ETV Bharat / international

ಗಿನಿ ಫುಟ್ಬಾಲ್​ ಪಂದ್ಯದ ವೇಳೆ ಭಾರಿ ಘರ್ಷಣೆ: ಕಾಲ್ತುಳಿತಕ್ಕೆ 100 ಮಂದಿ ಬಲಿ ಶಂಕೆ

ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿ ವೇಳೆ ಈ ಘರ್ಷಣೆ ನಡೆದಿದೆ

clashes-during-football-match-in-guinea-dozens-of-fans-dead-latest-update
ಗಿನಿಯಾದಲ್ಲಿ ಫುಟ್ಬಾಲ್​ ಪಂದ್ಯದಲ್ಲಿ ಘರ್ಷಣೆ: ಕಾಲ್ತುಳಿತಕ್ಕೆ 100 ಮಂದಿ ಬಲಿ (A map shows the location of Guinea (AFP))
author img

By ETV Bharat Karnataka Team

Published : 2 hours ago

ಕೊನಾಕ್ರಿ: ಗಿನಿಯ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳ ನಡುವಿನ ಘರ್ಷಣೆಯಲ್ಲಿ ಭಾನುವಾರ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಸಾಮೂಹಿಕ ಹತ್ಯಾಕಾಂಡದ ದೃಶ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಇಲ್ಲಿನ ಆಸ್ಪತ್ರೆಯಲ್ಲಿ ಕಣ್ಣಿಗೆ ಕಾಣುವಷ್ಟು ದೂರದವರೆಗೂ ಶವಗಳ ರಾಶಿ ರಾಶಿ ಕಂಡು ಬಂದಿದ್ದಲ್ಲದೇ, ಶವಾಗಾರ ತುಂಬಿದೆ ಎಂದು ಹೆಸರು ಹೇಳಲು ಇಚ್ಚಿಸದ ವೈದ್ಯರೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ವೈದ್ಯರು ಡಜನ್ಗಟ್ಟಲೆ ಮಂದಿ ಸತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ವಿಡಿಯೋ, ಎಎಫ್‌ಪಿಗೆ ತಕ್ಷಣವೇ ಪರಿಶೀಲಿಸಲು ಸಾಧ್ಯವಾಗಿಲ್ಲ. ಪಂದ್ಯದ ಹೊರಗೆ ಬೀದಿಯಲ್ಲಿ ಅವ್ಯವಸ್ಥೆಯ ದೃಶ್ಯಗಳು ಮತ್ತು ಹಲವಾರು ದೇಹಗಳು ನೆಲದ ಮೇಲೆ ಬಿದ್ದಿರುವ ಬಗ್ಗೆ ವರದಿಗಳಾಗಿವೆ. ಸಾಕ್ಷಿಗಳ ಪ್ರಕಾರ, ಕೋಪಗೊಂಡ ಪ್ರತಿಭಟನಾಕಾರರು ಎನ್‌ಜೆರೆಕೋರ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಮತ್ತು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಪಂದ್ಯದ ರೆಫರಿ ನೀಡಿದ ವಿವಾದಿತ ತೀರ್ಪಿನಿಂದ ಘರ್ಷಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳು ಪಿಚ್ ಆಕ್ರಮಿಸಿ ದೂಂಡಾವರ್ತನೆ ತೋರಿದ್ದಾರೆ ಎಂದು ಸಾಕ್ಷಿಯೊಬ್ಬರು AFP ಗೆ ತಿಳಿಸಿದ್ದಾರೆ. ಸುರಕ್ಷತೆಯ ಕಾರಣಗಳಿಗಾಗಿ ಅವರ ಹೆಸರನ್ನು ಎಪಿಎಫ್​​ ಉಲ್ಲೇಖಿಸಿಲ್ಲ. 2021 ರ ದಂಗೆಯಲ್ಲಿ ಅಧಿಕಾರಕ್ಕೆ ಬಂದ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿ ಸಮಯದಲ್ಲಿ ಈ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಫುಟ್ಬಾಲ್​ ಪಂದ್ಯದ ವೇಳೆ ನಡೆದ ಈ ಘಟನೆಗಳನ್ನು ಸರ್ಕಾರವು ಖಂಡಿಸುತ್ತದೆ ಎಂದು ಪ್ರಧಾನ ಮಂತ್ರಿ ಬಹ್ ಔರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘರ್ಷಣೆ ಹಾಗೂ ಕಾಲ್ತುಳಿತದಿಂದ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಾದೇಶಿಕ ಅಧಿಕಾರಿಗಳು ಇಲ್ಲಿ ಶಾಂತಿ ವ್ಯವಸ್ಥೆ ಕಾಪಾಡಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಸರ್ಕಾರವು ಅಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಕೊಡಿಸುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಇದನ್ನು ಓದಿ:ತೆಲಂಗಾಣದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಎನ್​ಕೌಂಟರ್: 7 ನಕ್ಸಲರು ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.