ಬೆಂಗಳೂರು: ಎಸ್.ಟಿ.ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಹಾಲು ಇದ್ದಂತೆ, ಬಿಜೆಪಿ ಕಾರ್ಯಕರ್ತರು ಕಾಫಿಪುಡಿ ಹಾಗೂ ಜೆಡಿಎಸ್ನಿಂದ ಬಂದವರು ಸಕ್ಕರೆ ಇದ್ದಂತೆ. ಈಮೂರನ್ನು ಸೇರಿಸಿ ಯಡಿಯೂರಪ್ಪ ಕಾಫಿ ಮಾಡಿದ್ದಾರೆ. ಎಲ್ಲವೂ ಒಂದಕ್ಕೊಂದು ಬೆರೆತು ಹೋಗಿದೆ. ಈಗ ಅದನ್ನು ಯಾವುದೇ ಕಾರಣಕ್ಕೂ ಬೇರೆ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಯಶವಂತಪುರ ಪ್ರಚಾರದ ವೇಳೆ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಶಾಸಕ ಎಂ.ಕೃಷ್ಣಪ್ಪ ವಾಗ್ದಾಳಿ ನಡೆಸಿ, ಬಿಜೆಪಿ ಸರ್ಕಾರವನ್ನು ಗಟ್ಟಿ ಮಾಡಲು ಸ್ವತಾಃ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿರಲಿ ನಾನು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಗಟ್ಟಿಯಾಗಿರ್ತೀನಿ ಎಂದು ಸಿದ್ದರಾಮಯ್ಯ ಹೊರಟಿದ್ದಾರೆ. ಇನ್ನು ಜೆಡಿಎಸ್ನವರಿಗೆ ಚುನಾವಣೆ ಬಂದ್ರೆ ಮಾತ್ರ ಕಣ್ಣೀರು ಬರುತ್ತದೆ. ಜನ ಎಷ್ಟೇ ಕಷ್ಟ ಪಡುತ್ತಿದ್ದರೂ ಅವರು ಕಣ್ಣೀರು ಹಾಕಲ್ಲ ಎಂದು ಹೇಳಿದರು.