ETV Bharat / state

ಕ್ರೀಡೆಗೆ ಒತ್ತು ನೀಡುವುದೇ ನಮ್ಮ ಮುಖ್ಯ ಧ್ಯೇಯ: ಶಾಸಕ ಕೃಷ್ಣ ಭೈರೇಗೌಡ - ನಮ್ಮ ಕ್ರೀಡಾ ಹಬ್ಬ

ಶಾಸಕ ಕೃಷ್ಣ ಭೈರೇಗೌಡ ಅವರು ಬ್ಯಾಟರಾನಯನಪುರದ ಸಹಕಾರನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಹಾಗೂ 'ನಮ್ಮ ಕ್ರೀಡಾ ಹಬ್ಬ' ಉದ್ಘಾಟನೆ ಮಾಡಿದರು.

Krishna Byre Gowda Inaugurated Indoor Auditorium
ಒಳಾಂಗಣ ಕ್ರೀಡಾಂಗಣ ಹಾಗೂ 'ನಮ್ಮ ಕ್ರೀಡಾ ಹಬ್ಬ' ಉದ್ಘಾಟನೆ
author img

By

Published : Oct 2, 2022, 2:08 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ದೈಹಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆ ದೈಹಿಕ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆರೋಗ್ಯ ಭಾಗ್ಯ ದೊರೆಯುತ್ತದೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಬ್ಯಾಟರಾನಯನಪುರದ ಸಹಕಾರ ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಹಾಗೂ 'ನಮ್ಮ ಕ್ರೀಡಾ ಹಬ್ಬ' ಉದ್ಘಾಟನೆ ಮಾಡಿ ಮಾತನಾಡಿದ ಅವರು, ದೇಹವನ್ನು ದಂಡಿಸುವ ಮೂಲಕ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಬೆವರಿನ ಜತೆ ನಮ್ಮ ಒತ್ತಡ ಕೂಡ ಹೊರಟು ಹೋಗುತ್ತದೆ. ಎಲ್ಲರೂ ಹೆಚ್ಚು ಆರೋಗ್ಯ ಪೂರ್ಣವಾಗಿ ಇರಲಿ ಎಂಬ ಉದ್ದೇಶದಿಂದ ಈ ಬೃಹತ್‌ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಈಗ ವೀಡಿಯೋ, ಮೊಬೈಲ್‌ ಗೇಮ್‌ಗಳಲ್ಲಿ ಹೆಚ್ಚು ಮುಳುಗಿರುತ್ತಾರೆ. ಈ ಗೀಳನ್ನು ತಪ್ಪಿಸಿ ಮಕ್ಕಳನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು, ಅತಿ ಕಡಿಮೆ ಶುಲ್ಕದಲ್ಲಿ ವಿವಿಧ ಕ್ರೀಡೆಯಲ್ಲಿ ಹಾಗೂ ದೈಹಿಕ ವ್ಯಾಯಾಮ ಮಾಡಲು ಅನುಕೂಲವಾಗಲೆಂದು ಈ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಾಡಿನೆಲ್ಲೆಡೆ ದಸರಾ ಹಬ್ಬ ನಡೆಯುತ್ತಿದೆ. ದಸರಾ ಎಂದರೆ ಹಿಂದಿನಂದಲೂ ಸಂಭ್ರಮ ಹೆಚ್ಚಾಗಿಯೇ ಇರುತ್ತದೆ. ದಸರಾ ಸಂದರ್ಭದಲ್ಲಿ ಮೊದಲಿನಿಂದಲೂ ಕ್ರೀಡೆ ಕೂಡ ನಡೆಯುತ್ತಿತ್ತು. ಇದರಂತೆ ನಾವು ಕೂಡ ಈ ನಾಡಹಬ್ಬ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ 'ನಮ್ಮ ಕ್ರೀಡಾ ಹಬ್ಬ'ʼ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ಕ್ರೀಡಾಂಗಣ ಕೂಡ ಇಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೆಂಪಾಪುರದಲ್ಲಿ ಒಳಾಂಗಣ ಈಜುಕೊಳ ಕೂಡ ಉದ್ಘಾಟನೆ ಮಾಡಲಿದ್ದೇವೆ ಎಂದು ಶಾಸಕ ಕೃಷ್ಣ ಭೈರೇಗೌಡ ತಿಳಿಸಿದರು.

ಕೇಂದ್ರ ಮಾಜಿ ಸಚಿವ ಡಿ.ವಿ ಸದಾನಂದಗೌಡ ಮಾತನಾಡಿ, ಎಲ್ಲದ್ದಕ್ಕೂ ಕಾಲ ಕೂಡಿಬರಬೇಕು. ಅದಕ್ಕಾಗಿಯೇ ಕೊರೊನಾ ನಂತರ ಈ ಬೃಹತ್‌ ಸೌಲಭ್ಯವುಳ್ಳ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಾಗುತ್ತಿದೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪೂರಕ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಸಹಕಾರ ನಗರದ ಒಳಾಂಗಣ ನಿಜಕ್ಕೂ ಅದ್ಭುತವಾಗಿದೆ ಎಂದರು.

ಸರ್ಕಾರಿ ಯೋಜನೆಗಳು ಉದ್ಘಾಟನೆವರೆಗೂ ಚೆನ್ನಾಗಿರುತ್ತದೆ. ಆ ನಂತರ ಅದನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಆದರೆ ಈ ಸಹಕಾರನಗರ ಒಳಾಂಗಣ ಕ್ರೀಡಾಂಗಣದ ಉಸ್ತುವಾರಿಗಾಗಿಯೂ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ ಎಂದು ಶಾಸಕರು ತಿಳಿಸಿದಾಗ ನಿಜಕ್ಕೂ ಸಂತಸವಾಯಿತು. ಈ ರೀತಿಯ ವ್ಯವಸ್ಥೆ ಎಲ್ಲೆಡೆ ಸಿಗಬೇಕು. ಈ ಕ್ಷೇತ್ರದಲ್ಲಿ ಈ ಕ್ರೀಡಾಂಗಣ ಹಾಗೂ ನಮ್ಮ ಕ್ರೀಡಾ ಹಬ್ಬ ಆಯೋಜಿಸುವ ಮೂಲಕ ಶಾಸಕರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಕ್ರೀಡಾ ಹಬ್ಬದಲ್ಲಿ ಬ್ಯಾಡ್ಮಿಂಟನ್‌, ಸ್ಕ್ವಾಷ್‌, ವಾಲಿಬಾಲ್‌ ಸೇರಿದಂತೆ ವಿವಿಧ ಕ್ರೀಡಾ ಸ್ಫರ್ಧೆ ಆಯೋಜಿಸಲಾಗಿದೆ. ಸಮಾರಂಭದಲ್ಲಿ 1700 ಕ್ರೀಡಾಕಾರರು ಭಾಗವಹಿಸಿದ್ದಾರೆ.

ಇದನ್ನೂ ಓದಿ: ಇಂದು ಗಾಂಧಿ ಜಯಂತಿ, ನಕಲಿ ಗಾಂಧಿಗಳ ಬಗ್ಗೆ ಏಕೆ ಮಾತನಾಡಲಿ: ಸಿಎಂ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.