ETV Bharat / state

ಕೋವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ: ಬಿಜೆಪಿ ಎಂಎಲ್​ಸಿ ನಿಯೋಗ ಮನವಿ - ಕೊರೊನಾದಿಂದ ಶಿಕ್ಷಕರ ಸಾವು

ಕೋವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ ಎಂದು ಬಿಜೆಪಿ ಎಂಎಲ್​ಸಿ ನಿಯೋಗ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ.

narayanswamy
narayanswamy
author img

By

Published : May 22, 2021, 7:17 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ 50 ಲಕ್ಷ ರೂ.‌ ಪರಿಹಾರ ನೀಡುವಂತೆ ಬಿಜೆಪಿ ಪರಿಷತ್ ಸದಸ್ಯರ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಚುನಾವಣೆ ವೇಳೆ ಅವರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಕರ್ತವ್ಯದ ವೇಳೆ ಕೋವಿಡ್​ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅಂತಹ ಶಿಕ್ಷಕರಿಗೆ 50 ಲಕ್ಷ ಪರಿಹಾರ ಒದಗಿಸಿ ಎಂದಿದ್ದೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಎಂಎಲ್​ಸಿ ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.

ಖಾಸಗಿ ಶಾಲೆಗಳ ಶಿಕ್ಷಕರಿಗೆ 25 ಸಾವಿರ ಪರಿಹಾರ ನೀಡಬೇಕು. ಕೊರೊನಾ ಸಂದರ್ಭದಲ್ಲಿ ಅವರಿಗೆ ಕೆಲಸವಿಲ್ಲ. ಖಾಸಗಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಬೇಕು. ಕೋವಿಡ್ ನಿಂದ ಮೃತ ಪಟ್ಟ ಶಿಕ್ಷಕರಿಗೆ 50 ಲಕ್ಷ ನೆರವು ನೀಡಬೇಕು ಎಂದು ಮನವಿ ಮಾಡಿರುವುದಾಗಿ ನಿಯೋಗ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.