ETV Bharat / state

ಸದನದಲ್ಲಿ ಪ್ರತಿಧ್ವನಿಸಿದ ಮಂಗನ ಕಾಯಿಲೆ, ಕೊರೊನಾ: ಶ್ರೀರಾಮುಲುಗೆ ಹಾಲಪ್ಪ-ಆರಗ ತರಾಟೆ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಇಂದು ಸದನದಲ್ಲಿ ಕಾಂಗ್ರೆಸ್​ ನಾಯಕರು ಆರೋಗ್ಯ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೊರೊನಾ ಹಾಗೂ ಮಂಗನ ಕಾಯಿಲೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಕೇಳಿದರು. ಈ ಕುರಿತಂತೆ ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು.

Monkey disease and coronavirus issue discussed in session
ಸದನದಲ್ಲೂ ಪ್ರತಿಧ್ವನಿಸಿದ ಮಂಗನ ಕಾಯಿಲೆ, ಕೊರೊನಾ, ತೀವ್ರ ವಾಗ್ವಾದ
author img

By

Published : Mar 16, 2020, 5:09 PM IST

Updated : Mar 16, 2020, 5:23 PM IST

ಬೆಂಗಳೂರು: ಇಂದು ಸದನದಲ್ಲಿ ಮಲೆನಾಡಿನ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆ ಹಾಗೂ ರಾಜ್ಯಾದ್ಯಂತ ಭೀತಿ ಹುಟ್ಟಿಸಿರುವ ಮಾಹಾಮಾರಿ ಕೊರೊನಾ ಕುರಿತಂತೆ ನಾಯಕರು ಗಂಭೀರ ಚರ್ಚೆ ನಡೆಸಿದರು.

ಸದನಲ್ಲಿ ಪ್ರತಿಧ್ವನಿಸಿದ ಕೊರೊನಾ, ಮಂಗನ ಕಾಯಿಲೆ

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆ (ಕೆಎಫ್​​​ಡಿ) ಬಗ್ಗೆ ಆರೋಗ್ಯ ಸಚಿವರು ಸರಿಯಾದ ಮಾಹಿತಿ ಕೊಡಲಿಲ್ಲ. ಅದರಿಂದ ಅಸಮಾಧಾನಗೊಂಡ ಬಿಜೆಪಿ ಶಾಸಕ ಹರತಾಳು ಹಾಲಪ್ಪ, ಟೇಬಲ್​ ಕುಟ್ಟಿ ಧರಣಿ ನಡೆಸುವ ಬೆದರಿಕೆ ಹಾಕಿದರು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಹಾಲಪ್ಪ, ಈವರೆಗೆ ಸಭಾಧ್ಯಕ್ಷರ ಕ್ಷೇತ್ರವೂ ಸೇರಿದಂತೆ ಇತರ ಕಡೆ ನಾಲ್ಕು ಜನರು ಮೃತಪಟ್ಟಿದ್ದಾರೆ‌‌. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಈವರೆಗೆ 445 ಮಂದಿಗೆ ಮಂಗನ ಕಾಯಿಲೆ ಸೋಂಕು ತಗುಲಿದೆ. ಅದರಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದರು. ಆರೋಗ್ಯ ಸಚಿವರ ಹೇಳಿಕೆಗೆ ಆರಗ ಜ್ಞಾನೇಂದ್ರ ಹಾಗೂ ಹಾಲಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ 23 ಸಾವಾಗಿದೆ. ಆದ್ರೆ ಸಚಿವರು 15 ಸಾವು ಎಂದು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಚಿವರಿಗೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳಿಗೂ ಮಂಗನ ಕಾಯಿಲೆ ಬರಬೇಕು ಎಂದು ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರಗಳ ಕಾಡಿನಲ್ಲಿ ವಾಸಿಸುತ್ತಿರುವವರು ನಾಯಿ, ನರಿಗಳಂತೆ ಸಾಯುತ್ತಿದ್ದಾರೆ. ವ್ಯಾಕ್ಸಿನೇಷನ್​​ನಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾದಿಂದ ಮೃತಪಟ್ಟವರಿಗೆ ಕೊಡುವಂತೆ ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೂ 4 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು. ಇದಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರೂ ಧ್ವನಿಗೂಡಿಸಿದರು. ಒಂದೂವರೆ ವರ್ಷದಿಂದ ಹಾಲಪ್ಪ ಪ್ರಶ್ನಿಸುತ್ತಿದ್ದರೂ ಪರಿಹಾರ ಸಿಗದೇ ಇರೋದು ದುರದೃಷ್ಟಕರ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ಹೇಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿನ್ನೆಯೂ ಸಾಗರದಲ್ಲಿ ಸಾವಾಗಿದೆ. ಸಿದ್ದಾಪುರದಲ್ಲಿ ಸತ್ತಿದ್ದಾರೆ‌. ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಔಷಧಿ ಪರಿಣಾಮಕಾರಿಯಾಗಿಲ್ಲ ಎಂದರು. ಈ ವೇಳೆ ಮಾತಾಡಿದ ಹಾಲಪ್ಪ, ನಾನು ಎಷ್ಟು ಸಲ ಅಂತಾ ಅಧಿಕಾರಿಗಳ ಕಚೇರಿಗೆ ಹೋಗೋದು. 23 ಜನ ಸತ್ತಿದ್ದಾರೆ. ಇವರು 15 ಜನ ಎಂದು ಉತ್ತರ ಕೊಟ್ಟರೆ ನಮಗೆ ಹೊಟ್ಟೆ ಉರಿಯಲ್ವಾ? ಮೃತಪಟ್ಟವರ ಕುಟುಂಬ ವರ್ಗದವರು ಏನು ಮಾಡಬೇಕು. ಸರ್ಕಾರ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಹೇಳಿ ಧರಣಿ ಹೂಡುವ ಎಚ್ಚರಿಕೆ ನೀಡಿದರು.

