ಬೆಂಗಳೂರು : ರಾಜ್ಯದ ಖಾಸಗಿ ಶಾಲೆಗಳು 1-9ನೇ ತರಗತಿಯ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಶಿಕ್ಷಣ ಸಚಿವರಿಗೆ ಒತ್ತಡ ತರುತ್ತಿದ್ದಾರೆ. ಇದೀಗ ಎರಡನೇ ಅಲೆಯ ಕಾರಣಕ್ಕೆ ಶಾಲೆಗಳ ಶೈಕ್ಷಣಿಕ ವರ್ಷ ಬಂದ್ ಮಾಡಲಾಗಿದೆ.
ಓದಿ: ಥಿಯೇಟರ್ಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಆದೇಶ: ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ಪುನೀತ್
2020-21ನೇ ಸಾಲಿಗೆ 1-9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಹಾಗೂ ಶೈಕ್ಷಣಿಕ ಅವಧಿ ನಿಗದಿಪಡಿಸುವ ಸುತ್ತೋಲೆ ಹೊರಡಿಸುವ ಕುರಿತು ಚರ್ಚೆ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ಸೋಮವಾರ ನಡೆಯುವ ಸಭೆಗೆ ಕರೆಯಲಾಗಿದೆ. ಈ ಸಭೆಗೆ ಶಿಕ್ಷಣ ತಜ್ಞ ಡಾ. ಪಿ ವಿ ನಿರಂಜನಾರಾಧ್ಯ, ಕ್ಯಾಮ್ಸ್ ಸಂಘಟನೆಯ ಪ್ರತಿನಿಧಿ ಶಶಿಕುಮಾರ್, ರುಪ್ಸಾ ಸಂಘಟನೆಯ ಪ್ರತಿನಿಧಿ ಲೋಕೇಶ್ ತಾಳಿಕಟ್ಟೆ, ಹಾಲನೂರು ಲೇಪಾಕ್ಷಿ ಅವರಿಗೆ ಸೂಚಿಸಲಾಗಿದೆ.
ಪರೀಕ್ಷೆ ಜೊತೆಗೆ 2021-22ನೇ ಸಾಲಿಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪುಸ್ತಕ ಖರೀದಿ, ಮುಂಗಡ ಪಾವತಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ
ಕೋರಿಕೆಯಂತೆ ಪಠ್ಯಪುಸ್ತಕ ವಿತರಣೆ ಸೇರಿ ಪೂರಕ ವಿಷಯಗಳ ಕುರಿತು ಚರ್ಚೆ ಮಾಡಲಿದ್ದಾರೆ. ಬಿಸಿಯೂಟ ನೌಕರರ ಬೇಡಿಕೆಗಳಲ್ಲಿ ಈಡೇರಿಸಬಹುದಾದ ಬೇಡಿಕೆಗಳಿಗೆ ಸಂಬಂಧಿಸಿದಂತೆಯೂ ಮಾತುಕತೆ ನಡೆಸಲಿದ್ದಾರೆ.