat / state

ಹೂಡಿಕೆಗೆ ವಿಫುಲ ಅವಕಾಶಗಳಿವೆ, ಪಾಲುದಾರರಾಗಿ ಕೆಲಸ ಮಾಡೋಣ ಬನ್ನಿ: ಮಧ್ಯಪ್ರದೇಶ ಸಿಎಂ ಕರೆ

ಮುಂದಿನ ವರ್ಷ ಜನವರಿ 11,12 ರಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ಇನ್ವೆಸ್ಟ್ ಮಧ್ಯಪ್ರದೇಶ ಬಂಡವಾಳ ಹೂಡಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸುವಂತೆ ಕರ್ನಾಟಕದ ಉದ್ಯಮಿಗಳಿಗೆ ಮಧ್ಯಪ್ರದೇಶದ ಸಿಎಂ ಮನವಿ ಮಾಡಿದರು.

KN_BNG_04
ಬಂಡವಾಳ ಹೂಡಿಕೆ ಬಗ್ಗೆ ಮಧ್ಯಪ್ರದೇಶ ಸಿಎಂ ಹೇಳಿಕೆ
author img

By

Published : Nov 24, 2022, 3:32 PM IST

ಬೆಂಗಳೂರು: ಅತಿ ಹಿಂದುಳಿದ ರಾಜ್ಯವಾಗಿದ್ದ ಮಧ್ಯಪ್ರದೇಶ ಈಗ ಬಂಡವಾಳ ಹೂಡಿಕೆಗೆ ಅತ್ಯುತ್ತಮ ರಾಜ್ಯವಾಗಿದೆ. ನಾವು ನಿಮಗೆ ಅತ್ಯತ್ತಮ ಪಾಲುದಾರರಾಗಿ ಕೆಲಸ ಮಾಡುತ್ತೇವೆ, ಬನ್ನಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ರಾಜ್ಯ ಸರ್ಕಾರದ ಸಹಾಯ-ಸಹಕಾರದ ಬಗ್ಗೆ ಸಿಎಂ ಶಿವರಾಜ ಸಿಂಗ್ ಚೌಹಾಣ್ ಉದ್ಯಮಿಗಳ ಜೊತೆ ನಗರದ ಯಶವಂತಪುರದಲ್ಲಿರುವ ತಾಜ್ ಹೋಟೆಲ್​ನಲ್ಲಿ ಸಂವಾದ ನಡೆಸಿದರು. ಮುಂದಿನ ವರ್ಷ ಜನವರಿ 11, 12 ರಂದು ಎರಡು ದಿನಗಳ ಕಾಲ 'ಇನ್ವೆಸ್ಟ್ ಮಧ್ಯಪ್ರದೇಶ' ಇಂಧೋರ್​ನಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು.

ಸಾಕ್ಷ್ಯಷಿತ್ರದ ಮೂಲಕ ಮಾಹಿತಿ: ಮಧ್ಯಪ್ರದೇಶ ರಾಜ್ಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿ ಆ‌ ರಾಜ್ಯದ ಇತಿಹಾಸ, ಅಭಿವೃದ್ಧಿ, ಹೂಡಿಕೆಗೆ ಇರುವ ಸೌಹಾರ್ದಯುತ ವಾತಾವರಣದ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶ ಸಿಎಂ, ಮಧ್ಯಪ್ರದೇಶದ 8 ಕೋಟಿ ಜನರ ಪರವಾಗಿ ಎಲ್ಲರನ್ನೂ ಸ್ವಾಗತಿಸುತ್ತೇನೆ, ಮೊದಲು ಮಧ್ಯಪ್ರದೇಶ ಅತಿಹಿಂದುಳಿದ ರಾಜ್ಯ ಎಂದು ಟೀಕಿಸುತ್ತಿದ್ದರು. ಆದರೆ, ನಮ್ಮ ಸರ್ಕಾರ ಬಂದ ನಂತರ 3 ಲಕ್ಷ ಕಿಲೋಮಿಟರ್ ಉದ್ದದ ಅತ್ಯುತ್ತಮ ರಸ್ತೆ ನಿರ್ಮಿಸಿದ್ದೇವೆ, ಇಡೀ ರಾಜ್ಯದಲ್ಲಿ ಅತ್ಯುತ್ತಮ ರಸ್ತೆಗಳು ನಿರ್ಮಾಣವಾಗಿವೆ. ಜೊತೆಗೆ ನರ್ಮದಾ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಿಸಿದ್ದೇವೆ. ಮಧ್ಯಪ್ರದೇಶದ ಚಂಬಲ್ ಕಣಿವೆ ಬಗ್ಗೆ ಮುಂಬೈನವರು ಸಿನಿಮಾ ಮೂಲಕ ಗೇಲಿ ಮಾಡುತ್ತಿದ್ದರು. ನಾವು ಅಧಿಕಾರಕ್ಕೆ ಬರುವ ಮೊದಲು ನಮ್ಮ ರಾಜ್ಯವನ್ನು ಎಲ್ಲರೂ ಗೇಲಿ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬದಲಾಗುವಂತೆ ಮಾಡಿದ್ದೇವೆ, ಮಧ್ಯಪ್ರದೇಶದಲ್ಲಿ ಒಂದೊ ಢಾಕುಗಳು ಇರಬೇಕು, ಇಲ್ಲವೇ ಶಿವರಾಜ್ ಸಿಂಗ್ ಇರಬೇಕು ಎಂದು ನಾನು ಹೇಳಿದ್ದೆ. ಅದರಂತೆ ನಾನು ಇದ್ದೇನೆ, ಢಾಕುಗಳನ್ನು ಮಟ್ಟ ಹಾಕಿದ್ದೇನೆ. ಈಗ ಮಧ್ಯಪ್ರದೇಶ ಬಂಡವಾಳ ಹೂಡಿಕೆಗೆ ಅತ್ಯುತ್ತಮ ರಾಜ್ಯವಾಗಿದೆ ಎಂದರು.

ಮಧ್ಯಪ್ರದೆಶದ ಬಾಸುಮತಿ ಅಕ್ಕಿ ಜನಪ್ರಿಯ: ನಮ್ಮ ರಾಜ್ಯದ ಬಾಸುಮತಿ ಅಕ್ಕಿ ಅಮೆರಿಕ, ಇಂಗ್ಲೆಂಡ್​ನಲ್ಲಿ ಅತ್ಯಂತ ಜನಪ್ರಿಯವಾಗಿದೆ. ನಮ್ಮ ಕೊಡುಗೆ ದೇಶಕ್ಕೆ ಮಹತ್ವದ್ದಾಗಿದೆ. ದೆಹಲಿ ಮೆಟ್ರೊ ರೈಲುಗಳು ಮಧ್ಯಪ್ರದೇಶದಲ್ಲಿ ಉತ್ಪನ್ನವಾಗುವ ವಿದ್ಯುತ್ ಮೇಲೆ ಓಡುತ್ತಿವೆ. ದೇಶದ ಜಿಎಸ್ಟಿಗೆ ನಾವು 4.6% ರಷ್ಟು ಕೊಡುಗೆ ಕೊಡುತ್ತಿದ್ದೇವೆ. ನಮ್ಮ ರಾಜ್ಯ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಈಗ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಸಮಯ ಬಂದಿದೆ.

ಹೂಡಿಕೆಗೆ ಬೇಕಾದ ವ್ಯವಸ್ಥೆ ನಮ್ಮಲ್ಲಿದೆ: ಐಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ನಾವು ಅವಕಾಶ, ಉತ್ತೇಜನ ಕೊಡುತ್ತೇವೆ. ದೇಶ ಬದಲಾಗಬೇಕು, ಮಧ್ಯಪ್ರದೇಶ ಬದಲಾಗಬೇಕು. ಅದೆಲ್ಲವನ್ನು ಮಾಡಲು ದೇಶದ ಪ್ರಧಾನಿಗೆ ಸಾಧ್ಯವಿದೆ ಎಂದು ಕಾರ್ಯಕ್ರಮದಲ್ಲಿ ಪ್ರಧಾ‌ನಿ ಮೋದಿ ಅವರನ್ನು ಸಿಎಂ ಚೌಹಾಣ್​​ ಹಾಡಿಹೊಗಳಿದರು. ಬಂಡವಾಳ ಹೂಡಿಕೆಗೆ ಏನೇನು ಬೇಕು ಅದೆಲ್ಲವೂ ಮಧ್ಯಪ್ರದೇಶದಲ್ಲಿದೆ, ಹೂಡಿಕೆ ಮಾಡಲು ಭೂಮಿ ಬೇಕು ಅದು ಇದೆ ಎಂದು ಹೇಳಿದರು.

