ಬೆಂಗಳೂರು: ಜೆಡಿಎಸ್ ನ ಮಾಜಿ ಶಾಸಕ ಮಧು ಬಂಗಾರಪ್ಪ ಪಕ್ಷ ತೊರೆಯಲ್ಲ ಅವರು ನಮ್ಮೊಂದಿಗೇ ಇರಲಿದ್ದಾರೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಸಹೋದರನ ರೀತಿ ನೋಡಿಕೊಂಡು ಬಂದಿದ್ದಾರೆ. ಸಣ್ಣಪುಟ್ಟ ಅಸಮಾಧಾನ ಇದ್ದರೆ ಕರೆದು ನೇರವಾಗಿ ಮಾತನಾಡಿ ಸರಿಪಡಿಸಲಿದ್ದಾರೆ ಎಂದರು.
ಮಧು ಬಂಗಾರಪ್ಪ ನಮ್ಮ ಕುಟುಂಬದ ಸದಸ್ಯರಿದ್ದಂತೆ ಹಾಗಾಗಿ ಅವರು ನಮ್ಮಲ್ಲೇ ಇದ್ದಾರೆ, ಗೊಂದಲವಿದ್ದರೆ ಕುಮಾರಸ್ವಾಮಿ ಹಾಗು ದೇವೇಗೌಡರು ಮಾತನಾಡಿ ಸರಿಪಡಿಸಲಿದ್ದಾರೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.