ಬೆಂಗಳೂರು: ಹೆತ್ತ ಅಮ್ಮನೇ ತನ್ನ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ನಡೆದಿದೆ.
ಪ್ರತಿಮಾ (ತಾಯಿ) ಸಾತ್ವಿಕ್( ಮಗು) ಮೃತರು. ಕೆಲಸಕ್ಕೆ ಹೋಗಿದ್ದ ಪತಿ ಸಂತೋಷ್ ಮನೆಗೆ ಬರುವಷ್ಟರಲ್ಲಿ ಅಮ್ಮ, ಮಗು ಇಬ್ಬರು ಹೆಣವಾಗಿ ಹೋಗಿದ್ದಾರೆ.
ಮೊದಲು ಮಗುವನ್ನ ಕೊಂದಿರುವ ಪ್ರತಿಮಾ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಂಡನಿಂದ ಹೆಂಡತಿಗೆ ಕಿರುಕುಳ ಇತ್ತು, ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇವೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.