ETV Bharat / state

ಮಿಸ್ಟರ್ ಆಂಧ್ರ ಎಂದೇ ಗುರುತಿಸಿಕೊಂಡಿದ್ದ ಬಾಡಿ ಬಿಲ್ಡರ್: 32 ಸರಗಳ್ಳತನ‌ ಪ್ರಕರಣಗಳ ರೂವಾರಿ ಅರೆಸ್ಟ್ - ಸೈಯ್ಯದ್ ಬಾಷಾ ಹಾಗೂ ಶೇಖ್‌ ಆಯೂಬ್ ಸರಗಳ್ಳತನ

ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ ಸೈಯ್ಯದ್ ಬಾಷಾ ಹಾಗೂ ಶೇಖ್‌ ಆಯೂಬ್ ಸರಗಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರೆ.

theft
ಸೈಯ್ಯದ್ ಬಾಷಾ ಹಾಗೂ ಶೇಖ್‌ ಆಯೂಬ್
author img

By

Published : Apr 25, 2023, 10:34 AM IST

ಬೆಂಗಳೂರು: ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತಗೊಂಡು ಮಿಸ್ಟರ್ ಆಂಧ್ರ ಎಂದೇ ಬಿರುದು ಪಡೆದುಕೊಂಡಿದ್ದ ಯುವಕ ಸುಲಭವಾಗಿ ಹಣ ಸಂಪಾದ‌ನೆ ಮಾಡಲು ವಾಮ ಮಾರ್ಗ ತುಳಿದು ಪೊಲೀಸರ ಅತಿಥಿಯಾಗಿದ್ದಾನೆ. ಹೌದು ಆಂಧ್ರ ಸೇರಿ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್ ಸೇರಿ ಇಬ್ಬರನ್ನು ಗಿರಿನಗರ‌ ಠಾಣೆ ಆರಕ್ಷಕರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌‌

ಮಿಸ್ಟರ್ ಆಂಧ್ರ ಖ್ಯಾತಿಯ ಸೈಯ್ಯದ್ ಬಾಷಾ ಹಾಗೂ ಸಹಚರ ಶೇಖ್‌ ಆಯೂಬ್ ಬಂಧಿತ ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಆಂಧ್ರದ ಕಡಪ ಮೂಲದ ಸೈಯ್ಯದ್ ಭಾಷಾ 2005 ರಿಂದ 2015 ರ ಕುವೈತ್​ನಲ್ಲಿ ಕಾರು ಚಾಲಕನಾಗಿ ಕೆಲಸ‌ ಮಾಡಿಕೊಂಡಿದ್ದ. ವಿದೇಶದಲ್ಲಿರುವಾಗಲೇ ಗೋಲ್ಡ್ ಸ್ಮಗ್ಲಿಂಗ್​ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದ ಈತ ದೈಹಿಕ‌ ಕಸರತ್ತು ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ‌. ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ.‌ ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಅಪರಾಧ ಲೋಕದ ಪಾತಕಿಗಳ ಸಂಪರ್ಕ ಬೆಳೆಸಿಕೊಂಡು ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.‌

ಹೀಗಾಗಿ ಸ್ಥಳೀಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸೆರೆಮನೆಯಲ್ಲಿರುವಾಗ ಕೈದಿಯೊಬ್ಬ ಬೆಂಗಳೂರಿನಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಸಲಹೆ ನೀಡಿದ್ದ. ಇದರಂತೆ ಜಾಮೀನು ಪಡೆದು ಹೊರಬಂದು ಬೆಂಗಳೂರಿಗೆ ಬಂದಿದ್ದ. ಆರೋಪಿ ಗಿರಿನಗರ ಹಾಗೂ‌ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ ಭೀತಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ: ರಾಜಧಾನಿಗೆ ಬಂದು ಕದ್ದ ಬೈಕ್‌ನಲ್ಲಿ ಸರಗಳ್ಳತನ‌ ಮಾಡಲು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಒಂಟಿಯಾಗಿ ಓಡಾಡುವ ವೃದ್ದೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ‌ ಮಾಡುತ್ತಿದ್ದ. ಕೃತ್ಯವೆಸಗಿದ ಬಳಿಕ ಬೆಂಗಳೂರು ತೊರೆಯದೇ ಠಾಣಾ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದರು.

