ETV Bharat / state

ಅನರ್ಹರು ನಾಲಾಯಕ್​ ಎಂದು ಕೋರ್ಟ್​ ಹೇಳಿದೆ.. ಕೈ ಎಂಎಲ್‌ಸಿ ಡಿಸೋಜ

ಉಪಚುನಾವನೆ ನಡೆಯುವುದು ಆ ಕ್ಷೇತ್ರದ ಜನಪ್ರತಿನಿಧಿ ವಿಧಿವಶರಾದಾಗ ಇಲ್ಲವೇ ರಾಜಕೀಯ ಬೇಡ ಎಂದು ನಿರ್ಧರಿಸಿದಾಗ. ಆದರೆ, ಒಂದು ಸರ್ಕಾರವನ್ನು ಕೆಡವಿ ಸ್ವಾರ್ಥಕ್ಕಾಗಿ ಹೋದಾಗ ಅಲ್ಲ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅನರ್ಹ ಶಾಸಕರ ವಿರುದ್ಧ ಕುಟುಕಿದ್ದಾರೆ.

mlc Ivan D'Souza press meet in hosakote
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ
author img

By

Published : Nov 29, 2019, 1:24 PM IST

ಹೊಸಕೋಟೆ:ಇತಿಹಾಸದಲ್ಲೇ ಖರೀದಿ ರಾಜಕೀಯ ನಡೆದಿರಲಿಲ್ಲ. ಇಂಥ ಖರೀದಿಗೆ ಹೋದ ಎಂಟಿಬಿ ನಾಗರಾಜ್​ಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ..

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್​​ಗೆ ಮಹಿಳೆಯರು ಸ್ವಾಭಿಮಾನದ ಮತ ಹಾಕುವ ಮೂಲಕ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು. ಸಿದ್ದರಾಮಯ್ಯ ಕೊಟ್ಟ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿಯಾಗಿದೆ. ಅಂತಹ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಎಂಟಿಬಿ ವಿರುದ್ಧ ಹರಿಹಾಯ್ದಿದ್ದಾರೆ.

ಯಾವ ಕಾರಣಕ್ಕೂ ಎಂಟಿಬಿ ನಾಗರಾಜು ಅವರನ್ನು ಗೆಲ್ಲಿಸಬೇಡಿ. ಉಪಚುನಾವಣೆ ನಡಿಯೋದು ಚುನಾಯಿತ ಪ್ರತಿನಿಧಿ ವಿಧಿವಶರಾದಾಗ ಅಥವಾ ರಾಜಕೀಯವೇ ಬೇಡ ಎಂದು ರಾಜೀನಾಮೆ ನೀಡಿದಾಗ ಮಾತ್ರ. ಆದರೆ, ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹೋಗಿರುವುದು ರಾಜ್ಯದ ಜನತೆಗೆ ತಿಳಿದಿದೆ. 15 ಅನರ್ಹ ಶಾಸಕರನ್ನು ಸೋಲಿಸಿ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವ ನಾಗರಾಜ್‌ಗೆ ಮತದಾರರೇ ಬುದ್ಧಿ ಕಲಿಸುತ್ತಾರೆ ಎಂದರು.

Intro:ಹೊಸಕೋಟೆ :

ಎಂಟಿಬಿ ನಾಗರಾಜ್ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ ವಿಧಾನಪರಿಷತ್ ಸದಸ್ಯ
ಐವಾನ್ ಡಿಸೋಜ.

ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರನ್ನು ಮತ ಕೇಳುವ ನೈತಿಕತೆ ಎಂಟಿಬಿ ನಾಗರಾಜು ಅವರಿಗೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.ಅವರು ಹೊಸಕೋಟೆ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕ ಗೋಷ್ಠಿಯಲ್ಲಿ ಉದ್ದೆಶಿಸಿ ಮತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಜೋತೆಗಿದ್ದಾರೆ. ನಮಗೆ ಸ್ವತಂತ್ರ ಅಭ್ಯರ್ಥಿ ಎದುರಾಳಿ ಒರೆತು ಎಂಟಿಬಿ ನಾಗರಾಜು ಅಲ್ಲ ಅವರು ಮೂರನೇ ಸ್ಥಾನಕ್ಕೆ ಹೋಗಲಿದ್ದಾರೆ. ಹಣ ಕೊಟ್ಟು ಮತ ಪಡೆಯುವೆ ಮತ್ತು ಉಂಗುರ ಕೊಟ್ಟು ಓಟು ಪಡಿಯುವೆ ಎಂದು ಹೇಳಿದ್ದಾರೆಹೊಸಕೋಟೆ ಕ್ಷೆತ್ರದ
ಮತದಾರರು ಸ್ವಾ.ಭಿಮಾನಿಗಳು ಇವರ ಆಮಿಷಗಳಿಗೆ ಜನ‌ ಯಾಮರುವುದಿಲ್ಲ ಎಂದರು.Body:ಹಿಂದೆ ಸಿದ್ದರಾಮಯ್ಯ ಕೊಟ್ಟ ಅನುದಾನದಿಂದ ಅವರು ತಾಲ್ಲೂಕು ಅಭಿವೃದ್ಧಿ ಮಾಡಿದ್ದು. ಎಂಟಿಬಿ ಅನ್ನೊ ಹೆಸರನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ.ಎದೆ ಬಗೆದರೆ ಸಿದ್ದರಾಮಣ್ಣ ಅನ್ನುತ್ತಿದ್ದ ಎಂಟಿಬಿ ಈಗ ಎಡಿಯೂರಪ್ಪನನ್ನು ಇಟ್ಟುಕೊಂಡಿದ್ದಾರೆ. ಹಾಗಾಗ ಎದೆ ಸೀಳುತ್ತಾ ಹೋದರೆ ನೀಮ್ಮ ಪ್ರಾಣಕ್ಕೆ ಹಾನಿ ಆಗಬಹುದು. ಯಕೆಂದರೆ ಎಚ್ಟು ಸಾರಿ ಎದೆ ಬಗೆಯುತ್ತಿರಿ ಎಂದು ವೆಂಗ್ಯ ಮಾಡಿದರು.
ಹೊಸಕೋಟೆ ತಾಲ್ಲೂಕಿನ ಜನರು ಯಾವತ್ತು ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವುದಿಲ್ಲ.
ನಮ್ಮನ್ನು ಸರ್ವೊಚ್ಚ ನ್ಯಾಯಾಲಯ ಅನರ್ಹ ನಾಲಾಯಕ್ ಎಂದು ಹೇಳಿದೆ ಆದರೂ ಜನರ ಮುಂದೆ ಹೋಗಲು ನ್ಯಾಯಾಲಯ ಹೇಳಿದೆ.
ಈಗ ಮತದಾರರಾದ ನೀವುಗಳು ಅನರ್ಹ ಮಾಡಿ ಮನೆಗೆ ಕಳುಹಿಸಬೇಕು. ಯಡಿಯೂರಪ್ಪ ಯಾವತ್ತು ಮುಂದಿನ ಬಾಗಿಲಿಂದ ಅಧಿಕಾರ ಮಾಡಿಲ್ಲ ಹಿಂದಿನ ಬಾಗಿಲು ಮೂಲಕ ಅಧಿಕಾರ ಮಾಡಿರೋದು ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಆಪರೇಷನ್ ಕಮಲದ ಮೂಲಕ ಎಂದರು.
Conclusion:

ಯಾವ ಕಾರಣಕ್ಕೂ ಎಂಟಿಬಿ ನಾಗರಾಜು ಅವರನ್ನು ಗೆಲ್ಲಿಸಬೇಡಿ.ಉಪ ಚುನಾವಣೆ ನಡಿಯೋದು ಯಾವಾಗ ಎಂದರೆ ಚುನಾಹಿತ ಪ್ರತಿನಿಧಿ ಸತ್ತರೆ ಅಥವಾ ರಾಜಕೀಯವೇ ಬೇಡ ಅಂತ ರಾಜಿನಾಮೇ ನೀಡಿದಾಗ ಮಾತ್ರ ಉಪಚುನಾವಣೆ ನಡೆಯುವುದು.ಆದರೆ ಸಮ್ಮಿಶ್ರ ಸರ್ಕಾರವನ್ನು ಬಿಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹೋಗಿರುವುದು ರಾಜ್ಯದ ಜನತೆಗೆ ತಿಳಿದಿದೆ. ೧೫ ಅನರ್ಹ ಶಾಸಕರನ್ನು ಸೋಲಿಸಿ ಮುಂದೆ ನಮ್ಮ ಪಕ್ಷ ಅಧಿಕರಕ್ಕೆ ಬರಲಿದೆ .ಮಹಿಳೆಯರ ಬಗ್ಗೆ ಅಗುರವಾಗಿ ಮತನಾಡಿರುವ ನಾಗರಾಜ್‌ಗೆ ಮತದಾರರೆ ಮುಂದಿನ‌ ದಿನಗಳಲ್ಲಿ ತಕ್ಕ ಪಾಠ ಕಳಿಸುಳಿಸುತ್ತಾರೆ,
ಹಣ ಮತ್ತು ಉಂಗುರ ಹಂಚುತ್ತಿರವುರ ವಿರುದ್ಧ ಚುನಾವಣೆ ಆಯೋಗಕ್ಕೆ ಪಕ್ಷದ ವತಿಯಿಂದ ದೂರನ್ನು ನೀಡಲಾಗಿದೆ ಎಂದು ಡಿಸೋಜಾ ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.