ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮೇಲ್ಮನೆಯ ಘನತೆ ಹಾಗೂ ಗೌರವವನ್ನು ಹಾಳು ಮಾಡಿದ್ದಾರೆ ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಮೇಲ್ಮನೆ ಸದಸ್ಯರಾಗಿ 40 ವರ್ಷ ಪೂರೈಸಿದ ಹೊರಟ್ಟಿ: ದೇವೇಗೌಡರಿಂದ ಅಭಿನಂದನೆ
ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಭಾಪತಿ ಇದ್ದರೂ ಉಪಸಭಾಪತಿ ಅವರನ್ನು ಕೂರಿಸಿದ್ದಾರೆ. ಸಭಾಪತಿ ಬರುವ ಮಾರ್ಗದ ಬಾಗಿಲನ್ನೇ ಮುಚ್ಚಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಲಿದೆ. ಬಾಗಿಲು ಮುಚ್ಚಿದ್ದೇ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.
ಬಾಗಿಲು ಮುಚ್ಚಿದ್ದನ್ನು ನಮ್ಮವರು ತಪ್ಪಿಸಿದ್ದಾರೆ. ಉಪಸಭಾಪತಿ ಅವರನ್ನು ಕೆಳಗಿಳಿಸಲು ನಮ್ಮ ಸದಸ್ಯರು ಪ್ರಯತ್ನ ಮಾಡಿದರು. ಪೀಠದ ಘನತೆಯನ್ನು ನಮ್ಮ ಸದಸ್ಯರು ಉಳಿಸಿದ್ದಾರೆ ಎಂದರು.