ETV Bharat / state

ಎಸ್ ಎಂ ಕೃಷ್ಣ ಅವರು ಜಾರಿಗೆ ತಂದ 'ಸ್ತ್ರೀಶಕ್ತಿ'ಗೆ ಬಲ ತುಂಬಿದ್ದು ಮೋಟಮ್ಮ: ಡಿಕೆಶಿ - former minister motamma biopic release program

ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯನ್ನು ಜಾರಿಗೆ ತಂದರು. ಈ ಜವಾಬ್ದಾರಿಯನ್ನು ಮೋಟಮ್ಮ ಅವರು ಸಮರ್ಥವಾಗಿ ನಿಭಾಯಿಸಿದ್ದರು. ಅಂದು ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇನ್ನೂ ಸಮಾಜದಲ್ಲಿ ಆಳವಾಗಿ ಬೇರೂರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

motamma-who-was-enforced-the-sthree-shakti-project-implemented-by-sm-krishna
ಎಸ್ ಎಂ ಕೃಷ್ಣ ಅವರು ಜಾರಿಗೆ ತಂದ ಸ್ತ್ರೀಶಕ್ತಿ ಯೋಜನೆಗೆ ಬಲ ತುಂಬಿದ್ದು ಮೋಟಮ್ಮ: ಡಿಕೆಶಿ
author img

By

Published : Jun 11, 2022, 7:01 PM IST

ಬೆಂಗಳೂರು : ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಜವಾಬ್ದಾರಿಯನ್ನು ಮೋಟಮ್ಮ ಅವರು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಎಸ್ಎಂ ಕೃಷ್ಣ ಅವರು ಜಾರಿಗೆ ತಂದಿದ್ದ ಸ್ತ್ರೀಶಕ್ತಿ ಯೋಜನೆಗೆ ಶಕ್ತಿ ತುಂಬಿದ್ದು ಮಾಜಿ ಸಚಿವೆ ಮೋಟಮ್ಮ- ಡಿಕೆಶಿ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮನವರ ಆತ್ಮಚರಿತ್ರೆ "ಬಿದಿರು ನೀನ್ಯಾರಿಗಲ್ಲದವಳು" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ನಮ್ಮ ಮನೆಯ, ಕುಟುಂಬದ ಹೆಣ್ಣು ಮಗಳ ಕಾರ್ಯಕ್ರಮ ಎಂದು ಭಾವಿಸಿ ಬಂದಿದ್ದೇನೆ ಎಂದರು.

ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯ ಚಿಂತನೆ ಬಂತು. ಈ ಜವಾಬ್ದಾರಿಯನ್ನು ಮೋಟಮ್ಮನವರಿಗೆ ವಹಿಸಲಾಗಿತ್ತು. ಅಂದು ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದೆ. ಸಹಕಾರ ಕ್ಷೇತ್ರವಲ್ಲದೆ ಖಾಸಗೀಯವರೂ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಧರ್ಮಸ್ಥಳ ಗ್ರಾಮೀಣ ಯೋಜನೆಯಲ್ಲೂ ಸ್ತ್ರೀಶಕ್ತಿ ಗುಂಪುಗಳಿವೆ. ಅಂತಹ ಮಹಾನ್ ಯೋಜನೆಯನ್ನು ಎಸ್.ಎಂ.ಕೃಷ್ಣ, ನಾವು, ಮೋಟಮ್ಮ ಎಲ್ಲ ಸೇರಿ ಯಶಸ್ವಿಗೊಳಿಸಿದೆವು ಎಂದು ಹೇಳಿದರು.

