ಬೆಂಗಳೂರು: ರಸ್ತೆ ಅಗಲಿ ಕರಣ ಕಾಮಗಾರಿ ವಿಳಂಬದಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಅರವಿಂದ್ ಲಿಂಬಾವಳಿ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದರು.
ಕ್ಷೇತ್ರದ ಮಾರತಹಳ್ಳಿ ಹಾಗೂ ದೊಡ್ಡನೆಕ್ಕುಂದಿ ವಾರ್ಡ್ಗಳ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಈಗಾಗಲೇ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿತ್ತು. ಆದ್ರೆ ಕಾಮಗಾರಿ ವಿಳಂಬವಾಗಿತ್ತಿರುವುದಕ್ಕೆ ಬೇಸರವಾಗತ್ತಿದೆ ಎಂದರು.
ಮಾರತಹಳ್ಳಿ ಬ್ರಿಡ್ಜ್ ಮೇಲೆ ರಸ್ತೆಯ ಪರಿವೀಕ್ಷಣೆ ಮಾಡಲಾಗಿದ್ದು, ಕುಂದಳಹಳ್ಳಿ ಜಂಕ್ಷನ್ನಲ್ಲಿ ವಾಹನಗಳ ತೀವ್ರ ದಟ್ಟಣೆ ಹೆಚ್ಚಾಗಿರುವುದಿಂದ ಕೆಲ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಯೂ ಸಹಾ ವಿಳಂಬವಾಗುತ್ತದೆ. ಆದಷ್ಟು ಬೇಗ ಕಾಮಗಾರಿಗಳು ಪೂರ್ಣಗೊಳುಸಿವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡನೆಕ್ಕುಂದಿ ವಾರ್ಡ್ ನ ತುಬರಹಳ್ಳಿಯಲ್ಲಿ ಈ ಲೈಬ್ರರಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತುಬರಹಳ್ಳಿ ಹಾಗೂ ವಿಬ್ಗೆರ್ ಶಾಲೆ ಮಾರ್ಗವಾಗಿ ಬಳಗೆರೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲಿ ಕರಣ ಕಾಮಗಾರಿ ಪರಿಶೀಲನೆ ನಡೆಸಿ ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು.
ಕುಂದಳಹಳ್ಳಿ ಜಂಕ್ಷನ್ ಮತ್ತು ಗ್ರಾಫಿಟ್ ಇಂಡಿಯಾ ಜಂಕ್ಷನ್ಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ವಿಳಂಬ ಮಾಡುತ್ತಿದ್ದ, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದರು.