ETV Bharat / state

ಅತ್ತಿಬೆಲೆ ಪೊಲೀಸರ ನೆರವು.. ಎರಡು ವರ್ಷದಿಂದ ಕಾಣದ ಮಗ ತಂದೆಗೆ ದೊರಕಿದ

ಪ್ರೀತಿಸಿ ಮದುವೆಯಾಗಿದ್ದ ಗಂಡ ಹೆಂಡತಿ ಜಗಳವಾಡಿ ಗಂಡ ಮನೆ ಬಿಟ್ಟು ಹೋಗಿದ್ದು, ಬಳಿಕ ತಂದೆ ತನ್ನ ಮಗನಿಗಾಗಿ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮಗುವನ್ನು ಪತ್ತೆ ಹಚ್ಚಿದ ಪೊಲೀಸರು ತಂದೆಗೆ ಒಪ್ಪಿಸಿದ್ದಾರೆ.

missed-boy-found-by-police
ಎರಡು ವರ್ಷದಿಂದ ಕಾಣದ ಪುಟ್ಟ ಮಗ : ಅತ್ತಿಬೆಲೆ ಪೊಲೀಸರ ನೆರವಿನಿಂದ ಪತ್ತೆ
author img

By

Published : Nov 17, 2022, 10:40 PM IST

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವಿನ ಮುನಿಸಿಗೆ ಇಬ್ಬರು ಮಕ್ಕಳು ಅನಾಥರಾಗಿ, ಎರಡು ವರ್ಷದ ಬಳಿಕ ಅತ್ತಿಬೆಲೆ‌ ಪೊಲೀಸರ ಶ್ರಮದಿಂದ ಮತ್ತೆ ತಾಯಿ ಮಡಿಲು ಸೇರಿರುವ ಘಟನೆ ನಡೆದಿದೆ.

ಗಂಡ ಹೆಂಡತಿ ಜಗಳವಾಡಿಕೊಂಡು, ಇಬ್ಬರು‌ ಮಕ್ಕಳನ್ನು ಬಿಟ್ಟು ಪರಾರಿಯಾದ ತಂದೆ ಎರಡು ವರ್ಷದ ಬಳಿಕ ತಮ್ಮ ಮಗನನ್ನು ಹುಡುಕಿಕೊಡುವಂತೆ ಅತ್ತಿಬೆಲೆ ಪೊಲೀಸರ ಮೊರೆ ಹೋಗಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಅತ್ತಿಬೆಲೆ ಇನ್ಸ್ ಪೆಕ್ಟರ್ ಕೆ ವಿಶ್ವನಾಥ್ ತಂಡ ಮಗುವನ್ನು ಪತ್ತೆ ಮಾಡಿದ್ದಾರೆ.

ಹಿನ್ನೆಲೆ: 2012ರಲ್ಲಿ ಮಮತಾರನ್ನು ಪ್ರೀತಿಸಿ ಮದುವೆಯಾಗಿದ್ದ ಬಾಲಮಣಿಗೆ ಇಬ್ಬರು ಮಕ್ಕಳಿದ್ದರು. ಒಂದು ಹೆಣ್ಣು‌ಮಗು ಸ್ವಲ್ಪ ವಿಕಲಾಂಗತೆಯಿಂದ ಕೂಡಿದ್ದು, ಗಂಡು ಮಗು ಆರೋಗ್ಯವಾಗಿತ್ತು. ಬೆಂಗಳೂರಿನ‌ ಜಯನಗರದಲ್ಲಿ ವಾಸವಿದ್ದ ದಂಪತಿ ನಡುವೆ 2018ರಲ್ಲಿ ಜಗಳವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳನ್ನು ತಾಯಿ ಬಳಿಯೇ ಬಿಟ್ಟು ಬಾಲಮಣಿ ನಾಪತ್ತೆಯಾಗಿದ್ದರು.

ಬಳಿಕ ಈ ಮಕ್ಕಳನ್ನು ಒಂಟಿಯಾಗಿ ಸಾಕಲಾರದೆ ಮಮತಾ ತಮ್ಮ ಗಂಡು ಮಗುವನ್ನು ಬೇರೋಬ್ಬರಲ್ಲಿ ಬಿಟ್ಟು ಹೆಣ್ಣು ಮಗುವನ್ನು ಸಾಕುತ್ತ ಒಂಟಿಯಾಗಿ ಆನೇಕಲ್ ನ ಬಳ್ಳೂರಿನಲ್ಲಿ ವಾಸವಾಗಿದ್ದರು. ಬಳಿಕ ಬಳ್ಳೂರಿಗೆ ಆಗಮಿಸಿದ ಬಾಲಮಣಿ ಹೆಣ್ಣುಮಗುವನ್ನು ಕಂಡಿದ್ದಾರೆ. ಗಂಡು ಮಗುವಿನ ಬಗ್ಗೆ ವಿಚಾರಿಸಿದಾಗ, ಮಮತಾ ಮಗನನ್ನು ಎರಡು ವರ್ಷದವರೆಗೆ ಹಾಸ್ಟೆಲ್​ನಲ್ಲಿರಿಸಿರುವುದಾಗಿ ಬಾಲಮಣಿಗೆ ಸುಳ್ಳು ಹೇಳಿದ್ದರು. ಬಳಿಕ ಅನುಮಾನಗೊಂಡ ಬಾಲಮಣಿ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಅತ್ತಿಬೆಲೆ ಪೊಲೀಸರು ಕೃಷ್ಣವೇಣಿ ಹಾಗು ಕವಿತಾ ಎಂಬವರಿಂದ ಮಗುವನ್ನು ಕರೆ ತಂದಿದ್ದಾರೆ. ತಾಯಿ ಮಮತಾ ತಮಿಳುನಾಡಿನ ಈರೋಡಿನ ಕೃಷ್ಣವೇಣಿ ಎಂಬವರಿಗೆ ಮಗುವನ್ನು ನೀಡಿದ್ದು, ಅಲ್ಲಿಂದ ಮಗುವನ್ನು ಪತ್ತೆಮಾಡಿ ಮನೆಗೆ ಕರೆತಂದಿದ್ದಾರೆ.

ಇದನ್ನೂ ಓದಿ : ಟಾಕಿಂಗ್ ಟಾಮ್ ಮಾದರಿಯ ಬೊಂಬೆಯೊಳಗೆ ಡ್ರಗ್ಸ್ ಇಟ್ಟು ಮಾರಾಟ.. ಬೆಂಗಳೂರಲ್ಲಿ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.