ETV Bharat / state

ಶಾಸಕರಾದ ರವಿಸುಬ್ರಮಣ್ಯ, ಎಸ್.ರಘುಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನ ನೀಡಿ ಸರ್ಕಾರದ ಆದೇಶ..

author img

By

Published : Jan 18, 2023, 9:01 PM IST

ಬಸವನಗುಡಿ ಶಾಸಕ ಎಲ್.ಎ ರವಿಸುಬ್ರಮಣ್ಯ ಮತ್ತು ಸಿವಿ ರಾಮನ್ ನಗರ ಶಾಸಕ ಎಸ್.ರಘು ಅವರಿಗೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಇಬ್ಬರು ಶಾಸಕರನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ.

Bangalore Urban Development Authority
ಶಾಸಕರಾದ ರವಿಸುಬ್ರಮಣ್ಯ,ಎಸ್.ರಘುಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನ ನೀಡಿ ಸರ್ಕಾರದ ಆದೇಶ

ಬೆಂಗಳೂರು: ನವದೆಹಲಿ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಿಗೈಲಿ ರಾಜ್ಯಕ್ಕೆ ವಾಪಸ್​​ ಆಗಿದ್ದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ನಿರಾಶೆಯಾಗಿದ್ದರೆ ಬೆಂಗಳೂರು ನಗರದ ಇಬ್ಬರು ಶಾಸಕರಿಗೆ ಮಾತ್ರ ಸಿಹಿ ಸುದ್ದಿ ಸಿಕ್ಕಿದೆ. ಸಿಎಂ ದೆಹಲಿಯಿಂದ ವಾಪಸ್​ ಆಗುತ್ತಿದ್ದಂತೆ ಇಬ್ಬರು ಬಿಜೆಪಿ ಶಾಸಕರನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ.

ರವಿಸುಬ್ರಮಣ್ಯ ಮತ್ತು ರಘುಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ: ಬಸವನಗುಡಿ ಶಾಸಕ ಎಲ್.ಎ ರವಿಸುಬ್ರಮಣ್ಯ ಮತ್ತು ಸಿವಿ ರಾಮನ್ ನಗರ ಶಾಸಕ ಎಸ್.ರಘು ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೂ ಈ ಇಬ್ಬರು ಶಾಸಕರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದ ಮೇರೆಗೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ದಿವಾಕರ್ ಆದೇಶ ಹೊರಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಮರಳಿ ಸೇರಲು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದರೆ, ಸಿಪಿ ಯೋಗೇಶ್ವರ್, ರೇಣುಕಾಚಾರ್ಯ,ತಿಪ್ಪಾರೆಡ್ಡಿ, ರಾಜುಗೌಡ ಸೇರಿದಂತೆ ಹಲವು ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಮತ್ತೆ ಕೆಲವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ. ಆದರೆ, ಇವುಗಳ ನಡುವೆ ಸದ್ದಿಲ್ಲದೇ ರವಿಸುಬ್ರಮಣ್ಯ ಮತ್ತು ರಘುಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ನೀಡಿದೆ.

ಬಹುಮತ ಪಡೆಯಲು ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗಳಿಸುವ ಸ್ಥಾನ ಬಹಳ ಮುಖ್ಯ:ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಪಾಲಿಗೆ ಬೆಂಗಳೂರು ನಗರ ಬಹಳ ಮುಖ್ಯವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 24 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಇದರಲ್ಲಿ ಅತಿಹೆಚ್ಚು ಸ್ಥಾನ ಪಡೆದುಕೊಂಡರಷ್ಟೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕಾರಿಯಾಗಲಿದೆ. ಬಹುಮತ ಪಡೆಯಲು ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗಳಿಸುವ ಸ್ಥಾನ ಬಹಳ ಮುಖ್ಯ ಹೀಗಾಗಿ ಚುನಾವಣಾ ಸನಿಹದಲ್ಲಿ ಪಕ್ಷದ ಪ್ರಭಾವ ಹೆಚ್ಚಿಸಿಕೊಳ್ಳಲು ಇಬ್ಬರು ಶಾಸಕರಿಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.

ಜಯನಗರ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಿಂದ ಮರಳಿ ಬಿಜೆಪಿ ತೆಕ್ಕೆಗೆ ಪಡೆದುಕೊಳ್ಳುವ ತಂತ್ರ:ಸದ್ಯ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದೆ. ರವಿಸುಬ್ರಮಣ್ಯಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನ ನೀಡುವ ಮೂಲಕ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ನೆರೆಯ ಜಯನಗರ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಿಂದ ಮರಳಿ ಬಿಜೆಪಿ ತೆಕ್ಕೆಗೆ ಪಡೆದುಕೊಳ್ಳುವ ತಂತ್ರ ಅನುಸರಿಸಲಾಗಿದೆ. ಕಾಂಗ್ರೆಸ್​ನ ಸೌಮ್ಯರೆಡ್ಡಿ ಜಯನಗರ ಶಾಸಕರಾಗಿದ್ದು, ಅವರ ಪರ ಜನರ ಒಲವು ಅಷ್ಟಕ್ಕಷ್ಟೆಯಾಗಿದೆ ಇದರ ಲಾಭ ಪಡೆದುಕೊಂಡು ಈ ಕ್ಷೇತ್ರವನ್ನು ತೆಕ್ಕೆಗೆ ಪಡೆದುಕೊಳ್ಳಲು ಹೆಚ್ಚುವರಿ ಜವಾಬ್ದಾರಿಯನ್ನು ರವಿಸುಬ್ರಮಣ್ಯರಿಗೆ ವಹಿಸುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ ಎನ್ನಲಾಗಿದೆ.

ಇನ್ನು ಸಿವಿ ರಾಮನ್ ನಗರವನ್ನು ಬಿಜೆಪಿ ಭದ್ರಪಡಿಸಿಕೊಳ್ಳಬೇಕಿದ್ದು, ಅದಕ್ಕೆ ಶಾಸಕ ರಘು ಅವರಿಗೆ ಬಿಡಿಎ ಅಧಿಕಾರೇತರ ಸದಸ್ಯ ಸ್ಥಾನ ನೀಡಿದ್ದು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಆದರೆ ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಅಧಿಕಾರಕ್ಕಾಗಿ, ಹಣಕ್ಕಾಗಿ ವಲಸೆ ಹೋದವರು ಮಾರಾಟದ ವಸ್ತುಗಳು: ದಿನೇಶ್ ಗುಂಡೂರಾವ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.