ETV Bharat / state

ಏನ್ರೀ ಏಕವಚನದಲ್ಲಿ ಮಾತನಾಡುತ್ತೀರಿ, ನಾನು ನಿಮ್ಮ ಮನೆ ಜೀತಕ್ಕೆ ಇಲ್ಲ: ವಸತಿ ಸಚಿವ ವಿ ಸೋಮಣ್ಣ - ಈಟಿವಿ ಭಾರತ್ ಕನ್ನಡ ಸುದ್ದಿ

ಇನ್ನೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ವಸತಿ ಸಚಿವ ವಿ ಸೋಮಣ್ಣ
ವಸತಿ ಸಚಿವ ವಿ ಸೋಮಣ್ಣ
author img

By

Published : Aug 29, 2022, 3:50 PM IST

ಬೆಂಗಳೂರು: ಏನ್ರೀ.. ಏಕ ವಚನದಲ್ಲಿ ಮಾತನಾಡ್ತೀರಿ.. ನಾನು ನಿಮ್ಮ ಮನೆ ಜೀತಕ್ಕೆ ಇಲ್ಲ ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಒಂದು ಲಕ್ಷ ಮನೆಗಳಿಗೆ ನಮ್ಮ ಸರ್ಕಾರ ಮಂಜೂರಾತಿ‌ ನೀಡಿ, ಕಾರ್ಯಾದೇಶ ಹೊರಡಿಸಿದೆ. ಆದರೆ, ಸೋಮಣ್ಣ ಬಂದು ರದ್ದು ಮಾಡಿದರು ಎಂದು ಹೇಳಿಕೆ ಕೊಟ್ಟಿದ್ದಾರೆ‌. ಆದರೆ, ಇಲ್ಲಿ ಹೋದರೆ ಗುತ್ತಿಗೆದಾರರಿಗೆ ಒಂದು ಇಂಚು ಜಾಗ ಕೊಟ್ಟಿಲ್ಲ. ಮೈಕ್‌ನಲ್ಲಿ ಮಾತನಾಡುತ್ತಾರೆ. ಗೋವಿಂದರಾಜನಗರ ಶಾಸಕ ಕೃಷ್ಣಪ್ಪ ಹೇಳೋದನ್ನು ಕೇಳಿ ಅದರಂತೆ ಭಾಷಣ ಮಾಡಿದ್ದಾರೆ. ಕೃಷ್ಣಪ್ಪರ ಪೂರ್ವಪರ ಎಲ್ಲರಿಗೂ ಗೊತ್ತು. ಶ್ರೀರಂಗನಾಥನ ದೇವಸ್ಥಾನದ ಜಮೀನು ಅಕ್ರಮ ಎಲ್ಲರಿಗೂ ಗೊತ್ತು. ಈ ಬಗ್ಗೆ ನಿಮಗೆ ಗೊತ್ತೇ ಇಲ್ಲ. ಕೃಷ್ಣಪ್ಪನೇ ದೊಡ್ಡ ದಂಧೆಕೋರರು. ಅವರ ಮಾತು ಕೇಳಿ ಮಾತನಾಡುತ್ತೀರಲ್ಲ? ಎಂದು ಪ್ರಶ್ನಿಸಿದರು‌‌.

ನಾನು ಕಾರ್ಯಾದೇಶ ರದ್ದು ಮಾಡಿಲ್ಲ. ಒಂದು ಇಂಚು ಜಾಗವನ್ನೇ ನಿಮ್ಮ ಸರ್ಕಾರ ಕೊಟ್ಟಿಲ್ಲ. ನನ್ನನ್ನು ದೂಷಣೆ ಮಾಡುವುದು ಸರಿಯಲ್ಲ. ನಿಮ್ಮ ಅನುಭವಕ್ಕೆ ಇದು ಸೂಕ್ತವಲ್ಲ. 493 ಜಾಗ ಹಸ್ತಾಂತರ ಮಾಡಿ, ಕಾರ್ಯಾದೇಶ ಹೊರಡಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಸೆ.7ಕ್ಕೆ 2000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಿದ್ದೇವೆ. 48,000 ಮನೆಗಳ ಪೈಕಿ 46,000 ಮನೆಗಳು ಪ್ರಗತಿಯಲ್ಲಿವೆ. 10,000 ಮನೆ ಕೊನೆ ಹಂತ ಅಂದರೆ ಛಾವಣಿ ಹಂತದಲ್ಲಿದೆ. 17,000 ಮನೆಗಳ ಕಾರ್ಯ ಪ್ರಾರಂಭವಾಗಿದೆ. ಈವರೆಗೆ ಸುಮಾರು 583 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದರು.

