ಬೆಂಗಳೂರು : ಕೋವಿಡ್-19 ಅಪಾಯದಿಂದ ಗೃಹ ಸಚಿವರು,ಡಿಸಿಎಂ,ಇಬ್ಬರು ಸಚಿವರು,ಸಿಎಂ ಕಚೇರಿ ಸಿಬ್ಬಂದಿ ಜಸ್ಟ್ ಮಿಸ್ ಆಗಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಇವರೆಲ್ಲಾ ಕ್ವಾರಂಟೈನ್‌ನಲ್ಲಿರಬೇಕಾಗಿತ್ತು.
ಸಿಎಂ ಕಚೇರಿ ಸಿಬ್ಬಂದಿ ಸ್ವಲ್ಪದರಲ್ಲೇ ಕೊರೊನಾದಿಂದ ಪಾರು ಕೊರೊನಾ ಸೋಂಕಿತ ರೋಗಿ-475ರ ಸಂಪರ್ಕಕ್ಕೆ ಸಚಿವರು ಬಂದಿದ್ದರೂ ಕೊರೊನಾ ಸೋಂಕಿತನಿಂದ ಬಚಾವಾಗಿದ್ದಾರೆ. ಸೋಂಕಿತ ವ್ಯಕ್ತಿ ಸಿಎಂ ಕಚೇರಿಯಲ್ಲಿ ಭದ್ರತಾ ತಪಾಸಣೆಗೆ ಒಳಪಟ್ಟಿದ್ದರು. ಹಾಗಾಗಿ ಅವರನ್ನು ತಪಾಸಣೆ ಮಾಡಿದ್ದ ಸಿಬ್ಬಂದಿ ಹಾಗೂ ಮಾಹಿತಿ ದಾಖಲಿಸಿಕೊಂಡ ಸಿಬ್ಬಂದಿ ಕೂಡ ಕೊರೊನಾದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ: ಏಪ್ರಿಲ್ 19: ಮನೆಯಲ್ಲಿಯೇ ಇದ್ದ ಸೋಂಕಿತ ವ್ಯಕ್ತಿ.ಏಪ್ರಿಲ್ 20: ತಮ್ಮ ಮನೆಯಿಂದ ಕಚೇರಿ ಕಾರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಪ್ರಯಾಣ. ಅಲ್ಲಿಂದ ಮನೆಗೆ ವಾಪಸ್. ಏಪ್ರಿಲ್ 21: 12:15ಕ್ಕೆ ಮನೆಯಿಂದ ಸಿಎಂ ಗೃಹ ಕಚೇರಿ ಕೃಷ್ಣಾಗೆ ತಮ್ಮ ಕಚೇರಿ ಕಾರಿನಲ್ಲಿ ಪ್ರಯಾಣ. ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಸಚಿವ ಸಿ ಟಿ ರವಿ ಅವರ ಬೈಟ್ ಕವರೇಜ್. ಮಧ್ಯಾಹ್ನ 1.15ಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾರಿನಲ್ಲಿ ಕುಳಿತಿದ್ದಾಗ ಸಮೀಪದಿಂದ ಬೈಟ್ ಕವರೇಜ್, ಮಧ್ಯಾಹ್ನ 3.30ಕ್ಕೆ ಸಹೋದ್ಯೋಗಿಗಳು ಮತ್ತು ಡ್ರೈವರ್ ಜೊತೆ ಕಾರಿನಲ್ಲಿ ರಾಮನಗರಕ್ಕೆ ಪ್ರಯಾಣ. ಏಪ್ರಿಲ್ 22: 9 ಗಂಟೆಗೆ ಆರ್.ಟಿ ನಗರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಬೈಟ್ ಕವರೇಜ್. ಮಧ್ಯಾಹ್ನ 2 ಗಂಟೆಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಬೈಟ್ ಕವರೇಜ್. ಸಂಜೆ ಎಂಎಲ್ಸಿ ವೈ ಎ ನಾರಾಯಣಸ್ವಾಮಿ ಆಯೋಜಿಸಿದ್ದ ಆಹಾರ ವಸ್ತುಗಳ ವಿತರಣೆ ಕವರೇಜ್.ಏಪ್ರಿಲ್ 23: ಮಾಧ್ಯಮದವರ ಜೊತೆ ಸಿ ವಿ ರಾಮನ್ ಆಸ್ಪತ್ರೆಗೆ ಭೇಟಿ,ಸ್ವ್ಯಾಬ್ ಪರೀಕ್ಷೆ. ಏಪ್ರಿಲ್ 24: ಸಿಎಂ ರಾಮನ್ ಆಸ್ಪತ್ರೆಯಿಂದ ಕೋವಿಡ್ ಪಾಸಿಟಿವ್ ಮಾಹಿತಿ, ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ. ಐಸೋಲೇಷನ್‌ನಲ್ಲಿ ಚಿಕಿತ್ಸೆ.
ರೋಗಿ-475 ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಸಿಎಂ ಕಚೇರಿ ಸಿಬ್ಬಂದಿ,ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವ ಸಿ ಟಿ ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ನಾರಾಯಣಸ್ವಾಮಿ ಅವರನ್ನು ಸಂಪರ್ಕ ಮಾಡಿರುವ ವಿಚಾರ ಬಹಿರಂಗ. ಆದರೆ, ಸೋಂಕಿತ ವ್ಯಕ್ತಿಯ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡ ಪರಿಣಾಮ ಇವರೆಲ್ಲರೂ ಸೋಂಕಿನಿಂದ ಪಾರಾಗಿದ್ದಾರೆ. ಸಿಎಂ ಕಚೇರಿ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿ ನಾಳೆ ಬರಲಿದೆ. ರೋಗಿ-475 ಕೊರೊನಾ ಪಾಸಿಟಿವ್ ಬಂದಿದ್ದರೂ ಅದು ಆರಂಭಿಕ ಹಂತದಲ್ಲೇ ಗೊತ್ತಾಗಿದೆ.
ಮತ್ತೊಬ್ಬರಿಗೆ ಹರಡುವ ಶಕ್ತಿ ವೈರಸ್ ಪಡೆದುಕೊಳ್ಳುವ ಮುನ್ನವೇ ಕೋವಿಡ್ ಪರೀಕ್ಷೆಗೊಳಪಟ್ಟು ವರದಿ ಪಾಸಿಟಿವ್ ವರದಿ ಬಂದ ಕಾರಣ ಈ ಸೋಂಕಿತ ವ್ಯಕ್ತಿಯಿಂದ ಯಾರಿಗೂ ಸೋಂಕು ತಗುಲಿಲ್ಲ. ಹಾಗಾಗಿ 475 ರ ವ್ಯಕ್ತಿಯ ಸಂಪರ್ಕಿತರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡುವ ಮಟ್ಟ ತಲುಪಿದ್ದರೆ ಸಿಎಂ ಕಚೇರಿ, ಮಂತ್ರಿಗಳು, ಖಾಸಗಿ ಸಿಬ್ಬಂದಿ ಎಲ್ಲಾ ಕೂಡ ಕ್ವಾರಂಟೈನ್‌ಗೊಳಗಾಗುವ ಸನ್ನಿವೇಶ ಎದುರಿಸಬೇಕಿತ್ತು.