ಮೋಟಮ್ಮ ಅವರ ಆತ್ಮಚರಿತ್ರೆ "ಬಿದಿರು ನೀನ್ಯಾರಿಗಲ್ಲದವಳು" : ಮೋಟಮ್ಮ ಅವರ ಆತ್ಮಚರಿತ್ರೆಯ ಹೆಸರು ಬಿದಿರು ನೀನ್ಯಾರಿಗಲ್ಲದವಳು ಎಂದು. ಬಿದಿರು ಕೂಡ ಪ್ರಕೃತಿಯ ಉತ್ತಮ ಕೊಡುಗೆ. ಹಿಂದೆ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಅವರ ಗುರು ಹೇಳಿದರಂತೆ. ನೀನು ಭಾರತದಿಂದ ವಾಪಸ್​ ಬರುತ್ತಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನೀನು ವಾಪಸ್​ ಬರುವಾಗ 5 ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಬರಬೇಕು. ಒಂದು ರಾಮಾಯಣ, ಮಹಾಭಾರತ ಗ್ರಂಥ, ಗಂಗಾ ಜಲ, ಕೃಷ್ಣನ ಕೊಳಲು ಹಾಗೂ ಒಬ್ಬ ತತ್ವಜ್ಞಾನಿಯನ್ನು ಕರೆದುಕೊಂಡು ಬಾ ಎಂದಿದ್ದರು. ಆಗ ನೀನು ಇಡೀ ಭಾರತವನ್ನೇ ಗೆದ್ದು ತಂದಂತೆ ಎಂದು ಹೇಳುತ್ತಾರೆ. ಕೊಳಲು ಬಿದಿರಿನಿಂದ ಮಾಡಿದ್ದು. ಬಿದಿರಿಗೆ ಗೊತ್ತಿರುವುದಿಲ್ಲ, ತಾನು ಕೊಳಲಾಗುತ್ತೇನೆ ಎಂದು. ಕೊಳಲಿಗೂ ಗೊತ್ತಿರುವುದಿಲ್ಲ, ತನ್ನಿಂದ ಇಂಪಾದ ನಾದ ಹೊರಹೊಮ್ಮತ್ತದೆ ಎಂದು. ಆ ನಾದಕ್ಕೂ ಗೊತ್ತಿರುವುದಿಲ್ಲಾ, ತನ್ನಿಂದ ಜನರಿಗೆ ಆನಂದ ಸಿಗುತ್ತದೆ ಎಂದು. ಹಾಗೆ ಮೋಟಮ್ಮನವರಿಗೂ ಗೊತ್ತಿರಲಿಲ್ಲ, ತಾವು ಹೋರಾಟ ಮಾಡಿ, ಸಮಾಜ ಸೇವೆ ಮಾಡಿ, ಶಾಸಕರಾಗಿ, ಮಂತ್ರಿಯಾಗಿ ಈ ಮಟ್ಟಕ್ಕೆ ಬೆಳೆಯುತ್ತೇನೆ ಅನ್ನೋದು. ಮೋಟಮ್ಮನವರ ಜೀವನ ಚರಿತ್ರೆಯ ಹೆಸರು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಮೋಟಮ್ಮ ಅವರ ಮಗಳು ನಯನ ಹೇಳಿದಂತೆ ನಾನು ಅವರ ರಾಜಕೀಯ ಗುರು ಎಂಬ ಮಾತುಗಳನ್ನು ಒಪ್ಪಲು ಸಿದ್ಧನಿಲ್ಲ. ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಸ್ನೇಹದ ನೆನಪು ಸಂಬಂಧದ ಮೂಲ, ಈ ನಾಲ್ಕರ ನೆನಪು ಮನುಷ್ಯತ್ವದ ಮೂಲ. ಹಾಗೆ ನಾವೆಲ್ಲಾ ನಮ್ಮದೇ ಆದ ಪ್ರೀತಿ, ಸ್ನೇಹ, ಸಂಬಂಧದ ಆಧಾರದ ಮೇಲೆ ಬದುಕು ನಡೆಸುತ್ತಿದ್ದೇವೆ. ಈ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು. 1978 ರಲ್ಲೇ ಶಾಸಕರಾದ ತಮ್ಮ ತಾಯಿ ಮೋಟಮ್ಮ ಅವರಿಂದ ಜನರ ಜತೆ ಒಡನಾಡುವ ಬಗೆ, ವರ್ತನೆಯನ್ನು ನಯನ ಕಲಿತಿದ್ದಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಹೀಗಾಗಿ ಅವರಿಗೆ ತಾಯಿಯೇ ಗುರು ಎಂದು ಬಣ್ಣಿಸಿದರು.

ಮಾಜಿ ಸಚಿವೆ ಮೋಟಮ್ಮನವರ ಆತ್ಮಚರಿತ್ರೆ 'ಬಿದಿರು ನೀನ್ಯಾರಿಗಲ್ಲದವಳು' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಓದಿ : ಪಿಎಂ ರೋಜಗಾರ್ ಯೋಜನೆಯಡಿ ಪಡೆದ ಆಟೋಗೆ ಮೋದಿ, ಭಾಗವತ್ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಸಂಕಷ್ಟ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.