ಕಾರ್ಖಾನೆಗಳಿಗೆ ನೀರು ಬೇಕು, ನಮ್ಮಲ್ಲಿ ನರ್ಮದಾ ನದಿ‌ ಇದೆ. ನೀರಿನ ಸೌಕರ್ಯ ಬೇಕಾದಷ್ಟಿದೆ, ಬೇಕಾದಷ್ಟು ವಿದ್ಯುತ್ ಉತ್ಪಾದನೆಯಿದೆ. ಬಂಡವಾಳ ಹೂಡಿಕೆಗೆ ಇನ್ನೂ ಏನೇನು ಬೇಕು ಹೇಳಿ, ನಾವು ಎಲ್ಲ ಸೌಕರ್ಯಗಳನ್ನು ಮಾಡಿಕೊಡುತ್ತೇವೆ, ಕಾನೂನು ಸುವ್ಯವಸ್ಥೆ ಅತ್ಯಂತ ಮಜಬೂತಾಗಿದೆ, ಹೂಡಿಕೆ ಮಾಡುವವರಿಗೂ ಲಾಭವೂ ಆಗಬೇಕು. ಹೀಗಾಗಿ ನಾವು ಜೊತೆಯಾಗಿ ಕೆಲಸ ಮಾಡೋಣ ನಾವು ನಿಮಗೆ ಅತ್ಯುತ್ತಮ ಪಾರ್ಟನರ್ ಆಗಿ ಕೆಲಸ ಮಾಡುತ್ತೇವೆ. ಜೊತೆಯಾಗಿ ಕೆಲಸ ಮಾಡುವ ಮೂಲಕ ಮಧ್ಯಪ್ರದೇಶದಿಂದ ದೇಶದ ಅಭಿವೃದ್ಧಿಗೆ ಕೊಡುಗೆ ಕೊಡೋಣ ಎಂದು ಬಂಡವಾಳ ಹೂಡಿಕೆದಾರರಲ್ಲಿ ಮನವಿ ಮಾಡಿದರು. ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಉದ್ಯಮಿಗಳನ್ನು ಸ್ವಾಗತಿಸಿದರು.

ಕೈಗಾರಿಕಾ ನೀತಿ ಹಾಗೂ ಹೂಡಿಕೆ ಪ್ರಚಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೀಶ್ ಸಿಂಗ್ ಮಾತನಾಡಿ, ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿವೆ. ರಾಜ್ಯ ಸರ್ಕಾರ ಹೂಡಿಕೆದಾರರಿಗೆ ಎಲ್ಲ ಸಹಾಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಭಾರತದ ಆತ್ಮನಿರ್ಭರ ನೀತಿಯಂತೆ ನಮ್ಮ ಸಿಎಂ ಕೆಲಸ ಮಾಡುತ್ತಿದ್ದಾರೆ‌, ರಾಜ್ಯದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಾಗರವೇ ಇದೆ. ಹೂಡಿಕೆಯಲ್ಲಿ ಅವಕಾಶಗಳು ಅತ್ಯುತ್ತಮವಾಗಿವೆ ಎಂದರು.

ಇದನ್ನೂ ಓದಿ: ಚುನಾವಣಾ ಅಖಾಡಕ್ಕೆ ಕೇಸರಿ ಪಡೆ ತಾಲೀಮು, ನ.25ರಿಂದ ರಾಜ್ಯ ಪ್ರಶಿಕ್ಷಣ ವರ್ಗ: ನಿರ್ಮಲ್ ಕುಮಾರ್ ಸುರಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.