ಬಂಡೆ ತರ ನಿಂತಿದ್ದೆವು: ಮಾಜಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡುತ್ತೇನೆ. ಸಾರ್ವಜನಿಕವಾಗಿ ಚರ್ಚೆ ಮಾಡಲು ನಾನು ಸಿದ್ಧ. ಅದಕ್ಕೆ ದಿನಾಂಕ ನಿಗದಿ ಮಾಡಿ ಎಂದು ಸವಾಲು ಹಾಕಿದರು. ಮಾಜಿ ಸಿಎಂ ಆದವರು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಗಾಂಭೀರ್ಯತೆ ಬೇಕು. ಅವನು ಇವನು ಎಂಬ ಭಾಷೆ ಬಳಸುತ್ತೀರಾ. ನನಗೆ ಈಗ 72 ವರ್ಷ. ಸಿದ್ದರಾಮಯ್ಯರ ಜೊತೆ ನಾನು ಕೆಲಸ ಮಾಡಿದ್ದೆ. ಉಪ ಚುನಾವಣೆಯಲ್ಲಿ ಅವರ ಜೊತೆ ಬಂಡೆ ತರ ನಿಂತಿದ್ದೆ. ರಾಜ್ಯಕ್ಕೆ ಒಬ್ಬ ಹಿಂದುಳಿದ ನಾಯಕ ಬೇಕು ಎಂದು ಮುಂದೆ ನಿಂತಿವನು ಈ ಸೋಮಣ್ಣ. ನಾಯಿ ನರಿಗಳ ಮಾತು ಕೇಳಿ ಈ ತರ ಆರೋಪ ಮಾಡುತ್ತಿದ್ದೀರಲ್ಲ ಎಂದು ಕಿಡಿಕಾರಿದರು.

ನನಗೂ ಸರ್ವಿಸ್ ಇದೆ: ನಾನು 18% ಕಮಿಷನ್ ಪಡೆಯುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. 18% ಕಮಿಷನ್ ನನ್ನ ಎಕ್ಡನೂ ಮುಟ್ಟಿಲ್ಲ.‌ ನಿಮಗೆ ಒಬ್ಬರಿಗೆ ಮಾತ್ರ ಗೌರವ ಇರುವುದಿಲ್ಲ. ಅದೃಷ್ಟ ಬರುತ್ತೆ ಹೋಗುತ್ತೆ. ಬೇರೆಯವರ ಬಗ್ಗೆ ಮಾತನಾಡುವಂತೆ ನನ್ನ ಬಗ್ಗೆ ಮಾತನಾಡಬೇಡಿ. ನಿಮ್ಮ‌ಹಿತ ಕಾಯ್ದವರ ಬಗ್ಗೆ ಹೀಗೆಲ್ಲಾ ಮಾತನಾಡಬೇಡಿ. 700 ಜನಕ್ಕೆ ನೀವು ರಿಡೂ ಮಾಡಿದರಲ್ಲ?. ಆರೋಪ ಸಾಬೀತಾದರೆ ನಾನು ಬೆಳಗ್ಗೆ ಸಾರ್ವಜನಿಕವಾಗಿ ನೇಣಿಗೆ ಹೋಗಲು ರೆಡಿ ಇದ್ದೇನೆ. ಇನ್ನೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ. ನಿಮ್ಮಷ್ಟು ನನಗೂ ಸರ್ವಿಸ್ ಇದೆ. ನಿಮ್ಮ ಪುಣ್ಯ ನೀವು ನಾಯಕರಾಗಿದ್ದೀರಿ. ಈ ತರ ಭಾಷೆ ಬಳಸುವಾಗ ನಿಮ್ಮ ಮೆದುಳಿಗೆ ನಾಲಿಗೆಗೆ ಸಂಪರ್ಕ ಇಟ್ಟುಕೊಂಡು ಮಾತನಾಡಿ ಎಂದು ಸೋಮಣ್ಣ ಗುಡುಗಿದರು.

ನಾನು ಸುಮ್ಮನಿರಲ್ಲ: ಅವರ ಮಾತು ಕೇಳಿ ನಾನು ನಿದ್ರೆ ಮಾಡಿಲ್ಲ, ನನ್ನ ಸೋಲಿಸಿ ಅಂತಾನೆ.. ನೀನು ಸೋತರೆ ಏನ್ಮಾಡ್ತೀಯನಪ್ಪಾ..?. ವೈಯಕ್ತಿಕ ಬದುಕಿನ ಬಗ್ಗೆ ಆರೋಪ ಮಾಡಿದ್ದು ನನಗೆ ನೋವಾಯ್ತು ಅಷ್ಟೇ. ನಮ್ಮನ್ನು ಉಪಯೋಗಿಸಿಕೊಂಡು ಈಗ ಏನೇನೋ‌ ಮಾತಾಡ್ತೀರಿ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಲು ಜಿ. ಟಿ ದೇವೇಗೌಡರಿಗೆ ಏನ್ ಕಳುಹಿಸಿದ್ರು. ಎಷ್ಟು ಕಳುಹಿಸಿದ್ರು ಅಪ್ಪ-ಮಕ್ಕಳು ಅಂತಾ ಗೊತ್ತಿದೆ. ಅವರನ್ನು ನಿಲ್ಲಿಸಿಕೊಂಡು ಮಾತಾಡ್ತಾರೆ. ಈ ತರ ಮಾತನಾಡಿದರೆ ಮುಂದೆ ನಾನು ಸುಮ್ಮನಿರಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಸೋಮಣ್ಣ ಎಚ್ಚರಿಕೆ ರವಾನಿಸಿದರು.

ಓದಿ: ಬಿಜೆಪಿಯವರೇ ನಿಮ್ಮ ಹತ್ತಿರ ಇದೆಯಾ ಉತ್ತರ?: ಕಾಂಗ್ರೆಸ್​​ನಿಂದ ಅಭಿಯಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.