ETV Bharat / state

ನರಹೇಡಿ ನಾಯಕರ ಆಡಳಿತ ದೇಶದ ದುರಂತ.. ಕೇಂದ್ರ ಸಚಿವರನ್ನು 'ಚಿಯರ್ ಲೀಡರ್ಸ್' ಎಂದ ಬಿ ಕೆ ಹರಿಪ್ರಸಾದ್..

author img

By

Published : Aug 17, 2021, 9:16 PM IST

ರಾಜ್ಯ ವಿಧಾನಸಭೆ ಸಭಾಧ್ಯಕ್ಷರು ಕೂಡ ರಾಜ್ಯಸಭೆ ಬೆಳವಣಿಗೆ ತಲೆತಗ್ಗಿಸುವಂತಹದ್ದು ಎಂದು ಹೇಳಿದ್ದಾರೆ. ಅವರಲ್ಲಿ ನಾನು ಹೇಳುವುದು ಒಂದೇ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸ್ ಕಮಿಷನರ್ ಅವರೇ ವಿಧಾನಸಭೆ ಒಳಗೆ ಬಂದಿದ್ದಾರೆ. ಅದು ಇತಿಹಾಸದಲ್ಲೇ ಆಗಿರಲಿಲ್ಲ. ಅದೇ ರೀತಿ ಕೇಂದ್ರ ದೇಶದಲ್ಲಿ ಮಾರ್ಷಲ್ ಆಡಳಿತ ತರಲು ಮುಂದಾಗಿದ್ದಾರಾ? ಇದು ದೇಶದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆಯಾಗಲಿದೆ..

Member of Legislative Council BK Hariprasad on Union ministers
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಲೋಕಸಭೆ ಹಾಗೂ ರಾಜ್ಯಸಭೆ ಸದನವನ್ನು ಸರ್ಕಾರ ಹೇಗೆ ನಡೆಸಿದೆ ಎಂದು ದೇಶದ ಜನ ನೋಡಿದ್ದಾರೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ತಮಗೆ ಬೇಕಾದ ಕಾನೂನು ತರಲು ಸದನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನ್ಯೂನ್ಯತೆ, ತಪ್ಪುಗಳನ್ನು ಗಮನಕ್ಕೆ ತರುವುದು ಪ್ರತಿಪಕ್ಷದ ಜವಾಬ್ದಾರಿ. ಪ್ರತಿಪಕ್ಷದವರ ಹೇಳಿಕೆ, ಅನಿಸಿಕೆಗಳಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತಿಲ್ಲ.

ಜನಸಾಮಾನ್ಯರಿಗೆ ಸರ್ಕಾರ ಹಾಗೂ ಪ್ರಧಾನಿಗಳು ಯಾವುದೇ ಕಾರ್ಯಕ್ರಮ ತೆಗೆದುಕೊಂಡರೂ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಬೇಕು. ಆದರೆ, ಕಳೆದ 7 ವರ್ಷಗಳಲ್ಲಿ 56 ಇಂಚಿನ ಎದೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೂ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುವ ಎದೆಗಾರಿಕೆ ಪ್ರದರ್ಶಿಸಿಲ್ಲ ಎಂದಿದ್ದಾರೆ.