ಮೆಗ್ಗಾನ್ ಆಸ್ಪತ್ರೆ ಸಾವಿನ ಕೂಪ. ಸೋಂಕು ತಗುಲಿದವರನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿದ್ದೇ ಸಾವಿಗೆ ಕಾರಣವಾಯ್ತು. ಮೃತಪಟ್ಟ ನಂತರ ಪೋಸ್ಟ್ ಮಾರ್ಟಂ ಮಾಡುವುದಿರಲಿ ಮೃತದೇಹವನ್ನು ಅವರೇ ಹಾಕಿಕೊಂಡು ಹೋಗಿದ್ದ ಲುಂಗಿಯಲ್ಲಿ‌ ಮುಚ್ಚಿ ಕಳುಹಿಸಿದ್ದಾರೆ. ಆರೋಗ್ಯ ಇಲಾಖೆ ಸತ್ತು ಹೋಗಿದೆ. ಕಳೆದ ವರ್ಷ ಐಸಿಯು ಸಹಿತ ಆ್ಯಂಬುಲೆನ್ಸ್ ನಿಯೋಜಿಸಿದ್ದರು. ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಿದ್ದರು ಎಂದು ಹೇಳಿದರು. ಮಧ್ಯಪ್ರವೇಶಿಸಿದ ಮಾಜಿ ಸಚಿವ ಶಿವಾನಂದ ಪಾಟೀಲ್, ಕಳೆದ ವರ್ಷ ವ್ಯಾಕ್ಸಿನೇಷನ್ ಮಾಡಲಾಗಿತ್ತು. ಈ ಬಾರಿ ಮಾಡಿಲ್ಲ. ಹೊಸ ಪರಿಣಾಮಕಾರಿ ಔಷಧ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಚಿವ ಶ್ರೀರಾಮುಲು ಮಾತನಾಡಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಾಸಕರೊಂದಿಗೆ ಸಭೆ ಮಾಡುತ್ತೇವೆ. ಅಗತ್ಯ ಔಷಧಗಳನ್ನು ಸರಬರಾಜು ಮಾಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ (DHO)ಗೆ ಸೂಚನೆ ನೀಡುತ್ತೇವೆ. ಸಾಗರದಲ್ಲಿ ಲ್ಯಾಬ್ ಮಾಡಲು ಜಮೀನು ಸಿಕ್ಕಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Last Updated : Mar 16, 2020, 5:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.