ETV Bharat / state

ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ: ರೇಣುಕಾಚಾರ್ಯ - ಬೆಂಗಳೂರಿನಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕುರಿತು ರೇಣುಕಾಚಾರ್ಯ ಪ್ರತಿಕ್ರಿಯೆ

'ನಾನೇನು ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ಒಬ್ಬರಿಗೂ ಕೂಡ ಹೋರಿ ಬೆದರಿಸುವ ಜಾತ್ರೆಯಲ್ಲಿ ಕೋವಿಡ್ ಹರಡಿಲ್ಲ. ಈ ಬಗ್ಗೆ ನಾನು ಲಿಖಿತವಾಗಿ ಬರೆದುಕೊಡುತ್ತೇನೆ. ಸರ್ಕಾರ, ಸಂಘಟನೆ ಯಾರೂ ಇದಕ್ಕೆ ಹೊಣೆ ಅಲ್ಲ. ನಾನೇ ವೈಯಕ್ತಿಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮೇಕೆದಾಟು ಪಾದಯಾತ್ರೆಗೆ ಹೊರಗಿನಿಂದೆಲ್ಲ ಜನ ಬಂದಿದ್ದಾರೆ. ವಿಷಯ ಗೊತ್ತಾದ ತಕ್ಷಣ ನಾನು ನಾಡಿನ ಸಮಸ್ತ ಜನತೆಯಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದೇನೆ' ಎಂದು ರೇಣುಕಾಚಾರ್ಯ ಹೇಳಿದರು.

ಬೆಂಗಳೂರಿನಲ್ಲಿ ರೇಣುಕಾಚಾರ್ಯ ಹೇಳಿಕೆ
ಬೆಂಗಳೂರಿನಲ್ಲಿ ರೇಣುಕಾಚಾರ್ಯ ಹೇಳಿಕೆ
author img

By

Published : Jan 11, 2022, 3:16 PM IST

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸರ್ಕಾರ ನನ್ನ ವಿರುದ್ಧವೂ ಪ್ರಕರಣ ದಾಖಲಿಸಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಿನ್ನೆ ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರ ಸಂಬಂಧ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.

'ನಿಯಮ ಉಲ್ಲಂಘಿಸಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ಎಸ್ಪಿ ಕೂಡ ನಿನ್ನೆ ಫೋನ್ ಮಾಡಿದ್ರು. ಪಕ್ಷಕ್ಕೆ ಮುಜುಗರ ಆಗಬಾರದು ಅಂತ ಕ್ಷಮೆ ಕೇಳಿದ್ದೇನೆ. ಹೊನ್ನಾಳಿ ಜನ ನನ್ನನ್ನು ಹೊನ್ನಾಳಿ ಹುಲಿ ಅಂತ ಕರೆಯುತ್ತಾರೆ. ಮಾಧ್ಯಮದ ಮೂಲಕವೇ ಹೇಳುತ್ತೇನೆ, ಪಕ್ಷಕ್ಕೂ ಸರ್ಕಾರಕ್ಕೂ ಮುಜುಗರ ಆಗೋದು ಬೇಡ. ನನ್ನ ಕ್ಷೇತ್ರದ ಜನ ಏನು ಹೇಳುತ್ತಾರೋ ನಾನು ಅದನ್ನು ಮಾಡಲು ರೆಡಿ' ಎಂದರು.

'ನಾನೇನು ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ಒಬ್ಬರಿಗೂ ಕೂಡ ಹೋರಿ ಬೆದರಿಸುವ ಜಾತ್ರೆಯಲ್ಲಿ ಕೋವಿಡ್ ಹರಡಿಲ್ಲ. ಈ ಕುರಿತು ನಾನು ಲಿಖಿತವಾಗಿ ಬರೆದುಕೊಡುತ್ತೇನೆ. ಸರ್ಕಾರ, ಸಂಘಟನೆ ಯಾರೂ ಇದಕ್ಕೆ ಹೊಣೆ ಅಲ್ಲ. ನಾನೇ ವೈಯಕ್ತಿಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮೇಕೆದಾಟು ಪಾದಯಾತ್ರೆಗೆ ಹೊರಗಿನಿಂದೆಲ್ಲ ಜನ ಬಂದಿದ್ದಾರೆ. ವಿಷಯ ಗೊತ್ತಾದ ತಕ್ಷಣ ನಾನು ನಾಡಿನ ಸಮಸ್ತ ಜನತೆಗೆ ಬಹಿರಂಗ ಕ್ಷಮೆ ಯಾಚಿಸಿದ್ದೇನೆ'.

