ETV Bharat / state

ಬೆಳ್ಳಂಬೆಳಗ್ಗೆಯೇ ಸಚಿವರಿಂದ ಮಾರ್ಕೆಟ್ ರೌಂಡ್ಸ್.. ರೈತರ ಕೃಷಿ ಉತ್ಪನ್ನಗಳ ಮಾರಾಟ ಸರಾಗ.. - Ministers visited the Batarayanapur APMC market

ಇಂದು ಬೆಂಗಳೂರಿನ ಬ್ಯಾಟರಾಯನಪುರ ಎಪಿಎಂಸಿ ಮಾರುಕಟ್ಟೆ ಹಾಗೂ ದಾಸನಪುರ ಮಾರುಕಟ್ಟೆಗೆ ಸಚಿವರಾದ ಡಾ. ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ಬಿಸಿಪಾಟೀಲ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

market
ಮಾರ್ಕೆಟ್
author img

By

Published : Apr 3, 2020, 11:23 AM IST

ಬೆಂಗಳೂರು : ಕಳೆದೆರಡು ದಿನಗಳ ಹಿಂದೆ‌ ರೈತರಿಗೆ ಇದ್ದಂತಹ ತೊಂದರೆ ಈಗಿಲ್ಲ‌. ರೈತರ ಫಸಲುಗಳನ್ನು ಮಾರಾಟ ಮಾಡಲು ಸರ್ಕಾರ ಸುಲಲಿತ ವ್ಯವಸ್ಥೆ ಮಾಡಿಕೊಟ್ಟಿದೆ. ಈಗ ಯಾವುದೇ ತೊಂದರೆಯಿಲ್ಲ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಇಂದು ಬೆಂಗಳೂರಿನ ಬ್ಯಾಟರಾಯನಪುರ ಎಪಿಎಂಸಿ ಮಾರುಕಟ್ಟೆ ಹಾಗೂ ದಾಸನಪುರ ಮಾರುಕಟ್ಟೆಗೆ ಸಚಿವರಾದ ಡಾ. ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ಬಿ ಸಿ ಪಾಟೀಲ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು.

ಬ್ಯಾಟರಾಯನಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವರುಗಳು..

ಬಳಿಕ‌ ಮಾತನಾಡಿದ ಸಚಿವ‌ ನಾರಾಯಣಗೌಡ, ಕಳೆದೆರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಎಲ್ಲಾ ಸಚಿವರೊಂದಿಗೆ ಸಭೆ ನಡೆಸಿ ರೈತರ ಫಸಲು ಮಾರಾಟಕ್ಕೆ ಹಾದಿ ಸುಗಮಗೊಳಿಸಿದ್ದಾರೆ‌. ಇದಕ್ಕೆ ಸಂಬಂಧಿಸಿದ ಎಲ್ಲಾ ಸಚಿವರು ನಿನ್ನೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಈ ದಿನ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಮಾರಾಟ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದ್ದೇವೆ ಎಂದರು.ಬಳಿಕ ಕೃಷಿ ಸಚಿವ ಬಿ ಸಿ.ಪಾಟೀಲ್ ಮಾತನಾಡಿ, ಸಾಮಾಜಿಕ ಅಂತರ ಎನ್ನುವುದು ಸ್ವಯಂಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ

ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲಿ ಅಥವಾ ಸರ್ಕಾರದ ಒತ್ತಾಯವಾಗಿ ಆಗಲಿ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ ಎಂದರು.

ತರಕಾರಿ ಬೆಳೆದ ರೈತರಿಗಾಗಲಿ, ಗ್ರಾಹಕರಿಗಾಗಲಿ ಲಾಕ್‌ಡೌನ್‌ನಿಂದ ಯಾವುದೇ ತೊಂದರೆಯಾಗಬಾರದೆಂದು ಸಿಎಂ ಯಡಿಯೂರಪ್ಪ ದಿಟ್ಟ ಕ್ರಮಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿಕರು ತಮ್ಮ ಕೃಷಿ ಚಟುವಟಿಕೆ, ಪರಿಕರ ಮಾರಾಟ‌ ನಡೆಸಲು ಯಾವುದೇ‌ ತೊಂದರೆಯಾಗದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.