ETV Bharat / state

ಬಿಟ್ ಕಾಯಿನ್ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಬನ್ನಿ: ಕಾಂಗ್ರೆಸ್​​ಗೆ ಸವಾಲೆಸೆದ ರೇಣುಕಾಚಾರ್ಯ

author img

By

Published : Nov 15, 2021, 7:46 PM IST

ದೇಶದಲ್ಲಿ ಪ್ರತಿಪಕ್ಷ ನಾಯಕರಾಗಲು ಅವಕಾಶವೇ ಇಲ್ಲದಂತಾಗಿದೆ, ರಾಜ್ಯದಲ್ಲೂ ಕಾಂಗ್ರೆಸ್ ಗೆ ಹೀನಾಯ ಸ್ಥಿತಿ ಇದೆ, ಹಾಗಾಗಿ ಬಿಟ್ ಕಾಯಿನ್ ವಿಷಯವನ್ನ ಜೀವಂತವಾಗಿರಿಸಲು ಮತ್ತು ಮುಖ್ಯಮಂತ್ರಿಗಳು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಮರೆಮಾಚಿ ವಿಷಯಾಂತರ ಮಾಡಲು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು..

ಬೆಂಗಳೂರಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ

ಬೆಂಗಳೂರು : ಬಿಟ್ ಕಾಯಿನ್ ಆರೋಪದ ಮಾಡುತ್ತಿರುವ ನಿಮ್ಮ ಬಳಿ ಏನು ದಾಖಲೆಯಿದೆ?. ಸದನದಲ್ಲಿ ಮಾತನಾಡುತ್ತೇವೆ ಎನ್ನುತ್ತಿದ್ದೀರಿ.. ಬನ್ನಿ ಬೆಳಗಾವಿಯಲ್ಲಿ ಈ ಬಾರಿಯ ಅಧಿವೇಶನ ನಡೆಯಲಿದೆ.

ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ನೇರ ಸವಾಲು ಹಾಕಿದರು.

ಬಿಟ್‌ ಕಾಯಿನ್‌ ದಂಧೆ ಕುರಿತಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿರುವುದು..

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹತಾಶ ಮನೋಭಾವನೆಯಿಂದ ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ಆರೋಪ ಮಾಡುತ್ತಿದ್ದಾರೆ.

ವಿಧಾನಪರಿಷತ್ ಚುನಾವಣೆ ಮತ್ತು ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಇವರು ಏನೇ ಆರೋಪ ಮಾಡಿದರೂ ನಮ್ಮಪ್ಪನಾಣೆ ಇವರು ಬರಲ್ಲ. ದೇಶದಲ್ಲಿ ಪ್ರತಿಪಕ್ಷ ನಾಯಕರಾಗಲು ಅವಕಾಶವೇ ಇಲ್ಲದಂತಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ ಇದೆ.

ಹಾಗಾಗಿ, ಬಿಟ್ ಕಾಯಿನ್ ವಿಷಯವನ್ನ ಜೀವಂತವಾಗಿರಿಸಲು ಮತ್ತು ಮುಖ್ಯಮಂತ್ರಿಗಳು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಮರೆಮಾಚಿ ವಿಷಯಾಂತರ ಮಾಡಲು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜನರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಹತಾಶ ಮನೋಭಾವನೆಯಿಂದ ಈ ರೀತಿ ಹೇಳಿಕೆ ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಮಾತನಾಡಿದರೆ ಹಾನಗಲ್ ಚುನಾವಣೆಯ ಉದಾಹರಣೆ ಕೊಡುತ್ತಾರೆ, ಅದರಲ್ಲಿ ಗೆದ್ದಿದ್ದು ಕಾಂಗ್ರೆಸ್ ಅಲ್ಲ ಕೇವಲ ಮಾನೆ ಮಾತ್ರ.

ಈ ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಇಂದು ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ, ನಿಮ್ಮ ಭ್ರಷ್ಟಾಚಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ, ನೀವೆಲ್ಲ ಹಿಂದೆ

ಯಾವ ರೀತಿ ಇದ್ದರೀ, ಇಂದು ಯಾವ ರೀತಿ ಇದ್ದೀರಾ? ರಾಜರ ರೀತಿ ಜೀವನವನ್ನು ಮಾಡುತ್ತಿದ್ದೀರಾ, ನಿಮ್ಮ ಇತಿಹಾಸವನ್ನು ಕೆದಕಿದರೆ ಇನ್ನೊಮ್ಮೆ ಬಿಜೆಪಿ ಬಗ್ಗೆ ನೀವು ಮಾತನಾಡಲ್ಲ. ಇದೇ ರೀತಿ ನೀವು ಮಾತನಾಡುತ್ತಾ ಹೋದರೆ ನಿಮ್ಮ ಭ್ರಷ್ಟಾಚಾರದ ವಿಷಯವನ್ನು ಜನರ ಮನೆ ಬಾಗಿಲಿಗೆ ಎಳೆ ಎಳೆಯಾಗಿ ಬಿಡಿಸಿ ತಲುಪಿಸುತ್ತೇವೆ ಎಂದು ಎಚ್ಚರಿಸಿದರು.

