ETV Bharat / state

ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ‘ಡಾ.ಎಚ್.ಎನ್.ನಿಲ್ದಾಣ’ ಎಂದು​​ ಹೆಸರಿಡಲು ಸಚಿವರ ಮನವಿ

ರಾಜಧಾನಿ ಜನರ ಸಂಚಾರನಾಡಿಯಾಗಿರುವ ‘ನಮ್ಮ ಮೆಟ್ರೋ’ ರೈಲು ನಿಲ್ದಾಣಗಳಿಗೆ ಆಯಾ ಭಾಗದ ವಿಶೇಷತೆಗಳು ಹಾಗೂ ಆಯಾ ಪ್ರದೇಶದಲ್ಲಿ ತಮ್ಮ ಸೇವೆ ಮೂಲಕ ಪ್ರಸಿದ್ಧರಾಗಿರುವ ಮಹಾನ್​ ವ್ಯಕ್ತಿಗಳ ಹೆಸರುಗಳನ್ನಿಟ್ಟು ವಿಶಿಷ್ಟವಾಗಿ ಗೌರವಿಸಲಾಗಿದೆ. ಅದೇ ರೀತಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಹಿರಿಯ ಶಿಕ್ಷಣ ಪ್ರೇಮಿ ಡಾ.ಎಚ್.ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಬೇಕೆಂದು ಸಚಿವ ಎಸ್.ಸುರೇಶ್ ಕುಮಾರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

Minister Suresh Kumar appeals as put a name for national college metro station as NH
ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ‘ಡಾ. ಎಚ್.ಎನ್. ನಿಲ್ದಾಣ’ ಎಂದು​​ ಹೆಸರಿಡಲು ಸಚಿವ ಸುರೇಶ್ ಕುಮಾರ್ ಮನವಿ
author img

By

Published : Mar 10, 2021, 4:24 PM IST

ಬೆಂಗಳೂರು: ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ನಮ್ಮ ಮೆಟ್ರೋ ನಿಲ್ದಾಣಕ್ಕೆ ‘ಡಾ. ಎಚ್.ಎನ್. ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ರಾಜಧಾನಿ ಜನರ ಸಂಚಾರನಾಡಿಯಾಗಿರುವ ‘ನಮ್ಮ ಮೆಟ್ರೋ’ ರೈಲು ನಿಲ್ದಾಣಗಳಿಗೆ ಆಯಾ ಭಾಗದ ವಿಶೇಷಗಳು ಹಾಗೂ ಆಯಾ ಪ್ರದೇಶದಲ್ಲಿ ತಮ್ಮ ಸೇವೆ ಮೂಲಕ ಪ್ರಸಿದ್ಧರಾಗಿರುವ ಮಹಾನ್​ ವ್ಯಕ್ತಿಗಳ ಹೆಸರುಗಳನ್ನಿಟ್ಟು ವಿಶಿಷ್ಟವಾಗಿ ಗೌರವಿಸಲಾಗಿದೆ. ಅದೇ ರೀತಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಹಿರಿಯ ಶಿಕ್ಷಣ ಪ್ರೇಮಿ ಡಾ. ಎಚ್. ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಿಗೆ ಇಂತಹ ಮಹಾನ್​​​​ಪುರಷರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಅವರ ಹೆಸರನ್ನಿಡುವ ಮೂಲಕ ಅವರ ಸೇವೆಯನ್ನು ಗುರುತಿಸುವ ಒಂದು ಕ್ರಮ ಇದೆ. ಉದಾಹರಣೆಗೆ ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾಡಪ್ರಭು ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮೀಜಿ, ಸರ್.ಎಂ. ವಿಶ್ವೇಶ್ವರಯ್ಯನವರು ಸೇರಿದಂತೆ ಅನೇಕ ಮಹನೀಯರ ಹೆಸರನ್ನು ಮೆಟ್ರೋ ರೈಲು ನಿಲ್ದಾಣಗಳಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸಲಾಗಿದೆ.

ಬೆಂಗಳೂರಿನ ಪ್ರಮುಖ ಭಾಗ ಬಸವನಗುಡಿಯ ನ್ಯಾಷನಲ್ ಕಾಲೇಜು ಪ್ರದೇಶ. ನ್ಯಾಷನಲ್ ಕಾಲೇಜು ಎಂದ ಕೂಡಲೇ ಎಲ್ಲರ ನೆನಪಿಗೆ ಬರುವ ಹೆಸರು ನಮ್ಮೆಲ್ಲರ ಮೆಚ್ಚಿನ ಡಾ. ಎಚ್. ನರಸಿಂಹಯ್ಯ ಅವರದು. ಅವರು ಪ್ರಗತಿಪರ ಧೋರಣೆಗೆ ಹೆಸರಾಗಿ ತಮ್ಮ ಜೀವನವನ್ನು ಇಡೀ ಸಮಾಜಕ್ಕಾಗಿ ಅರ್ಪಿಸಿಕೊಂಡವರು. ಅವರನ್ನು ನೆನಪಿಸಿಕೊಳ್ಳದೇ ನ್ಯಾಷನಲ್ ಕಾಲೇಜು ಹೆಸರನ್ನು ಪ್ರಸ್ತಾಪಿಸಲು ಸಾಧ್ಯವೇ ಇಲ್ಲ. ಸರಳತೆಯಿಂದ ಸದಾ ಖಾದಿಯನ್ನೇ ಧರಿಸುತ್ತಿದ್ದ ಡಾ.ಎಚ್. ನರಸಿಂಹಯ್ಯನವರು ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸ್ನೇಹಮಯ ಮಾನವತಾವಾದಿಯಾಗಿದ್ದರಲ್ಲದೇ, ರಾಷ್ಟ್ರೀಯವಾದಿಯೂ ಆಗಿದ್ದರು.

ಇದನ್ನೂ ಓದಿ: ಮಹಾಶಿವರಾತ್ರಿ: ಶಿವಗಿರಿ ತ್ರಿನೇತ್ರನ ಮೂರ್ತಿಗೆ ವಿಶೇಷ ಪೂಜೆ

ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ತಾವು ಅಲಂಕರಿಸಿದ ಯಾವುದೇ ಸ್ಥಾನಕ್ಕೂ ಗೌರವವನ್ನು ತಂದಿದ್ದರು. ಆ ಹೆಸರೇ ಎಲ್ಲರಿಗೂ ಪ್ರೇರಣೆ ತರುವಂತಹುದು. ಅಸಂಖ್ಯಾತ ಪ್ರತಿಭೆಗಳಿಗೆ ಬೆಳಕು ತೋರಿದವರು ಎಂದು ಸುರೇಶ್ ಕುಮಾರ್ ಡಾ.ಎಚ್​​.ಎಚ್​​​ ಕುರಿತು ವಿವರಿಸಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ‘ನಮ್ಮ ಮೆಟ್ರೋ’ ನಿಲ್ದಾಣಕ್ಕೆ ‘ಡಾ.ಎಚ್.ಎನ್. ನಿಲ್ದಾಣ’ ಎಂದು ನಾಮಕರಣ ಮಾಡುವ ಮೂಲಕ ಇಂತಹ ಮಹಾನ್ ನಿಸ್ವಾರ್ಥ ಸಮಾಜ ಜೀವಿಯ ಸೇವೆಯನ್ನು ಮುಂದಿನ ಪೀಳಿಗೆಗೂ ನೆನಪಿಟ್ಟುಕೊಳ್ಳುವಂತೆ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.