ETV Bharat / state

ಡಿಸಿಸಿ ಸಾಧನೆಗಳ ಪರಾಮರ್ಶೆ ಮಾಡುವಂತೆ ಸಹಕಾರ ಸಚಿವರ ಸೂಚನೆ - DCC achievements

ವಿಕಾಸೌಧದಲ್ಲಿ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್​ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Minister ST Somashekar instructs to review DCC achievements
ಉನ್ನತ ಅಧಿಕಾರಿಗಳ ಜೊತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
author img

By

Published : May 26, 2020, 9:08 PM IST

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ 21 ಡಿಸಿಸಿ ಬ್ಯಾಂಕ್​ ಸಾಧನೆಗಳ ಪರಾಮರ್ಶೆ ಮಾಡುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂಬಂಧ ಆಯಾ ಬ್ಯಾಂಕ್​​ಗಳ ಪ್ರತ್ಯೇಕ ಶ್ರೇಣಿಗಳನ್ನು ಅಳೆಯುವ ಅಧ್ಯಯನವನ್ನು ಖಾಸಗಿ ತನಿಖಾ ಸಂಸ್ಥೆಗಳು ಇಲ್ಲವೇ ನಬಾರ್ಡ್ ಸಮಿತಿಗಳ ಮೂಲಕ ಮಾಡಿಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸೌಧದಲ್ಲಿ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್​ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದರು.

ಎಲ್ಲ ಡಿಸಿಸಿ ಬ್ಯಾಂಕ್​​ಗಳ ವಿಭಾಗೀಯವಾರು ಸಭೆ ಕರೆದು, ಒಂದೊಂದೇ ಬ್ಯಾಂಕ್​​ಗಳ ಪ್ರಗತಿ ಪರಿಶೀಲನೆ ಮಾಡಬೇಕಿದೆ. ಆ ಮೂಲಕ ಬ್ಯಾಂಕ್​​ಗಳ ಹಾಲಿ ಸ್ಥಿತಿಗತಿಗಳ ಬಗ್ಗೆ ಅರಿಯುವುದಲ್ಲದೇ, ಯಾವ ಬ್ಯಾಂಕ್​​ಗಳು ಉತ್ತಮ ಸ್ಥಿತಿಯಲ್ಲಿವೆ? ಯಾವುದು ತುಂಬಾ ಹದಗೆಟ್ಟಿದೆ? ರೈತರಿಗೆ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸಾಲ ಸಿಗುತ್ತಿದೆಯೇ? ಕೃಷಿ ಆಧಾರಿತ ಸಾಲ ವಿತರಣೆಯಲ್ಲಿ ಸಮಸ್ಯೆ ಇರುವ ಬ್ಯಾಂಕ್​ಗಳು ಯಾವುದಾದರೂ ಇದೆಯೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

Minister ST Somashekar instructs to review DCC achievements
ಉನ್ನತ ಅಧಿಕಾರಿಗಳ ಜೊತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಇದರ ಜೊತೆಗೆ ಬ್ಯಾಂಕ್​ಗಳ ಆಡಳಿತ ಮಂಡಳಿ ಅವ್ಯವಹಾರ, ಹಗರಣಗಳ ಬಗ್ಗೆಯೂ ತಿಳಿದುಕೊಂಡು, ಬ್ಯಾಂಕ್ ಹಾಗೂ ಸರ್ಕಾರಕ್ಕೆ ಬರಬೇಕಾದ ಹಣ ವಸೂಲಾತಿ ಬಗ್ಗೆಯೂ ಕ್ರಮವಹಿಸಲು ಅನುಕೂಲವಾಗುತ್ತದೆ. ಅಲ್ಲದೇ, ಬ್ಯಾಂಕ್​ಗಳಲ್ಲಿ ಬಾಕಿ ಇರುವ ಕೇಸ್​​ಗಳೆಷ್ಟು? ಬಾಕಿ ಉಳಿದಿರಲು ಕಾರಣಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸಚಿವರು ನಿರ್ದೇಶಿಸಿದರು.

