ಬೆಂಗಳೂರು: ಯಾರ ಮನಸ್ಸು ನೋಯಿಸುವ ಉದ್ದೇಶದಿಂದ ನಾನು ಮಾತನಾಡಿಲ್ಲ. ಮಲೆನಾಡಿನ, ಪಶ್ಚಿಮ ಘಟ್ಟದ ಜನರ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ಇದರಿಂದ ಯಾರದಾದರೂ ಮನಸ್ಸಿಗೆ ನೋವಾಗಿದ್ದರೆ ಖಂಡಿತ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆ ಹೆಸರು ಪ್ರಸ್ತಾಪಿಸಿ ವರ್ಣಬೇಧ ಬರುವಂತೆ ನೀಡಿದ್ದ ಹೇಳಿಕೆಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
-
..ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆಯವರನ್ನು ಟೀಕಿಸುವ ಭರದಲ್ಲಿ, ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ, ಶ್ರೀಯುತ ಖರ್ಗೆಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು ಎಂದು ವಿನಂತಿಸುತ್ತೇನೆ.@kharge @INCKarnataka
— Araga Jnanendra (@JnanendraAraga) August 2, 2023 " class="align-text-top noRightClick twitterSection" data="
">..ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆಯವರನ್ನು ಟೀಕಿಸುವ ಭರದಲ್ಲಿ, ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ, ಶ್ರೀಯುತ ಖರ್ಗೆಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು ಎಂದು ವಿನಂತಿಸುತ್ತೇನೆ.@kharge @INCKarnataka
— Araga Jnanendra (@JnanendraAraga) August 2, 2023..ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆಯವರನ್ನು ಟೀಕಿಸುವ ಭರದಲ್ಲಿ, ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ, ಶ್ರೀಯುತ ಖರ್ಗೆಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು ಎಂದು ವಿನಂತಿಸುತ್ತೇನೆ.@kharge @INCKarnataka
— Araga Jnanendra (@JnanendraAraga) August 2, 2023
ಶಾಸಕರ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಗಳವಾರ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ನಮ್ಮ ಅರಣ್ಯ ಸಚಿವರು ನೀಡಿರುವ ಹೇಳಿಕೆಯ ವಿರುದ್ಧ ಒಂದು ಪ್ರತಿಭಟನೆ ನಡೆಯುತ್ತಿತ್ತು. ಈ ಸಭೆಯಲ್ಲಿ ನಾನು ಮಾತನಾಡಿದ್ದೆ, ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ನಾವು ಬದ್ಧ ಎಂದು ಮಾಧ್ಯಮಗಳ ಮೂಲಕ ಸಚಿವರು ಹೇಳಿದ್ದ ಹಿನ್ನೆಲೆಯಲ್ಲಿ ನಮ್ಮ ಮಲೆನಾಡಿನ ಜನ ಭಯಭೀತರಾಗಿದ್ದಾರೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಪ್ರತಿಭಟನೆ ನಡೆಸಿದ್ದು ಆ ಸಭೆಯಲ್ಲಿ ನಾನು ಮಾತನಾಡುವಾಗ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಆದರೆ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನಾನು ಹೇಳಿಯೇ ಇಲ್ಲ, ಅಂತಹ ಹಿರಿಯ ನಾಯಕರ ಬಗ್ಗೆ ಟೀಕೆ ಮಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ, ನಮ್ಮ ಅವರ ಪಕ್ಷ ಬೇರೆ ಬೇರೆಯಾದರೂ ವೈಯಕ್ತಿಕವಾಗಿ ಅವರ ಮುಖಂಡತ್ವದ ಬಗ್ಗೆ ಹಾಗೂ ಅವರ ವಯಸ್ಸು ಅನುಭವದ ಬಗ್ಗೆ ನಾನು ಗೌರವ ಇಟ್ಟುಕೊಂಡೇ ಮಾತನಾಡುತ್ತೇನೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಾನು ಯಾವುದೇ ರೀತಿಯ ಮಾತನಾಡಿಲ್ಲ, ಅದರ ಬಗ್ಗೆ ತಪ್ಪು ಅಭಿಪ್ರಾಯ ಹೋಗಬಾರದು ಎಂದು ಮನವಿ ಮಾಡಿದರು.
"ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಕೂಡ ನಾವು ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ರಾಜ್ಯದ ಪರವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ, ಈಗ ಏಕಾಏಕಿಯಾಗಿ ಖಂಡ್ರೆ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಹೇಳಿಕೆ ನೀಡುತ್ತಿರುವುದು ಬೇಸರ ತಂದಿದೆ. ಇದರಿಂದಾಗಿ ನಾನು ಮಾತನಾಡಿದ್ದೇನೆಯೇ ಹೊರತು ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಸಿಗೆ ನೋವು ಮಾಡುವುದಾಗಲಿ, ಈಶ್ವರ ಖಂಡ್ರೆ ಅವರ ಮನಸ್ಸಿಗೆ ನೋವು ಮಾಡುವುದಾಗಲಿ ನಮ್ಮ ಉದ್ದೇಶ ಅಲ್ಲ" ಎಂದರು.
