ETV Bharat / state

ನಾನು ಪಕ್ಷಕ್ಕೆ, ಸರ್ಕಾರಕ್ಕೆ ಮೋಸ ಮಾಡಲ್ಲ, ಇಲ್ಲಿಯೇ ಮುಂದುವರೆಯುತ್ತೇನೆ : ಸಚಿವ ಸೋಮಶೇಖರ್

ರೈತರ ಸಾಲಮನ್ನಾ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರೈತರಿಗೆ ಅನುಕೂಲ ಆಗುವಂತೆ ಸಾಲ ನೀಡಲಾಗುತ್ತಿದೆ. ಸಾಲ ಮನ್ನಾ ಯೋಚನೆ ಮಾಡಿಲ್ಲ ಎಂದರು. ಕೋವಿಡ್​ನಿಂದ ಮೃತ ರೈತರ ಸಾಲಮನ್ನಾ ವಿಚಾರ ಮಾತನಾಡಿ, ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಎಂಡಿ ನಿರ್ಧಾರ ತೆಗೆದುಕೊಳ್ತಾರೆ..

minister-somashekhar
ಎಸ್. ಟಿ ಸೋಮಶೇಖರ್
author img

By

Published : Jan 24, 2022, 6:27 PM IST

ಬೆಂಗಳೂರು : ನಾನು ಪಕ್ಷಕ್ಕೆ, ಸರ್ಕಾರಕ್ಕೆ ಮೋಸ ಮಾಡಲ್ಲ. ನಾನು ಬಿಜೆಪಿಯಲ್ಲೇ ಮುಂದುವರೆಯುತ್ತೇನೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್​ಗೆ ಅನೇಕರು ಬರ್ತಾರೆ ಅಂತಾ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿರಬಹುದು.

ನಾನು ಪಕ್ಷಕ್ಕೆ, ಸರ್ಕಾರಕ್ಕೆ ಮೋಸ ಮಾಡಲ್ಲ. ನಾನು ತೃಪ್ತಿಯಾಗಿ ಕೆಲಸ ಮಾಡ್ತಾ ಇದ್ದೇನೆ. ನನ್ನನ್ನು ಸ್ವತಂತ್ರವಾಗಿ ಬಿಟ್ಟಿದ್ದಾರೆ. ಪಕ್ಷ ನನಗೆ ಸ್ವಾತಂತ್ರ್ಯ ನೀಡಿದೆ. ನಾನು ಇಲ್ಲಿಯೇ ಮುಂದುವರೆಯುತ್ತೇನೆ ಎಂದರು.

ಎಲ್ಲ ಹೋಗಲ್ಲ ನಾ ಎಲ್ಲ ಹೋಗಲ್ಲ ಅಂತಾ ಹೇಳ್ತಿರುವ ಸಚಿವ ಎಸ್ ಟಿ ಸೋಮಶೇಖರ್..

ಸಹಕಾರ ಇಲಾಖೆ ತೆಗೆದುಕೊಂಡು ಎರಡು ವರ್ಷ ಆಗಿದೆ. 20-22ನೇ ವರ್ಷದಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಎಲ್ಲಾ ತಿಳಿದುಕೊಳ್ಳಲು ನಾನೇನು ಸರ್ವಜ್ಞನಲ್ಲ. ರೈತರ ಪರವಾಗಿ ಸಹಕಾರ ಇಲಾಖೆ ಇದೆ ಅಂತಾ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ವರ್ಷ ಮುನ್ನಡೆಸಿದ್ದೇನೆ.

ನನ್ನ ಮೇಲೆ ಎರಡು ಬಾರಿ ಸಿಐಡಿ ತನಿಖೆ ಆಯ್ತು. ರಾಜಕೀಯ ದ್ವೇಷ ಆಗಬಾರದು. ನೋವು ತಿಂದಿದ್ದೇನೆ. ಉಳಿದ ಸಹಕಾರಿಗಳಿಗೆ ತೊಂದರೆ ಆಗಬಾರದು ಎಂದವನು ನಾನು. ಸಮಸ್ಯೆ ಇದ್ದ ಕಡೆ ಸರಿ ಮಾಡುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.

ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆ ವಿಚಾರವಾಗಿ ಮಾತನಾಡಿ, ಕಳೆದ ಬಾರಿ ಕೊರೊನಾ ಕಾರಣ ಮುಂದುವರೆಸಿದ್ವಿ. ಈ ಬಾರಿಯೂ ಕೊರೊನಾ ಹೆಚ್ಚಿದೆ. ಸಾರ್ವಜನಿಕರಿಂದ ಮುಂದಕ್ಕೆ ಹಾಕಿ ಎಂಬ ಮನವಿ ಬಂದಿದೆ. ಎಲ್ಲಿ ಮುಂದೂಡಿಕೆಗೆ ಮನವಿ ಬಂದಿದೆಯೋ ಅಂತಹ ಜಾಗದಲ್ಲಿ ಮಾತ್ರ ಮುಂದೂಡಿಕೆ ಮಾಡಿದ್ದೇವೆ ಎಂದರು.

ರೈತರ ಸಾಲಮನ್ನಾ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರೈತರಿಗೆ ಅನುಕೂಲ ಆಗುವಂತೆ ಸಾಲ ನೀಡಲಾಗುತ್ತಿದೆ. ಸಾಲ ಮನ್ನಾ ಯೋಚನೆ ಮಾಡಿಲ್ಲ ಎಂದರು. ಕೋವಿಡ್​ನಿಂದ ಮೃತ ರೈತರ ಸಾಲಮನ್ನಾ ವಿಚಾರ ಮಾತನಾಡಿ, ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಎಂಡಿ ನಿರ್ಧಾರ ತೆಗೆದುಕೊಳ್ತಾರೆ.

ಸಹಕಾರ ಬ್ಯಾಂಕ್​ಗಳ ಲಾಭಾಂಶದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ತಾರೆ. ಕಳೆದ ವರ್ಷ ಸುಮಾರು 1 ಲಕ್ಷದವರೆಗೆ ಪರಿಹಾರ ಕೊಡಲಾಗುತ್ತಿತ್ತು. ಈ ವರ್ಷವೂ ಇದನ್ನ ಮುಂದುವರಿಸಲು ಸಹಕಾರಿ ಬ್ಯಾಂಕ್​ಗಳಿಗೆ ಸೂಚನೆ ಕೊಡುತ್ತೇವೆ. ಅವರ ಲಾಭಾಂಶದ ಆಧಾರದ ಮೇಲೆ ಅವರು ನಿರ್ಧಾರ ತೆಗೆದುಕೊಳ್ತಾರೆ ಎಂದರು.

ಓದಿ: ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥನಾರಾಯಣ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.