ETV Bharat / state

ಕ್ಷೇತ್ರದ 2 ವಾರ್ಡ್​ಗಳ ಸಂಪೂರ್ಣ ಸೀಲ್​​​ಡೌನ್​​​​​​ಗೆ ನನ್ನ ಬೆಂಬಲ: ಜಮೀರ್ ಅಹ್ಮದ್ ಖಾನ್ - ಕ್ಲಾಂಪ್ ಡೌನ್

ಪಾದರಾಯನಪುರ ಕಂಪ್ಲೀಟ್ ಸೀಲ್​​ಡೌನ್​ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಜಮೀರ್​ ಅಹ್ಮದ್​ ಖಾನ್​ ತಿಳಿಸಿದ್ದಾರೆ.

Zameer Ahmed Khan
ಜಮೀರ್ ಅಹ್ಮದ್ ಖಾನ್
author img

By

Published : Apr 10, 2020, 1:38 PM IST

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್ ಗಳಾದ ಬಾಪೂಜಿನಗರ, ಪಾದರಾಯನಪುರ ಕಂಪ್ಲೀಟ್ ಕ್ಲಾಂಪ್ ಡೌನ್ ಮಾಡಿದ್ದಕ್ಕೆ ನನ್ನ ಬೆಂಬಲ ಇದೆ ಎಂದು ಕಾಂಗ್ರೆಸ್ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್​ ಅಹ್ಮದ್​ ಖಾನ್​

ನಿಜಾಮುದ್ದೀನ್ ದರ್ಗ, ಅಲ್ಲಿನ ಕರೀಂ ಹೋಟೆಕ್​​​​​ಗಳಿಗೆ ಹೋಗಿ ಬಂದ ಮೂವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಅವರ ಮನೆ ಮೇಲೆ ಕೆಳಗೆ ಇದ್ದವರನ್ನು ಹೋಟೆಲ್​​​​​​ಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ಹತ್ತಿರದ ಇಪ್ಪತ್ತು ಮನೆಯವರನ್ನೂ ಹೋಟೆಲ್​​ಗೆ ಶಿಫ್ಟ್ ಮಾಡಲಾಗುತ್ತದೆ ಎಂದರು.

ನಿಜಾಮುದ್ದೀನ್ ಹೋಗಿ ಬಂದವರನ್ನು ಹಜ್ ಕ್ಯಾಂಪ್ ನಲ್ಲಿ ಇರಿಸಲಾಗಿತ್ತು. ಹಜ್ ಕ್ಯಾಂಪ್​ನಲ್ಲಿದ್ದ 148 ಜನರಲ್ಲಿ ಮೂವರಿಗೆ ಸೋಂಕು ತಗುಲಿದೆ. ಈಗಾಗಲೇ ಕೊರೊನಾ ಶಂಕಿತರನ್ನು ಹೋಟೆಲ್​​​​​​​ಗೆ ಶಿಫ್ಟ್ ಮಾಡಲಾಗಿದೆ.
ಸ್ಥಳೀಯ ಧಾರ್ಮಿಕ ಗುರುಗಳ ಬೆಂಬಲವನ್ನೂ ಪಡೆಯಲಾಗಿದೆ. ಕ್ಲಾಂಪ್ ಡೌನ್ ಸಂದರ್ಭದಲ್ಲಿ ಎಲ್ಲಾ ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಆಹಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ನಿಜಾಮುದ್ದೀನ್​ಗೆ ಹೋಗಿ ಬಂದ ಎಲ್ಲರೂ ಹೋಗಿ ಆರೋಗ್ಯ ಪರೀಕ್ಷಿಸಿಕೊಂಡು ಬರಬೇಕು, ಕರೀಂ ಹೋಟೆಲ್​​​​​​ಗೆ ಹೋಗಿ ಬಂದವರು ಕೂಡಾ ಚೆಕಪ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.