ಬೆಂಗಳೂರು : ಭಾನುವಾರ ತಡ ರಾತ್ರಿ ಖದೀಮರು ತಮ್ಮ ಕೈ ಚಳಕ ತೋರಿಸಿ ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಘಟನೆ ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಕೆನರಾ ಬ್ಯಾಂಕ್ ಎಟಿಎಂ ಇದ್ದು, ತಡರಾತ್ರಿ ಜನರ ಓಡಾಟವಿಲ್ಲದ ವೇಳೆ, ಎಟಿಎಂಗೆ ನುಗ್ಗಿ ಸಿಸಿಟಿವಿ ಬ್ಲಾಕ್ ಮಾಡಿ ಸುಮಾರು 27 ಲಕ್ಷ ರೂ. ದೋಚಿರುವ ಮಾಹಿತಿ ಸದ್ಯ ಲಭ್ಯವಾಗಿದೆ.
ಇನ್ನು ಇಂದು ಮುಂಜಾನೆ ಎಟಿಎಂ ಬಳಿ ಸಾರ್ವಜನಿಕರು ಬಂದಾಗ ವಿಚಾರ ಗೊತ್ತಾಗಿದ್ದು, ಸದ್ಯ ಜಾಲಹಳ್ಳಿ ಇನ್ಸ್ಪೆಕ್ಟರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆಯಲ್ಲಿ ತೊಡಗಿದೆ.
ಕಳ್ಳರು ಎಟಿಎಂನ್ನ ನೀಟಾಗಿ ಕಟ್‌ಮಾಡಿ ಕಳ್ಳತನ ಮಾಡಿದ್ದಾರೆ. ಇನ್ನು ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗುತ್ತೆ ಎಂದು ಸಿಸಿಟಿವಿ ಸಂಪರ್ಕವನ್ನ ಮೊದಲೇ ಕಟ್ ಮಾಡಿದ್ದಾರೆ. ಸದ್ಯ ಬ್ಯಾಂಕ್ನವರ ಹೇಳಿಕೆ ಹಾಗೂ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಎಟಿಎಂ ಸುತ್ತಾ ಸಿಸಿಟಿವಿಯನ್ನೂ ಪರಿಶೀಲನೆ ನಡೆಸಿದ್ದಾರೆ.