ಸ್ಥಳೀಯ ಪ್ರದೇಶಗಳಲ್ಲಿ‌ ಓಡಾಡಿಕೊಂಡಿದ್ದರೆ ಪೊಲೀಸರಿಗೆ ನಾವು ಸಿಗುವುದಿಲ್ಲ ಎಂದು ಖದೀಮರು ಭಾವಿಸಿಕೊಂಡಿದ್ದರು. ಬಂಧಿಸಲು ಪೊಲೀಸರಿಗೆ ಸಹಾಯವಾಗಲಿದೆ‌‌ ಎಂದು ಅರಿತು ಆರೋಪಿಗಳು ಮೊಬೈಲ್ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕಳ್ಳರು ಚಾಪೆ ಕೆಳಗೆ ತೂರಿದರೆ, ಪೊಲೀಸರು ಇಲ್ಲಿ ರಂಗೋಲಿ ಕೆಳಗೆ ತೂರಿ ಸರಗಳ್ಳರನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯ ಬಿಲ್ಡರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ

ಮೊದಲಬಾರಿ ಕಳ್ಳತನ ಮಾಡಿ ದೇಹದ ತೂಕ ಕಳೆದುಕೊಂಡಿದ್ದ ಆರೋಪಿ: ಬೆಂಗಳೂರಿನ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ಕಳೆದ ಡಿಸೆಂಬರ್​ 4ರಂದು ಸಂಜೆ 6 ಗಂಟೆ ಸುಮಾರಿಗೆ ರುಕ್ಮಿಣಿ ಎಂಬ ವೃದ್ಧೆಯ 44.7 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗರಿಸಿ ಆರೋಪಿ ಮಂಜುನಾಥ್​ ಪರಾರಿಯಾಗಿದ್ದ. ಈತ ಅಸಲಿ ವೃತ್ತಿಯಲ್ಲಿ ಜಿಮ್​ ಟ್ರೈನರ್​ ಆಗಿದ್ದ, ಆದರೆ ಸಂಬಳ ಸಾಲದೇ ಮೊದಲ ಬಾರಿ ಸರಗಳ್ಳತನದ ಹಾದು ಹಿಡಿದಿದ್ದ. ಕಳ್ಳತನದ ಬಳಿಕ ಪ್ರತಿ ದಿನ ಪೊಲೀಸ್​ ಠಾಣೆ ಮುಂಭಾಗದ ಟೀ ಅಂಗಡಿಯಲ್ಲಿ ನಿಂತು ಅಲ್ಲಿನ ಚಲನವಲನಗಳನ್ನು ಗಮನಿಸುತ್ತಿದ್ದ.

ಈತನ ಮನೆ ಠಾಣೆಯ ಹಿಂಬಾಗವೇ ಇದ್ದುದರಿಂದ ಇದನೆಲ್ಲ ಮಾಡಲು ಸಹಕಾರಿಯಾಗಿತ್ತು. ಇಷ್ಟೆಲ್ಲಾ ಚಾಣಕ್ಯನಾದರೂ ಈತನಿಗೆ ತಾನು ಕಳ್ಳತನ ಮಾಡಿದ್ದೇನೆಂಬ ಕೊರಗು ಭಯ ಮನಸ್ಸಲ್ಲಿ ಇದ್ದದರಿಂದ ಆತನ ದೇಹದ ತೂಕ ಕಡಿಮೆಯಾದದಲ್ಲದೇ, ಮಾನಸಿಕ ನೆಮ್ಮದಿ ಕೂಡ ಕಳೆದುಕೊಂಡಿದ್ದ. ಆದರೆ ಪೊಲೀಸರು ತಮ್ಮ ಸಿಸಿಟಿವಿಯಲ್ಲಿ ಆರೋಪಿಯ ಚಲನವಲನಗಳನ್ನು ಗಮನಿಸಿದ್ದರಿಂದ ಅನುಮಾನ ಮತ್ತು 1 ತಿಂಗಳ ಪ್ರಯತ್ನದ ನಂತರ ಈತನೇ ಆರೋಪಿ ಎಂದು ತಿಳಿದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಇನ್ಸ್​​ಪೆಕ್ಟರ್​ ಉದಯರವಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಡಿ ಜೆ ಹಳ್ಳಿಯ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರ, ಮಾದಕ ಪದಾರ್ಥಗಳು ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.