ಕಟೀಲ್ ಬದಲು ಕಾರ್ಯಕರ್ತರು ಉತ್ತರಿಸುತ್ತಾರೆ : ನಮ್ಮ ರಾಜ್ಯದ ಅಧ್ಯಕ್ಷರು ಸೌಮ್ಯ ಸ್ವಭಾವದವರು. ಹಸುವಿನ ತರದವರು. ಅವರು ಬೆಳೆದು ಬಂದ ರೀತಿಯೇ ಹಾಗಿದೆ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ, ಸಂಘಟನೆ, ಕಾರ್ಯಕರ್ತರು ಬಿಟ್ಟರೆ ಬೇರೆ ವಿಷಯವೇ ಗೊತ್ತಿಲ್ಲ. ಮಂತ್ರಿಗಳು, ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಹೋಗಲ್ಲ, ಯಾರಿಗೂ ಪತ್ರವನ್ನು ಕೊಡುವುದಿಲ್ಲ.

ಸಂಘಟನೆಯಿಂದ ಬಂದಿರುವ ವ್ಯಕ್ತಿಯ ಬಗ್ಗೆ ಆರೋಪ ಮಾಡುತ್ತಿದ್ದೀರಿ, ನಿಮ್ಮ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ, ಕರ್ಮಕಾಂಡ ಮಾಡಿದ್ದಾರೆ ಎಂದು ಗೊತ್ತಿದೆ. ಆದರೆ, ನಮ್ಮ ಅಧ್ಯಕ್ಷರು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ, ನಿಮ್ಮ ಆರೋಪವನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ಕಾಂಗ್ರೆಸ್‌ನವರು ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಾರೆ. ಹಾಗಾಗಿ, ನಮ್ಮ ಅಧ್ಯಕ್ಷರು ಉತ್ತರ ಕೊಡುತ್ತಿಲ್ಲ. ಈ ಆರೋಪಗಳಿಗೆ ಹಳ್ಳಿಗಳಲ್ಲಿ ಬೂತ್ ಮಟ್ಟದಲ್ಲಿನ ಕಾರ್ಯಕರ್ತರು ನಾವು ಉತ್ತರ ಕೊಡುತ್ತೇವೆ, ನಮ್ಮ ಅಧ್ಯಕ್ಷರು ಉತ್ತರ ಕೊಡಬೇಕಿಲ್ಲ ಎಂದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ : ಬಿಜೆಪಿ ಹಳೆ ಬೇರು ಹೊಸ ಚಿಗುರಿದ್ದರೆ ಮರ ಸೊಬಗು ಅನ್ನುವ ರೀತಿಯಲ್ಲಿದೆ. ಆದರೆ, ಜೆಡಿಎಸ್‌ನಲ್ಲಿ ಎಲೆ ಉದುರುತ್ತಿವೆ. ರೆಂಬೆಗಳು ಬೀಳುತ್ತಿವೆ. ಬೇರು ಮಾತ್ರ ಉಳಿದಿದೆ. ಎಲ್ಲ ಪಕ್ಷ ತೊರೆಯುತ್ತಿರುವ ಕಾರಣಕ್ಕೆ ಬಿಜೆಪಿ ಬಗ್ಗೆ ಕುಟುಂಬ ರಾಜಕಾರಣದ ಕುರಿತು ಮಾತನಾಡುತ್ತಿದ್ದಾರೆ.

ನಮ್ಮ ಪಕ್ಷದಲ್ಲಿಯೂ ಕೆಲ ನಾಯಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ ಎನ್ನುವುದು ನಿಜ. ಆದರೆ, ದೇವೇಗೌಡರ ಕುಟುಂಬದ ಕಾರಣದಿಂದ ಅವರ ಕುಟುಂಬ ಸದಸ್ಯರು ಗೆದ್ದು ಬರುತ್ತಿದ್ದಾರೆ. ಆದರೆ, ನಮ್ಮಲ್ಲಿ ಸಂಘಟನೆ ಕಾರಣದಿಂದಾಗಿ ಗೆದ್ದು ಬರುತ್ತಿದ್ದಾರೆ.

ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ರಾಘವೇಂದ್ರ ಗೆದ್ದಿಲ್ಲ, ವಿದ್ಯಾರ್ಥಿ ಸಂಘಟನೆಯಿಂದ, ಸಂಘಪರಿವಾರದಿಂದ ತೊಡಗಿಸಿಕೊಂಡು ಬಂದವರು. ಹಾಗಾಗಿ, ಅವರಿಗೆ ಪಕ್ಷ ಅವಕಾಶ ಕಲ್ಪಿಸಿದೆ. ಜನ ಬಯಸಿದ್ದಕ್ಕೆ ಅವರಿಗೆ ಅವಕಾಶ ನೀಡಲಾಗಿದೆ. ಆದರೆ, ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ಇಡೀ ಸಾಲಾಗಿ ಟಿಕೆಟ್ ಕೊಟ್ಟು ಗೆಲ್ಲಿಸುತ್ತದೆ. ಇದಕ್ಕೆಲ್ಲ ಜನ ಮುಂದೆ ಉತ್ತರ ಕೊಡುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.