ದೇವನಹಳ್ಳಿ(ಬೆಂಗಳೂರು ಗ್ರಾ.): ಗ್ರಾಮೀಣ ಬ್ಯಾಂಕ್ವೊಂದರಲ್ಲಿ ಗ್ರಾಹಕರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ತಮ್ಮ ಜಮೀನು ಮಾರಿ ಅದರಿಂದ ಬಂದ ಹಣವನ್ನ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ನಮ್ಮ ಹಣ ಸೇಫ್ ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ಗೆ ಕನ್ನ ಹಾಕಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣೇಶ್ ಬಾಬು ಹೀಗೆ ಹಣ ಆರ್ಟಿಜಿಎಸ್ ಮಾಡಿ ಪರಾರಿಯಾದ ಆರೋಪಿ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಕರ್ನಾಟಕ ಬ್ಯಾಂಕ್ ಸ್ಥಾಪನೆಯಾಗಿದೆ. ಈ ಭಾಗದ ಗ್ರಾಮೀಣ ಬ್ಯಾಂಕ್ಗೆ ಸಾಕಷ್ಟು ಹಳ್ಳಿಗಳ ಜನರು ಹಾಲು ಮಾರಾಟದ ಹಣದಿಂದ ಹಿಡಿದು, ಕೃಷಿ ಹಣ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ದರೋಡೆ, ಅಡವಿಟ್ಟ ಗ್ರಾಹಕರ ಚಿನ್ನಾಭರಣ ಕಳ್ಳರ ಪಾಲು: ಬ್ಯಾಂಕ್ಗೆ ಮುತ್ತಿಗೆ ಹಾಕಿದ ಗ್ರಾಹಕರು
ಈ ಭಾಗದ ಗ್ರಾಮಗಳ ಕೆಲವರ ಜಮೀನು ಈಗಾಗಲೇ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇದರಿಂದ ಬಂದ ಕೋಟ್ಯಂತರ ರೂ. ಹಣವನ್ನ ಇದೇ ಬ್ಯಾಂಕ್ನಲ್ಲಿ ಜನ ಸ್ಥಿರ ಠೇವಣಿ ಇಟ್ಟಿದ್ದರು. ಈ ಠೇವಣಿಯಲ್ಲಿ ಹಣ ಹೆಚ್ಚು ಇರುವ 6 ಜನರ (ಇಂದ್ರಮ್ಮ, ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್ , ಕಿಶೋರ್, ವೆಂಕಟಪ್ಪ) ಖಾತೆಯಲ್ಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಮ್ಯಾನೇಜರ್ ಗಣೇಶ್ ಬಾಬು 1 ಕೋಟಿ 88 ಲಕ್ಷದ 75 ಸಾವಿರ ಹಣವನ್ನ ಆರ್ಟಿಜಿಎಸ್(ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್) ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ: ಉತ್ತರ ಪ್ರದೇಶದಲ್ಲಿ ಇಬ್ಬರು ಕಳ್ಳರನ್ನು ಸೆರೆಹಿಡಿದ ಪೊಲೀಸರು
ಬ್ಯಾಂಕ್ ಮ್ಯಾನೇಜರ್ ಗಣೇಶ್ ಬಾಬು ಹಾಗೂ ಕಚೇರಿ ಸಹಾಯಕ ಜಿತೇಂದ್ರಕುಮಾರ್ ಶರ್ಮಾ ಇಬ್ಬರು ಸೇರಿಕೊಂಡು ಜೂನ್ 3ರಿಂದ ಜುಲೈ 13 ರವರೆಗೂ ಆರ್ಟಿಜಿಎಸ್ ಮೂಲಕ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿರುವುದು ಬಯಲಾಗಿದೆ. ಯಾವಾಗ ಫಿಕ್ಸೆಡ್ ಡೆಪಾಸಿಟ್ನಲ್ಲಿ ಕೋಟ್ಯಂತರ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ ಎಂದು ಮುಖ್ಯ ಕೇಂದ್ರ ಕಚೇರಿಯ ಅಧಿಕಾರಿ ಆನಂದ್ ಎಂಬುವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಅನ್ವಯ ಬ್ಯಾಂಕ್ ಮ್ಯಾನೇಜರ್ ಹಾಗೂ ಕಚೇರಿ ಸಹಾಯಕನನ್ನ ಕೆಲಸದಿಂದ ಅಮಾನತು ಮಾಡಲಾಗಿದೆ. ಗ್ರಾಹಕರಾದ ಇಂದ್ರಮ್ಮ, ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್ , ಕಿಶೋರ್, ವೆಂಕಟಪ್ಪ ಈ 6 ಜನ ಗ್ರಾಹಕರ 1 ಕೋಟಿ 88 ಲಕ್ಷದ 75 ಸಾವಿರ ಹಣವನ್ನ ಬ್ಯಾಂಕ್ ಯಾವುದೇ ಮೋಸ ಆಗದಂತೆ ಅವರಿಗೆ ಜಮಾ ಮಾಡಲಾಗುತ್ತದೆ ಎಂದು ಬ್ಯಾಂಕ್ನ ನೂತನ ಮ್ಯಾನೇಜರ್ ನವೀನ್ ಕುಮಾರ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಕನ್ನ ಹಾಕಲು ವಿಫಲಯತ್ನ!