ಚಿಯರ್ ಲೀಡರ್ಸ್​ಗಳಂತೆ ಇದ್ದಾರೆ : ಕೇಂದ್ರದಲ್ಲಿ ನಾಲ್ವರು ಸಚಿವರು ಬಿಟ್ಟರೆ ಇನ್ಯಾರು ಕೂಡ ಮಾತನಾಡುವುದಿಲ್ಲ. ಉಳಿದವರು ಚಿಯರ್ ಲೀಡರ್ಸ್​ಗಳಂತೆ ಇದ್ದಾರೆ. ಈ ಸರ್ಕಾರಕ್ಕೆ 2 ವರ್ಷವಾಗಿದೆ. ಮೋದಿ, ಅಮಿತ್ ಶಾ, ಗಡ್ಕರಿ, ರಾಜನಾಥ್ ಸಿಂಗ್ ಅವರನ್ನು ಬಿಟ್ಟರೆ ಉಳಿದ ಯಾವುದೇ ಸಚಿವರು ತಮ್ಮ ಸಚಿವಾಲಯದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಸರ್ಕಾರಿ ದೂರದರ್ಶನ ಎಂಬುದು ದುಷ್ಟರ ದರ್ಶನವಾಗಿದೆ. ಜನರ ಸಂಕಷ್ಟಗಳಿಗೆ ಧ್ವನಿಯಾಗಬೇಕಿದ್ದ ದೂರದರ್ಶನ ಕೇವಲ ದುಷ್ಟರನ್ನೇ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ : ರಂದೀಪ್‌ ಸಿಂಗ್ ಸುರ್ಜೇವಾಲಾ ಆಕ್ರೋಶ

ಯುಪಿಎ ಅವಧಿಯಲ್ಲಿ ಯಾವುದೇ ಮಸೂದೆ ಚರ್ಚೆಗೆ ಬಂದರೆ ಅದನ್ನು ಸಂಸದೀಯ ಸಮಿತಿ, ಜಂಟಿ ಸಮಿತಿಗಳಿಗೆ ವರ್ಗಾವಣೆ ಮಾಡಿ ವಿಸ್ತೃತವಾಗಿ ಪರಿಷ್ಕರಿಸಲಾಗುತ್ತಿತ್ತು. ಯುಪಿಎ1 ಅವಧಿಯಲ್ಲಿ ಶೇ.71ರಷ್ಟು ಮಸೂದೆ ಈ ಸಮಿತಿಗಳ ಚರ್ಚೆಗೆ ರವಾನೆಯಾಗಿತ್ತು. ಯುಪಿಎ2ರಲ್ಲಿ ಇದು ಶೇ.69ರಷ್ಟಿತ್ತು. ಎನ್‌ಡಿಎ1 ಅವಧಿಯಲ್ಲಿ ಅದು ಶೇ.21ಕ್ಕೆ ಕುಸಿಯಿತು. ಈಗ ಎರಡನೇ ಅವಧಿಯಲ್ಲಿ ಶೇ.14ಕ್ಕೆ ಕುಸಿದಿದೆ. ಹೀಗಾಗಿ, ಸಂಸದರು ಬೇರೆ ವಿಧಿ ಇಲ್ಲದೇ ಪ್ರತಿಭಟನೆಗಿಳಿದಿದ್ದಾರೆ ಎಂದಿದ್ದಾರೆ.

ಸತ್ತವರ ದುಃಖಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ? : ಕಳೆದ ಎಂಟು ತಿಂಗಳಿಂದ ಪ್ರತಿಭಟನೆ ಮಾಡುತ್ತಾ 500ಕ್ಕೂ ಹೆಚ್ಚು ರೈತರು ಪ್ರಾಣತ್ಯಾಗ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಹಾಗೂ ದೇಶದಲ್ಲಿ ಲಕ್ಷಾಂತರ ಜನ ಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸದನದಲ್ಲಿ ಇವರಿಗೆ ಸಂತಾಪ ಸೂಚಿಸಿಲ್ಲ.

ದೇಶದ ಎಲ್ಲ ಕಡೆಗಳಲ್ಲಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳುತ್ತಾ ಪ್ರಚಾರ ನೀಡಲಾಗುತ್ತಿದೆ. ಯಾವ ಕಾರಣಕ್ಕೆ ಅವರಿಗೆ ಧನ್ಯವಾದ ತಿಳಿಸಬೇಕು? ಅವರು ಆಕ್ಸಿಜನ್ ಕೊಟ್ಟರೆ? ಲಸಿಕೆ ಕೊಟ್ಟಿದ್ದಾರಾ? ಬೆಡ್ ಕೊಟ್ಟಿದ್ದಾರಾ? ಸತ್ತವರ ದುಃಖಕ್ಕೆ ಯಾರು ಕಾರಣ? ನರೇಂದ್ರ ಮೋದಿ ಅವರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್​​ 23ರಿಂದ ಶಾಲಾ-ಕಾಲೇಜು ಪ್ರಾರಂಭ : ಎಸ್​ಒಪಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

