ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಸಂಘಟನೆ ಒಕ್ಕೂಟ ವತಿಯಿಂದ ಕಾರ್ಮಿಕರ ಸಂಕಷ್ಟ ಮತ್ತು ಉಪಯೋಗಕ್ಕೆ ರಾಜ್ಯಾದ್ಯಂತ ಕಾರ್ಮಿಕರ ರಥ ಸಂಚರಿಸಲಿದೆ. ಇಂದು ಕಾರ್ಮಿಕರ ರಥಕ್ಕೆ ವಸತಿ ಸಚಿವ ವಿ.ಸೋಮಣ್ಣ ಚಾಲನೆ ಕೊಟ್ಟರು.
ವಿ.ಸೋಮಣ್ಣ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗು ಇತರೆ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಇಲಾಖೆ ಮತ್ತು ವಸತಿ ಇಲಾಖೆ ವತಿಯಿಂದ ಯೋಜನೆಗಳಿವೆ. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಮತ್ತು ಕಾರ್ಮಿಕರಿಗೆ ವಸತಿ ಇಲಾಖೆಯಿಂದ ಸುಲಭ ಸಾಲ ಸೌಲಭ್ಯದ ವಸತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಒಂಟಿ ಮನೆ ಯೋಜನೆಯ ಮೂಲಕ ಮನೆ ಕಟ್ಟಲು ಅನುದಾನ ನೀಡಲಾಗಿದೆ. ಹಕ್ಕು ಪತ್ರ ಇಲ್ಲದೇ 35 ವರ್ಷಗಳಿಂದ ವಾಸವಾಗಿದ್ದ ಹಲವು ಕಟ್ಟಡ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲಾಗಿದೆ.
ಲೇಬರ್ ಕಾರ್ಡ್ ವಿತರಣೆ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 5,600 ಅಸಂಘಟಿತ ಕಾರ್ಮಿಕರಿಗೆ ಮತ್ತು 2,500 ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಕೊಡಲಾಗಿದೆ ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕಾರ್ಮಿಕ ಈ ದೇಶದ ಸಂಪತ್ತು. ಕಾರ್ಮಿಕರ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಬದ್ಧ ಎಂದರು.
ಇದನ್ನೂ ಓದಿ: ನಾವು ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.. ಸಚಿವ ಶ್ರೀರಾಮುಲು