ETV Bharat / state

ಅನುದಾನಕ್ಕಾಗಿ ಸಚಿವ ಆರ್​. ಅಶೋಕ್ ಮುಂದೆ ಕಣ್ಣೀರಿಟ್ಟ ಶಾಸಕ ಎಂ.ಪಿ. ಕುಮಾರಸ್ವಾಮಿ - ಮೂಡಿಗೆರೆ ಶಾಸಕ

ತಮ್ಮ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಕಂದಾಯ ಸಚಿವ ಆರ್​. ಅಶೋಕ್ ಅವರ ಮುಂದೆ ಕಣ್ಣೀರು ಹಾಕಿದರು.

M.P Kumaraswamy tears
ಆರ್​. ಅಶೋಕ್ ಮುಂದೆ ಕಣ್ಣೀರಿಟ್ಟ ಶಾಸಕ ಎಂ.ಪಿ.ಕುಮಾರಸ್ವಾಮಿ
author img

By

Published : Aug 12, 2021, 1:53 PM IST

ಬೆಂಗಳೂರು : ಅನುದಾನ ಬಿಡುಗಡೆ ಸಂಬಂಧ ವಿಧಾನಸೌಧದ ಮಂದೆ ಧರಣಿ ನಡೆಸಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಕಂದಾಯ ಸಚಿವ ಆರ್.ಅಶೋಕ್ ಅವರ ಎದುರು ಕಣ್ಣೀರು ಹಾಕಿದ ಘಟನೆ ಇಂದು ನಡೆಯಿತು.

ಮೂಡಿಗೆರೆ ಕ್ಷೇತ್ರವನ್ನು ಎನ್​ಡಿಆರ್​ಎಫ್, ಎಸ್​ಡಿಆರ್​​ಎಫ್ ಪಟ್ಟಿಗೆ ಸೇರಿಸದೇ ಇರುವ ಬಗ್ಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿದರು. ಸಚಿವರ ಮುಂದೆ ತಮ್ಮ ಕಷ್ಟ ಹೇಳುತ್ತಾ ಎಂ.ಪಿ‌ ಕುಮಾರಸ್ವಾಮಿ ಕಣ್ಣೀರು ಹಾಕಿದರು.

ಆರ್​. ಅಶೋಕ್ ಮುಂದೆ ಕಣ್ಣೀರಿಟ್ಟ ಶಾಸಕ ಎಂ.ಪಿ.ಕುಮಾರಸ್ವಾಮಿ

ನಾನು ಸಚಿವಸ್ಥಾನ ಕೊಡಲೇಬೇಕು ಅಂತಾ ಕೇಳಿದ್ನಾ? ನನ್ನ ಕ್ಷೇತ್ರಕ್ಕೆ ಯಾಕೆ ಅನುದಾನ ಕೊಡ್ತಿಲ್ಲ. ನಾನು ಕೂಡ ಹಿರಿಯ ಶಾಸಕ, ನನಗೇ ಹೀಗೆ ಮಾಡೋದು ಸರಿಯಾ?. ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ?. ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ?. ಯಾವತ್ತಾದ್ರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ?. ನೀವೆಲ್ಲ ಹೇಳಿದ್ದು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ಬೆಲೆ ಇಲ್ಲ ಅಂದ್ರೆ ಹೇಗೆ? ಎಂದು ತಮ್ಮ ನೋವನ್ನು ತೋಡಿಕೊಂಡರು.

ಆಗ ಎಂ.ಪಿ ಕುಮಾರಸ್ವಾಮಿಯನ್ನು ಸಚಿವ ಆರ್.ಅಶೋಕ್​ ಸಮಾಧಾನ ಮಾಡಿದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಮಾತನಾಡಿದ ಕುಮಾರಸ್ವಾಮಿ, ಕಂದಾಯ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.‌ ಹೀಗಾಗಿ ಧರಣಿ ಕೈ ಬಿಟ್ಟಿದ್ದೇನೆ ಎಂದರು.

ಅವರ ಸಮಸ್ಯೆ ನೀಗಿಸಲು ಕ್ರಮ : ನಾನು ಎಂ.ಪಿ. ಕುಮಾರಸ್ವಾಮಿ 20 ವರ್ಷದಿಂದ ಸ್ನೇಹಿತರು. ಅನುದಾನ ಸಮಸ್ಯೆ ಆಗಿದೆ, ಬೆಳೆ ಪರಿಹಾರ ನೀಡುವಂತೆ ವಿನಂತಿ ಮಾಡಿದ್ದಾರೆ. ಸಿಎಂ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸಿ.ಟಿ ರವಿ ಮೂಡಿಗೆರೆ ಕ್ಷೇತ್ರ ಎಸ್​ಡಿಆರ್​ಎಫ್ ಪಟ್ಟಿಯಿಂದ ಕೈ ತಪ್ಪುವಂತೆ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್​, ಸಿ.ಟಿ ರವಿ ನನಗೆ ಸುಮಾರು 12 ದಿನದಿಂದ ಫೋನೇ ಮಾಡಿಲ್ಲ. ಸಿ.ಟಿ ರವಿ, ಜೀವರಾಜ್, ಬೆಳ್ಳಿ ಪ್ರಕಾಶ್, ತರೀಕೆರೆ ಶಾಸಕ ಸುರೇಶ್ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಮೂಡಿಗೆರೆ, ಚಿಕ್ಕಮಗಳೂರಿಗೆ ಹಲವು ಬಾರಿ ಹೋಗಿದ್ದೇನೆ, ಚಿಕ್ಕಮಗಳೂರು ಹೊಸದೇನಲ್ಲ. ನಮ್ಮ ಪಾರ್ಟಿಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ ಎಂದರು.

ಅಶೋಕ್ ಪಿಎಸ್​ಗೆ ಕುಮಾರಸ್ವಾಮಿ ತರಾಟೆ : ಇದಕ್ಕೂ ಮುನ್ನ ಧರಣಿ‌ ನಿರತ ಸ್ಥಳಕ್ಕೆ ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಕಾರ್ಯದರ್ಶಿ ಪ್ರಶಾಂತ್​ರನ್ನು ಕಳುಹಿಸಿದರು. ಈ ವೇಳೆ ಅವರನ್ನು ಎಂ.ಪಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಸಚಿವ ಅಶೋಕ್​ಗೆ ಕರೆ ಮಾಡಿ ಫೋನ್ ನೀಡಲು ಬಂದ ಪಿ ಎಸ್​ ಮೇಲೆ ಸಿಟ್ಟಾದ ಎಂ.ಪಿ.ಕುಮಾರಸ್ವಾಮಿ, ನಾನು ಯಾರ ಫೋನೂ ತೆಗೆದುಕೊಳ್ಳಲ್ಲ. ಹೋಗ್ರಿ ಇಲ್ಲಿಂದ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯಲ್ಲಿ ನೀವೇನು ಮಾಡಿದ್ದೀರಾ ಹೇಳ್ರೀ. ನಾವು ಮನವಿ ತೆಗೆದುಕೊಂಡು ಬಂದಾಗ ಏನು ಹೇಳಿದ್ರಿ ನೀವು? ಎಂದು ಪ್ರಶ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.