ನೆಲಮಂಗಲ : ಹಲವು ಪ್ರಕರಣಗಳಿಗೆ ಬೇಕಿದ್ದ ಮೋಸ್ಟ್ ವಾಂಟೆಡ್ ರೌಡಿಶೀಟರ್ಗಳನ್ನು ಸಿಸಿಬಿ ಮತ್ತು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ವೈಟ್‌ಫೀಲ್ಡ್ ಉಪವಿಭಾಗದ ಮೋಸ್ಟ್ ವಾಂಟೆಡ್ ರೌಡಿ ಶೀಟರ್ಗಳಾದ ರೋಹಿತ್ ಮತ್ತು ಕಾಂತನನ್ನು ತುಮಕೂರು ರಸ್ತೆಯ ನೆಲಮಂಗಲದ ನವಯುಗ ಟೋಲ್ ಬಳಿ ಬಂಧಿಸಲಾಗಿದೆ.
ಈ ರೌಡಿಶೀಟರ್ಗಳು 2016 ಮತ್ತು 2019ರಲ್ಲಿ ಹಾಡಹಗಲೇ ಕೊಲೆಗಳನ್ನು ಮಾಡಿದ್ದರು. ಎರಡು ಕೊಲೆ, ಧಮಕಿ ಮತ್ತು ಹಫ್ತಾ ವಸೂಲಿ ಪ್ರಕರಣಗಳಲ್ಲಿ ಬೇಕಾಗಿದ್ದರು. ಇದೀಗ ಮತ್ತೊಂದು ಅಪರಾಧ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.