ಕೋವಿಡ್ ಸಮಯದಲ್ಲಿ ಹಪ್ಪಳ ತಿನ್ನಿ, ಸಗಣಿ ಬಳಿದುಕೊಳ್ಳಿ ಎಂದು ಹೇಳುವ ಕೇಂದ್ರದ ಸಚಿವರು ಇಂದು ಪ್ರತಿಪಕ್ಷದ ಸಂಸದರ ವಿರುದ್ಧ ದೂರು ಕೊಡುತ್ತಿದ್ದಾರೆ. ಸಂದನದಲ್ಲಿ ಕಾಗದ ಹರಿದರು ಎಂದು ಕಣ್ಣೀರು ಹಾಕುತ್ತಿರುವವರು, ದೇಶದಲ್ಲಿ ರೈತರು ಪ್ರತಿಭಟನೆ ಮಾಡುತ್ತಾ, ಕೋವಿಡ್ ಸೋಂಕಿನಿಂದ ಸಾಯುತ್ತಿರುವಾಗ ಕಣ್ಣೀರು ಯಾಕೆ ಬರಲಿಲ್ಲ? ಇವರಿಗೆ ಸದನ ನಡೆಸಲು ಬರುತ್ತಿಲ್ಲ.

ಆಡಳಿತ ಪಕ್ಷದ ಮೂಲ ಜವಾಬ್ದಾರಿ ಸದನ ನಡೆಸುವುದು. ಜನರ ವಿಚಾರವನ್ನು ನಾವು ನಿಮ್ಮ ಮುಂದೆ ಇಡುತ್ತೇವೆ. ಅದನ್ನು ಜಾರಿಗೊಳಿಸುವುದು ನಿಮಗೆ ಬಿಟ್ಟದ್ದು. ಆದರೆ, ನೀವು ಚರ್ಚೆಗೆ ಅವಕಾಶ ಮಾಡಿಕೊಡದೆ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಸದನದ ಗೌರವ ಹಾಳು ಮಾಡಿರುವ ಶ್ರೇಯಸ್ಸು ಮೋದಿ ಅವರಿಗೆ ಸಲ್ಲುತ್ತದೆ : ಸದನದ ಗೌರವ ಹಾಳು ಮಾಡಿರುವ ಕೀರ್ತಿ, ಶ್ರೇಯಸ್ಸು ಮೋದಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ಯಾವುದೇ ಪ್ರಧಾನಿ ಸದನವನ್ನು ಈ ರೀತಿಯಾಗಿ ಕಡೆಗಣಿಸಿಲ್ಲ. ಮಸೂದೆ ಹಾಗೂ ಕಾಯ್ದೆಗಳನ್ನು ಆತುರದಲ್ಲಿ ಅಂಗೀಕರಿಸಬೇಡಿ. ಅವುಗಳ ಬಗ್ಗೆ ವಿಸ್ತೃತ ಚರ್ಚೆ ಮಾಡಿ ಎಂದು ಮುಖ್ಯನಾಯಾಧೀಶರು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆಯಲ್ಲಿ ವಿಶೇಷತೆ ಏನೂ ಇಲ್ಲ. ನೀರಲ್ಲಿ ಬೆಟ್ಟು ಅದ್ದಿ, ಬಾಯಲ್ಲಿಟ್ಟುಕೊಂಡಂತಾಗಿದೆ. ಇದರಲ್ಲಿನ ತೊಡಕಿನ ಬಗ್ಗೆ ನಾನು ರಾಜ್ಯಸಭೆ ಸದಸ್ಯನಾಗಿದ್ದಾಗಲೇ ಪ್ರಶ್ನಿಸಿದ್ದೆ, ಆಗ ಮಾತು ಕೇಳದವರು ಈಗ ಮುಖ್ಯನಾಯಾಧೀಶರು ಹೇಳಿದಾಗ ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಹಿಂದುಳಿದ ವರ್ಗದವರಿಗೆ ಸಿಗಬೇಕಾದ ನ್ಯಾಯಸಮ್ಮತ ಅಂಶಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.