'ನನಗೂ ಮುಜುಗರ ಆಯ್ತು. ಈ ಕಾರ್ಯಕ್ರಮ ದಿಢೀರ್ ಆಗಿದ್ದಲ್ಲ, 20 ದಿನಗಳ ಹಿಂದೆ ಆಯೋಜನೆ ಮಾಡಿದ್ದು. ಕಾರ್ಯಕ್ರಮ ಮುಂದೂಡಬೇಕಾಗಿತ್ತು, ಮುಂದೂಡಿ ಅಂತ ನಾನು ಹೇಳಿದ್ದೆ. ನಾಡಿನ ಜನತೆ, ಪಕ್ಷದ ಮುಖಂಡರು ಎಲ್ಲರೂ ಹೇಳಿದ್ದರು. ಒಳ್ಳೆ ಕೆಲಸಗಳೆಲ್ಲ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತದೆ. ಹೀಗಾಗಿ ಕಾರ್ಯಕ್ರಮ ಮುಂದೂಡಿ ಅಂತ ಹೇಳಿದ್ದರೂ ಯುವಕರು ಕೇಳಲಿಲ್ಲ. ನನ್ನ ತಪ್ಪಿನ ಅರಿವು ಆಗಿ ಕ್ಷಮೆ ಕೇಳಿದ್ದೇನೆ' ಎಂದರು.

'ಮಾಧ್ಯಮಗಳಿಗೂ ಅಲ್ಲಿನ ವಿಡಿಯೋ ಕೊಟ್ಟಿದ್ದು ನಮ್ಮ ಮಿತ್ರರೇ. ಡಿಕೆಶಿ ತಾನೇ ವಿಡಿಯೋ ಮಾಡ್ಸಿದ್ದೀನಿ ಅನ್ನೋದು ಹಾಸ್ಯಾಸ್ಪದ. ಡಿಕೆಶಿ ಸ್ವಾರ್ಥಕ್ಕೋಸ್ಕರ, ಅಧಿಕಾರಕ್ಕೋಸ್ಕರ, ಹೈಕಮಾಂಡ್ ಮೆಚ್ಚಿಸೋದಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ನಾನು ರಾಜಕೀಯ ಲಾಭಕ್ಕೋಸ್ಕರ ಕಾರ್ಯಕ್ರಮದಲ್ಲಿ ಭಾಗಿ ಆಗಲಿಲ್ಲ. ನಿಮ್ಮಂಗೆ ಖುರ್ಚಿಗೋಸ್ಕರ ಹೋಗಲಿಲ್ಲ. ಶಿವಕುಮಾರ ಅಣ್ಣ, ನೀವು ಅಧಿಕಾರದಲ್ಲಿದ್ದಾಗ ಎಷ್ಟು ಸಲ ನಮ್ಮ ಮೇಲೆ ಕೇಸ್ ಹಾಕಿಲ್ಲ ಹೇಳಿ?. ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ನನ್ನನ್ನು ಬೆಂಕಿ ಹಚ್ಚಿ ಸುಡೋಕೇ ಬಂದಿದ್ರು. ಭಂಡತನದಿಂದ ಖುರ್ಚಿಗೋಸ್ಕರ ನೀವು ಕಾನೂನು ಉಲ್ಲಂಘಿಸಿದ್ದೀರಿ. ಆದರೆ ನಾನೂ ತಪ್ಪು ಮಾಡಿದ್ದೇನೆ. ಆದರೆ ನಿಮ್ಮ ತರಹ ಸಿದ್ದರಾಮಯ್ಯ ನಡುವಿನ ಕಂದಕ ಮರೆಮಾಚೋದಕ್ಕೆ ಅಧಿಕಾರಕ್ಕೆ ಪಾದಯಾತ್ರೆ ಮಾಡುತ್ತಿಲ್ಲ. ನಿಮ್ಮಂಗೆ ಭಂಡತನಕ್ಕೆ ಬಿದ್ದು ಅಧಿಕಾರಕ್ಕೋಸ್ಕರ ಮಾಡಲ್ಲ. ನಿಮ್ಮ ತರಹ ಭಂಡತನ ಪ್ರದರ್ಶನ ಮಾಡಲ್ಲ' ಎಂದು ಕಿಡಿ ಕಾರಿದರು.

'ಡಿ.ಕೆ.ಶಿವಕುಮಾರ್ ವೀರಾವೇಶ ಪೌರುಷದ ಮಾತನಾಡ್ತೀರಲ್ಲ ನೀವೂ ನನ್ನ ತರಹ ಕ್ಷಮೆ ಕೇಳಿ. ನನ್ನ ಹೊನ್ನಾಳಿ ಕೋಟೆ ಭೇಧಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ನನ್ನ ಹತ್ರ ದಾಖಲೆ ಇದೆ, ವಿಡಿಯೋ ಮಾಡಿಸಿದ್ದೇನೆ ಅಂತ ಹೇಳಿದ್ರು. ಡಿಕೆಶಿ ಅಣ್ಣ ಹೊನ್ನಾಳಿ ಕೋಟೆ, ಆ ಕೋಟೆ ಭೇದಿಸೋದಕ್ಕೆ ಸಾಧ್ಯವೇ ಇಲ್ಲ. ಅಂತಹ ಕೋಟೆಯಲ್ಲಿ ಬಂದು ವಿಡಿಯೋ ಮಾಡ್ಸಿದೀನಿ ಕೇಸ್ ಹಾಕಿ ಅಂತೀರಲ್ಲ. ಹೊನ್ನಾಳಿ ನ್ಯಾಮತಿ ಜನ ನನ್ನ ಸುತ್ತ ಕೋಟೆ ಕಟ್ಟಿದ್ದಾರೆ' ಎಂದು ಸವಾಲು ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.