ಆಸ್ತಿ ಹರಾಜಿಗೆ ಅಧಿಕಾರಿ ನೇಮಿಸಲು ಸೂಚನೆ:

ಸಹಕಾರ ಇಲಾಖೆ ವ್ಯಾಪ್ತಿಯ ಬ್ಯಾಂಕ್​​ಗಳ ಅವ್ಯವಹಾರಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವ ಅಗತ್ಯವಿದ್ದು, ತನಿಖೆ ವೇಳೆ ಯಾರು ಅವ್ಯವಹಾರ ನಡೆಸಿದ್ದಾರೆ ಎಂಬುದು ಸಾಬೀತಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದರು. ಅಲ್ಲದೆ, ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ನಡೆಸುವ ಸಲುವಾಗಿಯೇ ಅಧಿಕಾರಿಯನ್ನು ನೇಮಿಸಿ ಎಂದು ಉನ್ನತಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ವಿಎಸ್ಎಸ್ಎನ್ ಸೊಸೈಟಿ ಗಣಕೀಕೃತ:

ವಿಎಸ್ಎಸ್ಎನ್​ನ ಎಲ್ಲ 4,500 ಸೊಸೈಟಿಗಳ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮುಖ್ಯವಾಗಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ವ್ಯವಹಾರಗಳೂ ಗಣಕೀಕೃತವಾಗಬೇಕು. ಈಗಲೇ ಈ ವ್ಯವಸ್ಥೆ ಜಾರಿಗೆ ಬರಲಿ ಎಂದು ಸೋಮಶೇಖರ್ ಸೂಚನೆ ನೀಡಿದರು.

ವಿಎಸ್ಎಸ್ಎನ್ ಮತ್ತು ಸಹಕಾರ ವಲಯದಲ್ಲಿ ಲೆಕ್ಕಪರಿಶೋಧನೆಯನ್ನು ಕಾಲಕಾಲಕ್ಕೆ ನಡೆಸಬೇಕು. ಈ ಮೂಲಕ ವ್ಯವಹಾರವು ಪಾರದರ್ಶಕವಾಗಿ ನಡೆಸಲು ಜಾಗೃತದಳ ರಚಿಸುವಂತೆ ಸಚಿವರು ಆದೇಶ ನೀಡಿದರು.

ಕಲಬುರಗಿ ಡಿಸಿಸಿ ಬ್ಯಾಂಕ್ ಅಕ್ರಮ ತನಿಖೆಗೆ ಸೂಚನೆ:

ಕಲಬುರಗಿ ಡಿಸಿಸಿ ಬ್ಯಾಂಕ್​​ನಲ್ಲಿ 92 ಕೋಟಿ ರೂ. ಹಣವನ್ನು ಅಕ್ರಮವಾಗಿ ಆಡಳಿತ ಮಂಡಳಿ ಸದಸ್ಯರು ತಮ್ಮ ಹಿಂಬಾಲಕರಿಗೆ ಮತ್ತು ಸಂಬಂಧಿಕರಿಗೆ ನೀಡಿ ಅವ್ಯವಹಾರ ಮಾಡಿರುವ ಸಂಬಂಧ ಕೂಡಲೇ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸಚಿವರು ಆದೇಶ ನೀಡಿದರು.

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇಲ್ಲಿ ಆಡಳಿತ ಮಂಡಳಿಯನ್ನು ವಜಾ ಮಾಡಿ ಅಡ್ಮಿನಿಸ್ಟ್ರೇಟಿವ್ ಹಾಕುವುದೇ ಸೂಕ್ತ. ಜಿಲ್ಲಾಧಿಕಾರಿ ಅವರನ್ನು ಅಡ್ಮಿನಿಸ್ಟ್ರೇಟರ್​​ನ್ನಾಗಿ ನೇಮಕ ಮಾಡಿ, ಶೀಘ್ರ ಕ್ರಮ ಕೈಗೊಳ್ಳಬೇಕು. ಅಲ್ಲದೇ ಎಲ್ಲ ಹಣವನ್ನು ವಸೂಲಿ ಮಾಡುವ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.