ಬೆಂಗಳೂರು : ಕೇಸರಿ ಕಂಡ್ರೆ ಯಾಕೆ ವಿಚಲಿತರಾಗ್ತೀರಾ?, ನಾಳೆ ಕುಂಕುಮ ಇಟ್ರೂ ವಿರೋಧ ಮಾಡ್ತೀರಾ. ಕೇಸರಿ ಶಾಲನ್ನು ಯಾರೇ ಹಾಕಿದ್ರೂ ಸಮರ್ಥನೆ ಮಾಡಿಕೊಳ್ತೀವಿ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಸರಿ ಬಗ್ಗೆ ನಿಮಗೆ ಯಾಕೆ ವಿರೋಧ ಎಂಬುದು ಗೊತ್ತಿಲ್ಲ. ಕೇಸರಿ ತ್ಯಾಗದ ಸಂಕೇತ. ಕೇಸರಿ ಕಂಡ್ರೆ ಯಾಕೆ ವಿಚಲಿತರಾಗ್ತೀರೋ ಗೊತ್ತಿಲ್ಲ. ಬೊಟ್ಟು ಇಟ್ಟವರನ್ನು ನೀವು ಸಿಎಂ ಆಗಿದ್ದಾಗ ಹೊರಗೆ ದಬ್ಬಿದ್ರಿ. ನಮ್ಮ ಪರಂಪರೆಯನ್ನ ಮರೆಯಬಾರದು.
ವಿಜಯ ದಶಮಿಯ ದಿನ ಆಯುಧ ಪೂಜೆ ಮಾಡ್ತಾರೆ. ಬಿಜೆಪಿ ಸರ್ಕಾರ ಬಂದ ನಂತ್ರ ಬಂದಿದ್ದಲ್ಲ. ಎಲ್ರೂ ಹಬ್ಬ ಮಾಡ್ತಾರೆ, ಪೊಲೀಸರು ಒಂದೊಂದು ಸ್ಟೇಷನ್‌ನಲ್ಲಿ ಒಂದೊಂದು ರೀತಿಯಲ್ಲಿ ಉಡುವು ಧರಿಸಿದ್ರು. ಕೇಸರಿ ಒಂದು ಪಕ್ಷದ್ದು ಅಂತಾ ಯಾಕೆ ಮೀಸಲಿಡ್ತೀರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಬಂದಾಗ ಹಸಿರು ಶಾಲು ಹಾಕಿದ್ರೆ ಏನು ಮಾಡ್ತೀರಾ ಅನ್ನೋ ಪ್ರಶ್ನೆಗೆ ಅದನ್ನು ಹಾಕಿದ ಮೇಲೆ ನೋಡೋಣ ಎಂದು ಪ್ರತಿಕ್ರಿಯಸಿದರು.
ನಿಮಗೆ ಜ್ಞಾನದ ಕೊರತೆ, ಮಾಹಿತಿ ಕೊರತೆ ಇದೆ : ಸಿದ್ದರಾಮಯ್ಯನವರೆ ನಿಮಗೆ ಸಲಹೆ ಕೊಡುವವರ ಕೊರತೆ ಇದೆ. ಇನ್ನೊಬ್ಬರಿಂದ ಸಲಹೆ ಪಡೆದು, ಉತ್ತಮ ಜ್ಞಾನ ಪಡೆಯಿರಿ. ಮೋದಿಯವರ ಬಗ್ಗೆ ಟೀಕೆ ಮಾಡಿದ್ರೆ, ಅವರ ಗೌರವ ಹೆಚ್ಚಾಗಲಿದೆ. ಇನ್ನಾದ್ರೂ ಮುಂದಿನ ದಿನಗಳಲ್ಲಿ ಎಚ್ಚರಿಕೆ ಮಾತನಾಡೋದು ನಿಮ್ಮಹಿರಿತನಕ್ಕೆ ಒಳಿತು.
ನಾವು ನಿಮ್ಮ ಸಮಕಾಲೀನರಲ್ಲ. ಇನ್ನೊಬ್ಬರನ್ನ ನೋಡಿ ಕಲಿಯೋಣ ಅನ್ನೋದು ನಮ್ಮ ಉದ್ದೇಶ. ನಿಮ್ಮನ್ನು ನೋಡಿ ಕಲಿಯೋ ವಿಚಾರ ಕಡಿಮೆಯಾಗ್ತಿದೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ವಿಪಕ್ಷ ನಾಯಕರಾಗಿ ಎಂದು ವಾಗ್ದಾಳಿ ನಡೆಸಿದರು.
ಎಲ್ಲೆ ಮೀರಬಾರದು : ಇತ್ತೀಚಿನ ದಿನದಲ್ಲಿ ವಿಪಕ್ಷ ನಾಯಕರು ತಮ್ಮ ಘನತೆ, ಗೌರವ ಬಿಟ್ಟು ಅಸಂಬದ್ಧವಾಗಿ ಮಾತನಾಡೋದು ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದೇ ಮಾತು ಎಲ್ಲೆ ಮೀರಬಾರದು. ಇತ್ತೀಚಿನ ಅವರ ಭಾಷಣ ಗೌರವ ನೀಡುತ್ತಿಲ್ಲ. ವಿನಾಕಾರಣ ಆರ್ಎಸ್ಎಸ್ ಅನ್ನು ಮಧ್ಯೆ ಎಳೆದು ತರುತ್ತಿದ್ದೀರಿ.
ಪ್ರಧಾನಿಯವರನ್ನು ಎಳೆದು ತರುತ್ತಿದ್ದೀರಿ. ಒಂದು ಚೌಕಟ್ಟಿನಲ್ಲಿ ವಿರೋಧ ಮಾಡಬೇಕು. ಅದು ವಿಪಕ್ಷದ ಕೆಲಸ ಕೂಡ ಹೌದು. ಹಾಗಂತಾ, ವಿನಾಕಾರಣ RSS ಎಳೆದು ತರೋದು ಒಳ್ಳೆಯದಲ್ಲ. ನಾವು ಕೂಡ ಅದರಲ್ಲೇ ಬೆಳೆದು ಬದಿದ್ದು. RSS ಅಂದ್ರೆ ತ್ಯಾಗ, ಸೇವೆ, ವ್ಯಕ್ತಿತ್ವ ನಿರ್ಮಾಣದ ಪ್ರತೀಕವಾಗಿದೆ ಎಂದು ತಿಳಿಸಿದರು.