ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಚಿವ ಅಶ್ವತ್ಥ್ ನಾರಾಯಣ ಚಾಲನೆ ನೀಡಿದರು.
ಪ್ರಮುಖ ಯೋಜನೆಗಳು
ಎಂಟನೇ ತರಗತಿ ವಿದ್ಯಾರ್ಥಿಗಳಿಗೆ 1,000 ಟ್ಯಾಬ್ ವಿತರಣೆ
ಪ್ರೇರಣಾ ಆ್ಯಪ್ ಬಿಡುಗಡೆ
4 ರಿಂದ 7 ನೇ ತರಗತಿವರೆಗೆ ಸ್ಮಾರ್ಟ್ ಬುಕ್ ಬಿಡುಗಡೆ
ಮಲ್ಲೇಶ್ವರಂನ 22 ಶಾಲಾ ಮಕ್ಕಳಿಗೆ 350 ಲ್ಯಾಪ್‌ಟಾಪ್ ವಿತರಣೆ ಮಾಡಿದರು
ಮಕ್ಕಳಿಗೆ ಪಾಠ ಮಾಡಿದಾಗ ಚೆನ್ನಾಗಿ ಅರ್ಥವಾಗಲು ಸ್ಮಾರ್ಟ್ ಬೋರ್ಡ್, ಮಲ್ಟಿ ಮೀಡಿಯಾ ಬಳಕೆ ಅಗತ್ಯ ಎಂದು ಟ್ಯಾಬ್ ಹಂಚಲಾಗಿದೆ. ಐದು ಮಕ್ಕಳಿಗೆ ಒಂದು ಲ್ಯಾಪ್‌ಟಾಪ್ ಬಳಸಿ ಪ್ರಾಜೆಕ್ಟ್‌ಗಳನ್ನು ಮಾಡಲು ಸೂಚಿಸಲಾಗಿದೆ. ಈ ಯೋಜನೆಗಳಿಗೆ ಸಿಎಸ್ಆರ್ ಫಂಡ್ ಮೂಲಕ ವೆಚ್ಚ ಮಾಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರು, ವಿಶ್ವಕ್ಕೆ ನಾಯಕತ್ವ ಕೊಡುತ್ತಿರುವವರು ನಮ್ಮ ಪ್ರಧಾನಿ. ಉತ್ತಮ ಗುಣಮಟ್ಟದ ಶಿಕ್ಷಣದಿಂದಲೇ ಅಮೆರಿಕಾ ಇಷ್ಟು ಎತ್ತರಕ್ಕೆ ಬೆಳೆದಿದೆ.
ಹೀಗಾಗಿ, ಅವರ ಜನ್ಮದಿನಕ್ಕೆ ನಮ್ಮಲ್ಲೂ ಶಿಕ್ಷಣದ ಗುಣಮಟ್ಟ ಉತ್ತಮ ಮಾಡಲು ಸಹಕರಿಸಿ, ಶಿಕ್ಷಣ ಫೌಂಡೇಶನ್, ಎನ್‌ಜಿಒ ಕೈಜೋಡಿಸಿದೆ. ಅಂತಾರಾಷ್ಟ್ರೀಯ ಶಾಲೆಗಳ ಗುಣಮಟ್ಟಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಬೆಳೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ನಾಳೆ ಬಿಜೆಪಿ ಕಾರ್ಯಕಾರಣಿ ಸಭೆ ಆರಂಭ: ಬಿ.ವೈ ವಿಜಯೇಂದ್ರ
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಹಲವು ಸುಧಾರಣೆ ತರಲಾಗುತ್ತಿದೆ. ಅಕ್ಟೋಬರ್ 7ನೇ ತಾರೀಖಿನವರೆಗೂ ಜನ್ಮ ದಿನದ ಸೇವಾಕಾರ್ಯ ನಡೆಯಲಿದೆ ಎಂದರು.