"ಬಯಲುಸೀಮೆಯಲ್ಲಿ ಮಲೆನಾಡಿನ ರೀತಿ ಮರ, ಗಿಡಗಳು ಇರುವುದಿಲ್ಲ, ರಣ ಬಿಸಿಲು ಇರುತ್ತದೆ, ಆ ಭಾಗದ ಜನ ಶ್ರಮಜೀವಿಗಳು ಅವರ ಬಣ್ಣ ಕೂಡ ಆ ಬಿಸಿಲಿಗೆ ಆ ರೀತಿ ಆಗಿರುತ್ತದೆ. ಬಹಳಷ್ಟು ಜನ ಆ ಬಣ್ಣದಿಂದ ಕೂಡಿದ್ದಾರೆ ಎಂದಿದ್ದೇನೆಯೇ ಹೊರತು ಆ ಭಾಗದ ಜನರ ಬಗ್ಗೆ ಆಗಲಿ, ಆ ಬಣ್ಣದ ಬಗ್ಗೆ ಆಗಲಿ ಮಾತನಾಡಿಲ್ಲ. ರಾಜ್ಯದ ಜನ ಮತ್ತು ದೇಶದ ಜನರನ್ನ ನಾನು ಗೌರವಿಸುತ್ತೇನೆ. ಯಾವ ಕಾರಣಕ್ಕೂ ನನ್ನ ಬಾಯಲ್ಲಿ ವರ್ಣಬೇಧದಂತಹ ವಿಚಾರ ಬರುವುದಿಲ್ಲ" ಎಂದು ಸ್ಪಷ್ಟೀಕರಣ ನೀಡಿದರು.
"ಕಸ್ತೂರಿ ರಂಗನ್ ವರದಿ ಸಂದರ್ಭದಲ್ಲಿ ಮಲೆನಾಡಿನ ಜನರ ರಕ್ಷಣೆಗೆ ಸಚಿವ ಖಂಡ್ರೆ ಅವರು ನಿಲ್ಲಬೇಕು, ಆ ಭಾಗದ ಶಾಸಕರ ಸಭೆ ಕರೆಯಲಿ. ನಾವು ಅಲ್ಲಿನ ಹಿನ್ನೆಲೆಯನ್ನು ಹೇಳುತ್ತೇವೆ. ನಮ್ಮ ತೊಂದರೆಯನ್ನು ಸಾಧಕ - ಬಾದಕಗಳನ್ನ ಹೇಳುತ್ತೇವೆ. ನಮ್ಮ ರಕ್ಷಣೆಗೆ ಅವರು ನಿಲ್ಲಲಿ. ಕಡೆಯದಾಗಿ, ಯಾರ ಮನಸ್ಸನ್ನು ನೋಯಿಸುವ ಉದ್ದೇಶದಿಂದ ನಾನು ಮಾತನಾಡಿಲ್ಲ. ಮಲೆನಾಡಿನ, ಪಶ್ಚಿಮ ಘಟ್ಟದ ಜನರ ಹಿತ ದೃಷ್ಟಿಯಿಂದ ನಾನು ಮಾತನಾಡಿದ್ದೇನೆ. ಇದರಿಂದ ಮನಸ್ಸಿಗೆ ನೋವಾಗಿದ್ದರೆ ಖಂಡಿತ ವಿಷಾದ ವ್ಯಕ್ತಪಡಿಸುತ್ತೇನೆ" ಎಂದರು.
ಟ್ವೀಟ್ ಮೂಲಕ ಟೀಕೆ: "ಹೇಳಿಕೆಗಳನ್ನು ತಿರುಚಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸುವುದರಲ್ಲಿ ಕಾಂಗ್ರೆಸ್ಸಿನವರು ನಿಸ್ಸೀಮರು. ನಾನು ಉತ್ತರ ಕರ್ನಾಟಕದ ಬಿಸಿಲಿನ ತಾಪದ ಬಗ್ಗೆ ಉಲ್ಲೇಖ ಮಾಡಿ, ಅದಕ್ಕೆ ಖರ್ಗೆ ಅವರ ಉದಾಹರಣೆ ನೀಡಿದ್ದೇನೆ ಅಷ್ಟೇ. ಅರಣ್ಯ ಸಚಿವರಾಗಿರುವವರು ಹೆಚ್ಚಿನವರು ಆ ಭಾಗದ ಜನಪ್ರತಿನಿಧಿಗಳೇ ಆಗಿರುವುದರಿಂದ ಮಲೆನಾಡ ಜನಗಳ, ಇಲ್ಲಿನ ಮರಗಿಡಗಳ ಸಮಸ್ಯೆ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ವಿನಃ ಖರ್ಗೆ ಅವರ ಬಗ್ಗೆ ಯಾವುದೇ ಅವಹೇಳನ ಮಾಡಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಇಂತಹ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದನ್ನು ಕಾಂಗ್ರೆಸ್ನವರು ನಿಲ್ಲಿಸಬೇಕು. ದಲಿತರನ್ನು ಗೌರವಿಸುವುದನ್ನು ಕಾಂಗ್ರೆಸ್ನಿಂದ ನಾವು ಕಲಿಯಬೇಕಾಗಿಲ್ಲ. ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾಜ್ಯದ ಜನತೆ ದಡ್ಡರಲ್ಲ" ಎಂದು ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.