ETV Bharat / state

ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಪ್ರತಿಭಟಸಿರುವ ಕಾಂಗ್ರೆಸ್ ಧ್ವಜ ಸಂಹಿತೆ ಉಲ್ಲಂಘಿಸಿದೆ : ಪಿ.ರಾಜೀವ್ - ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಪಿ ರಾಜೀವ್ ಹೇಳಿಕೆ

ಬೇಕಾದ ಹಾಗೆ ಧ್ವಜವನ್ನು ಮಡಿಚಿದ್ದಾರೆ. ಒಂದು ಕೈಯಲ್ಲಿ ಮಾಸ್ಕ್ ಹಿಡಿದುಕೊಂಡಿದ್ದರು, ಇನ್ನು ಕೆಲವರು ಇಯರ್ ಫೋನ್ ಹಿಡಿದುಕೊಂಡು ಧ್ವಜ ಹಿಡಿದಿದ್ದರು. ಕಾಂಗ್ರೆಸ್ ಶಾಸಕರು ನಮಗೆ ಹೇಳುವ ನೈತಿಕತೆಯನ್ನು ಇಟ್ಟುಕೊಂಡಿಲ್ಲ..

ಪಿ ರಾಜೀವ್
ಪಿ ರಾಜೀವ್
author img

By

Published : Feb 16, 2022, 7:42 PM IST

ಬೆಂಗಳೂರು : ಅಶೋಕಚಕ್ರ ಇರುವ ರಾಷ್ಟ್ರಧ್ವಜ ಸಾರ್ವಭೌಮತ್ವದ ಸಂಕೇತ. ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಜೆಪಿ ಖಂಡಿಸುತ್ತದೆ. ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಪ್ರತಿಭಟಸಿರುವುದು ಧ್ವಜ ಸಂಹಿತೆಯನ್ನು ಉಲ್ಲಂಘಿಸಿದೆ. ಅದನ್ನು ಖಂಡಿಸುತ್ತೇನೆ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಪಿ ರಾಜೀವ್ ಹೇಳಿಕೆ ನೀಡಿರುವುದು..

ವಿಧಾನಸೌಧದ ಲಾಂಜ್​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಟ್ಟೆಯಂತೆ ರಾಷ್ಟ್ರ ಧ್ವಜವನ್ನು ಜಾಡಿಸುತ್ತಿದ್ದರು. ಧ್ವಜವನ್ನು ಯಾವ ರೀತಿ ಮಡಿಚಿಡಬೇಕೆಂದು ರಾಷ್ಟ್ರ ಧ್ವಜ ಸಂಹಿತೆ ಹೇಳುತ್ತದೆ. ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ನಾಯಕರು ಅವಮಾನ ಮಾಡಿದ್ದಾರೆ.

ಒಂದು ಕೈಯಲ್ಲಿ ಧ್ವಜ ಇನ್ನೊಂದು ಕೈಯಲ್ಲಿ ಹೆಡ್‌ಫೋನ್ ಹಿಡಿದು ಅವಮಾನ ಮಾಡಿದ್ದಾರೆ. ಕಾಂಗ್ರೆಸ್‌ನ ಶಾಸಕರಿಗೆ ಧ್ವಜವನ್ನ ಯಾವ ರೀತಿ ಹಿಡೆದುಕೊಳ್ಳಬೇಕು ಅಂತಾ ಹೇಳುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪಿ ರಾಜೀವ್ ವಾಗ್ದಾಳಿ ನಡೆಸಿದರು.

ಬೇಕಾದ ಹಾಗೆ ಧ್ವಜವನ್ನು ಮಡಿಚಿದ್ದಾರೆ. ಒಂದು ಕೈಯಲ್ಲಿ ಮಾಸ್ಕ್ ಹಿಡಿದುಕೊಂಡಿದ್ದರು, ಇನ್ನು ಕೆಲವರು ಇಯರ್ ಫೋನ್ ಹಿಡಿದುಕೊಂಡು ಧ್ವಜ ಹಿಡಿದಿದ್ದರು. ಕಾಂಗ್ರೆಸ್ ಶಾಸಕರು ನಮಗೆ ಹೇಳುವ ನೈತಿಕತೆಯನ್ನು ಇಟ್ಟುಕೊಂಡಿಲ್ಲ ಎಂದರು.

ಇದನ್ನೂ ಓದಿ : ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.