ಆನೇಕಲ್ (ಬೆಂಗಳೂರು): ರಾಮಮಂದಿರ ಏಕೆ ಬೇಡ ಎಂಬ ಕೃತಿಯನ್ನು ಸರ್ಕಾರ ಖರೀದಿಸಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಗ್ರಂಥಾಲಯಗಳಿಗೆ ರಾಮಮಂದಿರ ಏಕೆ ಬೇಡ ಎಂಬ ಕೃತಿಯನ್ನು ಖರೀದಿಸುತ್ತಿಲ್ಲ ಎಂದಿದ್ದಾರೆ.
ಆನೇಕಲ್ ತಾಲೂಕಿನ ಗಡಿಯ ಸೋಲೂರು ಅನುದಾನಿತ ವಿನೋಬಬಾವೆ ಪ್ರೌಢಶಾಲಾ ಕಟ್ಟಡ ಲೋಕಾರ್ಪಣೆ ಮಾಡಿದ ಬಳಿಕ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕಾಗಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಚಿಂತಕ ಡಾ.ಕೆ.ಎಸ್ ಭಗವಾನ್ ಮನೆಗೆ ಭೇಟಿ ನೀಡಿದ್ದಾಗಿನಿಂದಲೂ ವಿವಾದ ಆರಂಭವಾಗಿದ್ದು, ಬಳಿಕ ಸರ್ಕಾರ ಅವರೇ ಬರೆದಿರುವ ಕೃತಿ ಖರೀದಿಗೆ ಮುಂದಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಫೇಸ್ಬುಕ್ನಲ್ಲಿ ನಾನು ಈ ಕುರಿತು ಬರೆದಿದ್ದೇನೆ. ಸರ್ಕಾರ ಅವರ ಕೃತಿ ಖರೀದಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನು ವಿರೋಧಿ ಹೋರಾಟ: ಬೆಂಗಳೂರಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜಾಗುತ್ತಿದೆ ಬೃಹತ್ ವೇದಿಕೆ