ETV Bharat / state

ಮದನಪಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿ‌ ದುಷ್ಕರ್ಮಿಗಳು ಪರಾರಿ - k r pura govt hospital

ರೌಡಿಶೀಟರ್ ಶಿವಶಂಕರ್ ರೆಡ್ಡಿ ಹಾಗೂ ಚಾಲಕ ಅಶೋಕ್ ರೆಡ್ಡಿ ಗುಂಡಿನ ದಾಳಿಗೊಳಗಾಗಿದ್ದು, ಇಬ್ಬರನ್ನೂ ಕೆ ಆರ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಗುಂಡಿನ ದಾಳಿ ನಡೆದ ಸ್ಥಳ
ಗುಂಡಿನ ದಾಳಿ ನಡೆದ ಸ್ಥಳ
author img

By

Published : Dec 8, 2022, 9:22 PM IST

Updated : Dec 8, 2022, 10:39 PM IST

ಬೆಂಗಳೂರು: ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸೇರಿ ಇಬ್ಬರ ಮೇಲೆ ಹಾಡುಹಗಲೇ ಗುಂಡಿನ ದಾಳಿ ನಡೆದಿದೆ. ಈ ಘಟನೆ ಕೆ ಆರ್‌ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೌಡಿಶೀಟರ್ ಶಿವಶಂಕರ್ ರೆಡ್ಡಿ ಹಾಗೂ ಚಾಲಕ ಅಶೋಕ್ ರೆಡ್ಡಿ ಗುಂಡಿನ ದಾಳಿಗೊಳಗಾಗಿ ಗಾಯಗೊಂಡಿದ್ದು ಕೆ ಆರ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಚಾಲಕ ಅಶೋಕ್ ರೆಡ್ಡಿ
ಚಾಲಕ ಅಶೋಕ್ ರೆಡ್ಡಿ

ಶಿವಶಂಕರ್ ರೆಡ್ಡಿ ವಿರುದ್ಧ ಮದನಪಲ್ಲಿ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣ ದಾಖಲಾಗಿದ್ದು, ಕಳೆದ ಆರು ದಿನಗಳ ಹಿಂದೆ ಕುರುಡುಸೊನ್ನೇನಹಳ್ಳಿಯ ಹ್ಯಾಪಿ ಗಾರ್ಡನ್ ಲೇಔಟ್​ನ ಬಳಿ ಮನೆ ನಿರ್ಮಾಣಕ್ಕಾಗಿ ನಗರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಶೀಟರ್ ಶಿವಶಂಕರ್ ರೆಡ್ಡಿ
ರೌಡಿಶೀಟರ್ ಶಿವಶಂಕರ್ ರೆಡ್ಡಿ

ನಾಲ್ಕು ಬಾರಿ ಟ್ರಿಗರ್​ ಒತ್ತಿದ ದುಷ್ಕರ್ಮಿಗಳು: ಶಿವಶಂಕರ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿರುವ ಆರೋಪಿಗಳು ಮಧ್ಯಾಹ್ನ ಏಕಾಏಕಿ ಮನೆ ನಿರ್ಮಾಣ ಮಾಡುತ್ತಿದ್ದ ಜಾಗದ ಬಳಿ ರಿವಾಲ್ವಾರ್​ನಿಂದ ಆರು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ.‌ ಆರೋಪಿಗಳು ಆಂಧ್ರದಿಂದಲೇ ಬಂದು ಕೃತ್ಯವೆಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಹಾಸನ: ಪತ್ನಿ ಕೊಲೆಗೈದ ಆರೋಪಿ ಪತಿಯ ಬಂಧನ

Last Updated : Dec 8, 2022, 10:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.