ಬುದ್ಧಿ ಮಾತು ಹೇಳಬಹುದಿತ್ತು : ಹಿರಿಯ ನಾಯಕರಾದ ಶರದ್ ಪವಾರ್ ಹಾಗೂ ದೇವೇಗೌಡರು ರೈತರ ಪರ ಮಾತನಾಡುವವರು. ಇವರು ಇಬ್ಬರೂ ಸದನ ನಡೆಸುವಂತೆ ಬುದ್ಧಿ ಮಾತು ಹೇಳಬಹುದಿತ್ತು. ಆ ಸರ್ಕಾರ ಅವರ ಮಾತನ್ನು ಕೇಳಿರಲಿಕ್ಕಿಲ್ಲ. ಈ ಎಲ್ಲ ಬೆಳವಣಿಗೆ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇಶದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಜನ ಮೋದಿ ಅವರಿಗೆ ಬುದ್ಧಿ ಕಲಿಸುತ್ತಿದ್ದಾರೆ. ಮೋದಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಸಭಾಧ್ಯಕ್ಷರು ಕೂಡ ರಾಜ್ಯಸಭೆ ಬೆಳವಣಿಗೆ ತಲೆತಗ್ಗಿಸುವಂತಹದ್ದು ಎಂದು ಹೇಳಿದ್ದಾರೆ. ಅವರಲ್ಲಿ ನಾನು ಹೇಳುವುದು ಒಂದೇ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸ್ ಕಮಿಷನರ್ ಅವರೇ ವಿಧಾನಸಭೆ ಒಳಗೆ ಬಂದಿದ್ದಾರೆ. ಅದು ಇತಿಹಾಸದಲ್ಲೇ ಆಗಿರಲಿಲ್ಲ. ಅದೇ ರೀತಿ ಕೇಂದ್ರ ದೇಶದಲ್ಲಿ ಮಾರ್ಷಲ್ ಆಡಳಿತ ತರಲು ಮುಂದಾಗಿದ್ದಾರಾ? ಇದು ದೇಶದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆಯಾಗಲಿದೆ ಎಂದಿದ್ದಾರೆ.

ನರಹೇಡಿ ನಾಯಕರು ಆಡಳಿತ ನಡೆಸುತ್ತಿರುವುದು ದೇಶದ ದುರಂತ : ನಾಲ್ಕು ವಾರಗಳ ಕಾಲ ನಡೆದ ಸದನದಲ್ಲಿ ಗೃಹಸಚಿವ ಅಮಿತ್ ಶಾ ಹಾಗೂ ಮೋದಿ ಅವರು ಪೆಗಾಸಿಸ್ ಬಗ್ಗೆ ಚರ್ಚೆ ಮಾಡಲು ಆಗಮಿಸಲಿಲ್ಲ. ಇಂತಹ ಹೇಡಿಗಳು ದೇಶದ ಅಧಿಕಾರವನ್ನು ಹಿಡಿದಿರಲಿಲ್ಲ. ಒಂದು ಕಡೆ ಮೋಹನ್ ಭಾಗವತ್ ಅವರೇ ಚೀನಾ, ನಮ್ಮ ಪ್ರದೇಶ ಅತಿಕ್ರಮಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಚರ್ಚೆ ಇಲ್ಲ. ಮತ್ತೊಂದು ಕಡೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಿಲ್ಲ. ಈ ರೀತಿ ನರಹೇಡಿ ನಾಯಕರು ಆಡಳಿತ ನಡೆಸುತ್ತಿರುವುದು ದೇಶದ ದುರಂತ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಖ್ಯಾತ ಸಾಹಿತಿ, ಸ್ತ್ರೀ ರೋಗ ತಜ್ಞೆ ಡಾ. ಗಿರಿಜಮ್ಮ ವಿಧಿವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.