ETV Bharat / state

ಬೆಂಗಳೂರು ಹೊರವಲಯಗಳಲ್ಲಿ ಹೆಚ್ಚು ಕೋವಿಡ್​ ಕೇಸ್ ಪತ್ತೆ: ಪಾಲಿಕೆ ಯೋಜನೆ ಏನು?

ಬೆಂಗಳೂರು ಹೊರವಲಯಗಳಲ್ಲಿರುವ ಮಹದೇವಪುರ, ಕೆ.ಆರ್​.ಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ಅತಿಹೆಚ್ಚು ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡುಬರುತ್ತಿದೆ.

Covid cases
Covid cases
author img

By

Published : Aug 13, 2021, 7:13 AM IST

ಬೆಂಗಳೂರು: ನಗರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳ ಪೈಕಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಆ್ಯಕ್ಟಿವ್ ಪ್ರಕರಣಗಳು ಕಂಡುಬಂದಿದ್ದು, 300ಕ್ಕಿಂತ ಅಧಿಕ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಮಹದೇವಪುರ, ಕೆ.ಆರ್​.ಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗು ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ಅತಿಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳಿವೆ. ಸದ್ಯಕ್ಕೆ ನಗರದ ಮಧ್ಯ ಭಾಗದಲ್ಲಿರುವ ಚಾಮರಾಜಪೇಟೆ, ಗಾಂಧಿ ನಗರ, ಚಿಕ್ಕಪೇಟೆ, ವಿಜಯನಗರ, ಪುಲಿಕೇಶಿನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು ಸೇಫ್​ ಝೋನ್​​ನಲ್ಲಿ ಇವೆ.

ಲಸಿಕೆ ವಿತರಣೆ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್

6 ವಿಧಾನಸಭಾ ಕ್ಷೇತ್ರಗಳ ಸಕ್ರಿಯ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ:

  • ಮಹದೇವಪುರ - 455 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 1.09% ಇದೆ.
  • ಕೆ.ಆರ್​.ಪುರ. 376 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.11% ಇದೆ.
  • ಬೊಮ್ಮನಹಳ್ಳಿ - 341 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.90% ಇದೆ.
  • ಬೆಂಗಳೂರು ದಕ್ಷಿಣ - 337 ಸಕ್ರಿಯ ಪ್ರಕರಣಗಳಿದ್ದು, 0.67% ಪಾಸಿಟಿವಿಟಿ ದರವಿದೆ.
  • ರಾಜರಾಜೇಶ್ವರಿ ನಗರ - 332 ಸಕ್ರಿಯ ಪ್ರಕರಣಗಳಿದ್ದು, 0.45% ಪಾಸಿಟಿವಿಟಿ ದರವಿದೆ.
  • ಬ್ಯಾಟರಾಯನಪುರ - 316 ಸಕ್ರಿಯ ಪ್ರಕರಣಗಳಿದ್ದು, 0.91% ಪಾಸಿಟಿವಿಟಿ ದರವಿದೆ.

ಸೇಫ್​ ಝೋನ್​​ನಲ್ಲಿರುವ ಟಾಪ್​​ 6 ವಿಧಾನಸಭಾ ಕ್ಷೇತ್ರಗಳು:

  • ಚಾಮರಾಜಪೇಟೆ - 34 ಸಕ್ರಿಯ ಪ್ರಕರಣಗಳಿದ್ದು, 0.34% ಪಾಸಿಟಿವಿಟಿ ದರವಿದೆ.
  • ಗಾಂಧಿನಗರ - 54 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.60% ಇದೆ.
  • ಚಿಕ್ಕಪೇಟೆ- 66 ಸಕ್ರಿಯ ಪ್ರಕರಣಗಳಿದ್ದು, 0.85% ಪಾಸಿಟಿವಿಟಿ ದರವಿದೆ.
  • ವಿಜಯನಗರ - 80 ಸಕ್ರಿಯ ಪ್ರಕರಣಗಳಿದ್ದು, 0.19% ಪಾಸಿಟಿವಿಟಿ ದರವಿದೆ.
  • ಪುಲಿಕೇಶಿನಗರ - 81 ಸಕ್ರಿಯ ಪ್ರಕರಣಗಳಿದ್ದು, 0.73% ಪಾಸಿಟಿವಿಟಿ ದರವಿದೆ.
  • ರಾಜಾಜಿನಗರ - 82 ಸಕ್ರಿಯ ಪ್ರಕರಣಗಳಿದ್ದು, 0.75%ಪಾಸಿಟಿವಿಟಿ ದರವಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್, 'ಲಸಿಕೆ ವಿತರಣೆ ಪ್ರಮಾಣ ಕುಗ್ಗಿದ್ದು ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್ ಕೇಸ್​ಗಳು ಅಧಿಕವಾಗುತ್ತಿರುವ ಕಡೆ ಹೆಚ್ಚು ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತದೆ. ಸೀರೋ ಸಮೀಕ್ಷೆ ಕೂಡ ಮಾಡಲಾಗಿದೆ. ಮುಂದಿನ ವಾರ ಇದರ ವರದಿ ನೋಡಿಕೊಂಡು, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಇರುವ ಕಡೆ, ಆದ್ಯತೆ ಮೇರೆಗೆ ಲಸಿಕೆ ವಿತರಣೆ ಹೆಚ್ಚು ಮಾಡಲಾಗುವುದು' ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.