ETV Bharat / state

ಕೋವಿಡ್​ ಹಾಟ್​​ಸ್ಪಾಟ್​​ಗಳಾದ ಅಪಾರ್ಟ್ಮೆಂಟ್​ಗಳು: ಬಿಬಿಎಂಪಿ ಹೈ ಅಲರ್ಟ್​​​

ರಾಜಧಾನಿಯಲ್ಲಿ ಹೆಚ್ಚಾಗಿ ಅಪಾರ್ಟ್ಮೆಂಟ್​ ನಿವಾಸಿಗಳಲ್ಲಿ ಕೋವಿಡ್​​ ಕಂಡು ಬರುತ್ತಿದೆ. ಕೆಲಸದ ನಿಮಿತ್ತ ಮಹಾರಾಷ್ಟ್ರ, ಕೇರಳಕ್ಕೆ ಹೋಗುವ ವ್ಯಕ್ತಿಗಳಿಗೆ ಇತರರಿಗೂ ಸೋಂಕು ಹರಡುತ್ತಿದೆ. ಸದ್ಯ ಸೋಂಕು ಕಂಡು ಬಂದ ಸಮುಚ್ಚಯಗಳಲ್ಲಿನ ನಿವಾಸಿಗಳನ್ನು ಕ್ವಾರಂಟೈನ್​ ಮಾಡಲಾಗುತ್ತಿದ್ದು, ಅತಿ ಹೆಚ್ಚು ಬಳಕೆಯ ಸ್ಥಳಗಳಲ್ಲಿ ಸ್ಯಾನಿಟೈಸೇಷನ್​ ಮಾಡಲಾಗುತ್ತಿದೆ.

more-corona-cases-found-in-bangalore-apartments
ಬಿಬಿಎಂಪಿ
author img

By

Published : Aug 5, 2021, 8:58 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಅಪಾರ್ಟ್​​ಮೆಂಟ್​​ಗಳಲ್ಲಿ ಕೋವಿಡ್​​ ಸೋಂಕಿತರ ಹೆಚ್ಚಾಗಿ ಕಂಡು ಬರುತ್ತಿದ್ದು, ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಕ್ಷಣದ ಕ್ರಮಕೈಗೊಳ್ಳುತ್ತಿದ್ದಾರೆ.

ದೊಮ್ಮಲೂರು ಸಮೀಪದ ರಾಂಕಾ ಕಾನ್ನಾರ್ ಅಪಾರ್ಟ್​​​ಮೆಂಟ್ ನಲ್ಲಿ ಒಂದೇ ದಿನ‌ ಐದು ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಶೀಘ್ರ ಕಾರ್ಯಪ್ರವೃತ್ತರಾದ ಪಾಲಿಕೆ ಆರೋಗ್ಯಾಧಿಕಾರಿಗಳ ತಂಡ ಇಡೀ ಅಪಾರ್ಟ್ಮೆಂಟ್​ನ 80 ಜನರ ಸ್ಯಾಂಪಲ್ ಕಲೆಕ್ಟ್ ಮಾಡಿ ಸಿ ಬ್ಲಾಕ್ ನ ಎಲ್ಲ ಜನರನ್ನ ಕ್ವಾರಂಟೈನ್​ಗೂ ಸೂಚಿಸಿದೆ. ಜತೆಗೆ ಅಪಾರ್ಟ್ಮೆಂಟ್ ಕಾಮನ್ ಏರಿಯಾಗೆ ಸಂಪೂರ್ಣ ಸ್ಯಾನಿಟೈಸೇಷನ್ ಸಹ ಮಾಡಲಾಗಿದೆ‌.

ಇತ್ತ ಏಳು ದಿನಗಳ ಹಿಂದೆ ಯಶವಂತಪುರದ ರೆನೆಸ್ಸಾನ್ ಟೆಂಪಲ್ ಬೆಲ್ಸ್​ ಅಪಾರ್ಟ್ಮೆಂಟ್​ನಲ್ಲಿಯೂ ಕೊರೊನಾ ಸೋಂಕಿತರು ಕಂಡು ಬಂದಿದ್ದರು. ಇಂದು ‌153 ಜನರ ಗಂಟಲು ದ್ರವ ಸ್ಯಾಂಪಲ್ ಪಡೆಯಲಾಗಿದೆ. ಜತೆಗೆ ಮುನ್ನಚ್ಚರಿಕೆ ಕ್ರಮವಾಗಿ ಇಡೀ ಅಪಾರ್ಟ್ಮೆಂಟ್​ನ‌ ಸಾಮಾನ್ಯ ಬಳಕೆ ಸ್ಥಳಗಳಾದ ಲಿಫ್ಟ್, ಪಾರ್ಕ್, ಪ್ಲೇ ಏರಿಯಾಗಳಲ್ಲಿ ಔಷಧ ಸಿಂಪಡನೆ ಕೆಲಸ ಮಾಡಲಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.