ETV Bharat / state

ಬೆಂಗಳೂರಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ.. ಸ್ಕೂಟರ್​ಗೆ ಬಸ್​ ಡಿಕ್ಕಿ- ತಾಯಿ ಮಗಳಿಗೆ ಗಾಯ - ಬೆಂಗಳೂರು ರಸ್ತೆ ಅಪಘಾತ

ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಲಭಾಗಕ್ಕೆ ಸ್ಕೂಟರ್​ ಚಲಾಯಿಸಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ಅಮ್ಮ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

road accident
ಬೆಂಗಳೂರು ರಸ್ತೆ ಅಪಘಾತ
author img

By

Published : Oct 17, 2022, 12:47 PM IST

ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮಹಿಳೆಯೋರ್ವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಮ್ಮ-ಮಗಳು ಸಂಚರಿಸುತ್ತಿದ್ದ ಸ್ಕೂಟರ್​ಗೆ ಕೆಎಸ್​ಆರ್​ಟಿಸಿ ಬಸ್ ಗುದ್ದಿರುವ ಘಟನೆ ಸುಜಾತ ಥಿಯೇಟರ್ ಬಳಿ ಸಂಭವಿಸಿದೆ.

ವಸಂತನಗರದ ನಿವಾಸಿ ಉಮಾ (42), ವನಿತಾ (22) ಗಾಯಗೊಂಡ ತಾಯಿ-ಮಗಳು. ಇಬ್ಬರೂ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಆದ್ರೆ, ಉಮಾ ಅವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಲಭಾಗಕ್ಕೆ ಸ್ಕೂಟರ್​ ಚಲಾಯಿಸಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಗುದ್ದಿದೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಉಮಾ ಕಾಲಿನ ಮೇಲೆ‌ ಬಸ್ ಚಕ್ರ ಹತ್ತಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಗಳೂರು ರಸ್ತೆ ಅಪಘಾತ

ಇದನ್ನೂ ಓದಿ: ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿ: 9 ಮಂದಿಗೆ ಗಾಯ

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಜಮೀರ್ ಎಂಬುವರು ಮಾತನಾಡಿ, ಇಬ್ಬರು ಮಹಿಳೆಯರು ಬೈಕ್​ನಲ್ಲಿ ಬರುತ್ತಿದ್ದರು. ಮುಂದೆ ಗುಂಡಿ ಇರುವ ಕಾರಣ ಆ ಮಹಿಳೆ ಒಮ್ಮೆಲೇ ಬ್ರೇಕ್ ಹಾಕಿ‌ ನಿಲ್ಲಿಸಿದ್ದರು. ಕೂಡಲೇ ನಿಲ್ಲಿಸಿದ್ದರಿಂದ ಸೂಟ್ಕರ್ ಬಿದ್ದಿದೆ. ಹಿಂದೆ ಕೂತಿದ್ದ ಉಮಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಯ ಕಾಲ ಮೇಲೆ ಬಸ್ ಹತ್ತಿದೆ. ಘಟನೆಗೆ ರಸ್ತೆಗುಂಡಿನೇ‌ ಕಾರಣ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.