ETV Bharat / state

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: ಮಧ್ಯಾಹ್ನದ ನಂತರ ಬಿರುಸು ಪಡೆದ ಮತದಾನ - Etv Bharat Breaking News

ಮತದಾನ ಕೇಂದ್ರದ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ಹಾಗೂ ಥರ್ಮಲ್ ತಪಾಸಣೆ ನಡೆಸಿಯೇ ಮತದಾರರನ್ನು ಮತ ಕೇಂದ್ರದ ಒಳಗೆ ಬಿಡಲಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಶಿಕ್ಷಕರು ಸಹ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗಾಗಲೇ ಉತ್ತಮ ಮತದಾನ ಆಗಿರುವ ಹಿನ್ನೆಲೆ ಸಂಜೆಯ ಹೊತ್ತಿಗೆ ಒಟ್ಟಾರೆ ಮತದಾನ ಶೇ.70ರವರೆಗು ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.

MLC election; Voting can be reached up to 70% in Bangaluru
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಕ್ರಿಯೆ
author img

By

Published : Oct 28, 2020, 3:53 PM IST

Updated : Oct 28, 2020, 4:19 PM IST

ಬೆಂಗಳೂರು: ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಮಧ್ಯಾಹ್ನದ ನಂತರ ಒಂದಿಷ್ಟು ಬಿರುಸುಗೊಂಡಿದೆ. ಬೆಂಗಳೂರು ನಗರ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22,000 ಮತದಾರರಿದ್ದು ಬೆಳಗ್ಗೆ ಅತ್ಯಂತ ನೀರಸವಾಗಿ ನಡೆದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ನಂತರ ಕೊಂಚ ಬಿರುಸುಗೊಂಡಿದೆ.

MLC election; Voting can be reached up to 70% in Bangaluru
ಮಧ್ಯಾಹ್ನದ ನಂತರ ಬಿರುಸು ಪಡೆದ ಮತದಾನ

ಒಟ್ಟು 69 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಶಿಕ್ಷಕರು ಮತದಾನ ಕೇಂದ್ರಕ್ಕೆ ಆಗಮಿಸುವಲ್ಲಿ ಉತ್ಸಾಹ ತೋರುತ್ತಿದ್ದಾರೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಉಸ್ತುವಾರಿ ಹಾಗು ಚುನಾವಣಾ ಆಯೋಗದ ವಿಶೇಷ ನಿಗಾದಡಿ ಮತದಾನ ನಡೆಯುತ್ತಿದೆ. ಬಿಬಿಎಂಪಿ ಸಿಬ್ಬಂದಿ ಜೊತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಹಾಗೂ ಸುಗಮ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಗಿದೆ.

ಕೋವಿಡ್ ಮುನ್ನೆಚ್ಚರಿಕೆ:

ಮಧ್ಯಾಹ್ನದ ಹೊತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮತದಾನಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಉದ್ದನೆ ಸರದಿ ಸಾಲು ಕಂಡುಬಂತು. ಪ್ರಾಶಸ್ತ್ಯದ ಆಧಾರದಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುವುದು ಅನಿವಾರ್ಯವಾಗಿದ್ದು ಮತದಾನ ಪ್ರಕ್ರಿಯೆ ನಿಧಾನವಾಗಿ ಸಾಗಿದೆ. ಈ ಕಾರಣಕ್ಕೂ ಸಾಕಷ್ಟು ಶಿಕ್ಷಕರು ಸರದಿ ಸಾಲಲ್ಲಿ ನಿಂತು ಕಾಯುವ ಸ್ಥಿತಿ ಎದುರಾಗಿದೆ. ಕೋವಿಡ್ ಮುನ್ನೆಚರಿಕೆ ಕೈಗೊಳ್ಳುವ ಸಲುವಾಗಿಯೂ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿರುವುದನ್ನು ಪೊಲೀಸರು ನಿರಂತರವಾಗಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ಹಾಗೂ ಥರ್ಮಲ್ ತಪಾಸಣೆ ನಡೆಸಿಯೇ ಮತದಾರರನ್ನು ಮತ ಕೇಂದ್ರದ ಒಳಗೆ ಬಿಡಲಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಶಿಕ್ಷಕರು ಸಹ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗಾಗಲೇ ಉತ್ತಮ ಮತದಾನ ಆಗಿರುವ ಹಿನ್ನೆಲೆ ಸಂಜೆಯ ಹೊತ್ತಿಗೆ ಒಟ್ಟಾರೆ ಮತದಾನ ಶೇ.70ರವರೆಗೂ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಆಯ್ಕೆ ಬಯಸಿದ್ದಾರೆ. ಕಳೆದ ಎರಡು ಸಾರಿ ಜೆಡಿಎಸ್​ನಿಂದ ಗೆಲುವು ಸಾಧಿಸಿದ್ದ ಅವರು ಈ ಸಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ. ಇವರಿಗೆ ಕಾಂಗ್ರೆಸ್​​ನಿಂದ ಪ್ರವೀಣ್ ಪೀಟರ್ ಹಾಗೂ ಜೆಡಿಎಸ್​​ನಿಂದ ಎಪಿ ರಂಗನಾಥ್ ಅಭ್ಯರ್ಥಿಗಳಾಗಿ ಸ್ಪರ್ಧೆ ಒಡ್ಡಿದ್ದಾರೆ.

Last Updated : Oct 28, 2020, 4:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.