ಬೆಂಗಳೂರು: ತಡರಾತ್ರಿವರೆಗೂ ಸುರಿದ ಜೋರು ಮಳೆಯಿಂದಾಗಿ ಆರ್ಆರ್ ನಗರದ ಹೊರವಲಯದಲ್ಲಿ ರಾಜಕಾಲುವೆ ನೀರು ಮನೆ ಹಾಗೂ ದನದ ಕೊಟ್ಟಿಗೆಗೆ ನುಗ್ಗಿದ್ದು 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.
ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ 5 ಹಸು, 6 ಮೇಕೆ, 1 ಎತ್ತು, ಎಮ್ಮೆ, ಕರು ಮೃತಪಟ್ಟಿವೆ. ಇವು ಅಂದಾನಪ್ಪ ಎಂಬುವರಿಗೆ ಸೇರಿದ ಜಾನುವಾರುಗಳಾಗಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಮನೆಯಲ್ಲಿದ್ದ ಸುಮಾರು 30 ಮೂಟೆ ಹಿಂಡಿ, ಬೂಸ ಮಳೆ ನೀರು ಪಾಲಾಗಿದೆ.
ನಗರದ ವರ್ತುಲ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ, ಬಸವನಗುಡಿ, ಯಶವಂತಪುರ, ರಾಜರಾಜೇಶ್ವರಿನಗರ, ಮಹದೇವಪುರ, ಹೆಬ್ಬಾಳ ಸೇರಿ ವಿವಿಧೆಡೆ ಟ್ರಾಫಿಕ್ ಉಂಟಾಗಿತ್ತು. ಅಂಡರ್ಪಾಸ್ನಲ್ಲಿ ನೀರು ನಿಂತ ಪರಿಣಾಮ ವಾಹನಸವಾರರು ಪರದಾಡಬೇಕಾಯಿತು.
ಇದನ್ನೂ ಓದಿ: ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