ಬೆಂಗಳೂರು: ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲಿಯೂ ಕೂಡ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಬೋಧಿಸಲು ಅನುಮತಿ ಇದೆ. ಅದೇ ರೀತಿ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಭಾಷೆಯನ್ನು ಕಲಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಖಾಸಗಿ ಶಾಲೆಗಳು ವಿಪರೀತ ಹೆಚ್ಚಾಗಿರುವ ಕಾರಣದಿಂದ ಹಿಂದಿನ ಸರ್ಕಾರ ಇಂಗ್ಲಿಷ್ ಮಾಧ್ಯಮ ಆರಂಭಿಸಿದೆ ಎಂದು ತಿಳಿಸಿದರು.
ಇಂಗ್ಲಿಷ್ ಮಾಧ್ಯಮ ಈಗಲೂ ಮುಂದುವರೆದಿದ್ದು, ಕಾಸು ಇರುವವರು ಮಾತ್ರ ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು ಅಂತ ಯಾರಿಗೂ ಅನ್ನಿಸಬಾರದು ಎಂದರು. ನಮ್ಮ ನಾಡಿನಲ್ಲಿ ಕನ್ನಡವನ್ನು ಎಲ್ಲರೂ ಕಲಿಯಬೇಕು ಎಂಬುದು ನಮ್ಮ ನಿಲುವಾಗಿದ್ದು, ಹೀಗಾಗಿ ಸ್ಪಷ್ಟವಾದ ಕನ್ನಡವನ್ನು ಉತ್ತಮವಾದ ಕನ್ನಡವನ್ನ ನಾವು ಕಲಿಸುತ್ತೇವೆ ಎಂದರು.