ಬೆಂಗಳೂರು: ಒಂದು ವರ್ಷಕ್ಕೆ 40 ಲಕ್ಷ ರೂ. ಆದಾಯವಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರು 124 ಕೋಟಿ ರೂ.ಗಳ ಸಾಲ ಕಟ್ಟಿದ್ದಾರೆ. ಹಾಗಾದರೆ ಅವರ ಆದಾಯದ ಮೂಲ ಯಾವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷ ಎಂಟು ತಿಂಗಳ ಅವಧಿಯಲ್ಲಿ ಇದನ್ನು ನೀವು ಹೇಗೆ ಸಂಪಾದನೆ ಮಾಡಿದ್ದೀರಿ?. 124 ಕೋಟಿ ರೂ. ಸಾಲ ನೀಡಲು 200 ಕೋಟಿ ರೂ ವ್ಯಾಲುವೇಶನ್ ಇರಬೇಕು. ಆದರೆ, ಲೋಕಾಯುಕ್ತಕ್ಕೆ ಸಲ್ಲಿಸಿರುವ ಆದಾಯ ಪ್ರಮಾಣ ಪತ್ರದಲ್ಲಿ ಈ ಬಗ್ಗೆ ಹೇಳಿಲ್ಲ ಎಂದರು.
ನಾವು ನಿಂತಿರುವ ಜಾಗವೇ ದೇವಾಲಯ: ನನಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದಿದ್ದಾರೆ. ನಾವು ನಿಂತಿರುವ ಜಾಗವೇ ದೇವಾಲಯ. ಧರ್ಮಸ್ಥಳದ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ಆದರೆ ರಾಜೇಗೌಡರು ದಾಖಲೆಗೆ ಉತ್ತರ ನೀಡಬೇಕು. ಸುಮ್ಮನೆ ದಾರಿ ತಪ್ಪಿಸಬಾರದು. 124 ಕೋಟಿ ರೂ. ಗಳ ಆದಾಯ ಮೂಲವನ್ನು ಮೊದಲು ರಾಜೇಗೌಡರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಾಜಿ ಶಾಸಕ ವಿ ಎಸ್ ಪಾಟೀಲ್, ಶ್ರೀನಿವಾಸ್ ಭಟ್ ಕಾಂಗ್ರೆಸ್ ಸೇರ್ಪಡೆ