ETV Bharat / state

ಎಸ್ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ಮಾರ್ಚ್​ನಲ್ಲಿ ನಡೆಸುವುದಿಲ್ಲ: ಸಚಿವ ಸುರೇಶ್ ಕುಮಾರ್ - Minister S. Suresh Kumar

ಈ ವರ್ಷ ಮಾರ್ಚ್​ನಲ್ಲಿ ಎಸ್ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡುವುದಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಕೊಡುತ್ತೇವೆ. ಇನ್ನು, 1 ರಿಂದ 9ನೇ ತರಗತಿ ವರಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿರ್ಧರಿಸುತ್ತೇವೆ. ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಉದ್ದೇಶವಿಲ್ಲ ಎಂದು ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

minister-s-suresh-kumar-statement-about-sslc-and-puc-exam
ಎಸ್ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ಮಾರ್ಚ್​ನಲ್ಲಿ ನಡೆಸುವುದಿಲ್ಲ : ಸಚಿವ ಸುರೇಶ್ ಕುಮಾರ್
author img

By

Published : Dec 31, 2020, 5:43 PM IST

Updated : Dec 31, 2020, 6:27 PM IST

ಬೆಂಗಳೂರು: 2021ನೇ ಸಾಲಿನ ಮಾರ್ಚ್​ನಲ್ಲಿ ಎಸ್ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಖಂಡಿತವಾಗಿಯೂ ನಡೆಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಎಸ್ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ಮಾರ್ಚ್​ನಲ್ಲಿ ನಡೆಸುವುದಿಲ್ಲ: ಸಚಿವ ಸುರೇಶ್ ಕುಮಾರ್

ರಾಜ್ಯ ಸರ್ಕಾರದ 2021ನೇ ಸಾಲಿನ ಹೊಸ ದಿನಚರಿ ಮತ್ತು ಹೊಸ ಕ್ಯಾಲೆಂಡರ್​ಗಳನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ವರ್ಷ ಮಾರ್ಚ್​ನಲ್ಲಿ ಎಸ್ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡುವುದಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಕೊಡುತ್ತೇವೆ. ಇನ್ನು, 1 ರಿಂದ 9ನೇ ತರಗತಿ ವರಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿರ್ಧರಿಸುತ್ತೇವೆ. ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಉದ್ದೇಶವಿಲ್ಲ ಎಂದರು.

ಎಸ್ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭದ ಕ್ಷಣಗಣನೆಯಲ್ಲಿದ್ದೇವೆ. ಸಿದ್ದತೆಗಳು ಪೂರ್ಣಗೊಂಡಿದ್ದು, ನಾನು ಸೇರಿದಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲ ಹಿರಿಯ ಅಧಿಕಾರಿಗಳು ಒಂದೊಂದು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎಸ್ ಓಪಿ ಮಾರ್ಗಸೂಚಿ ಅನುಷ್ಠಾನದ ಜತೆಗೆ ಶಿಕ್ಷಕರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.

ಆತಂಕ ಬೇಡ: ಯಾವುದೇ ರೀತಿಯ ಆತಂಕಬೇಡವೆಂದು ಪೋಷಕರಿಗೆ ಮನವಿ ಮಾಡುತ್ತೇನೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯವಲ್ಲ. ವಾಲೆಂಟರಿ ಅಲ್ಲ ಮ್ಯಾನಂಡೇರಿ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರ ಆಯ್ಕೆಗೆ ಬಿಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೂನ್ಯ ಪ್ರಮಾಣದಲ್ಲಿದೆ ಎಂದರು.
"ಬನ್ನಿ ಕೊರೊನಾವನ್ನು ಓಡಿಸೋಣ, ವಿದ್ಯಾರ್ಥಿಗಳನ್ಮು ಓದಿಸೋಣ" ಇದು ನಮ್ಮ ಟ್ಯಾಗ್ ಲೈನ್ ಎಂದ ಸಚಿವರು, ನೀವು ನಿಮ್ಮ‌ ಮಕ್ಕಳನ್ನು ಮನೆಯಲ್ಲಿ ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೀರೋ ಅಷ್ಟೇ ಜೋಪಾನವಾಗಿ ಮಕ್ಕಳನ್ನು ಶಿಕ್ಷಕರು ಶಾಲೆಗಳಲ್ಲಿ ನೋಡಿಕೊಳ್ಳುತ್ತಾರೆ. ನೀವು ಮಕ್ಕಳನ್ನು ಜೋಪಾನವಾಗಿ ಶಾಲೆಗೆ ಕಳುಹಿಸಿ, ನಾವೂ ಅಷ್ಟೇ ಜೋಪಾನವಾಗಿ ಮಕ್ಕಳನ್ನು ಶಾಲೆಯಲ್ಲಿ ನೋಡಿಕೊಂಡು ಮನೆಗೆ ಕಳುಹಿಸುತ್ತೇವೆ ಎನ್ನುವ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಮಕ್ಕಳನ್ನು ಶಾಲೆಯಲ್ಲಿ ಸ್ವಾಗತಿಸಲು ಶಾಲೆಗಳ ಎಸ್ ಡಿಎಂಸಿ ಸದಸ್ಯರು ಸಿದ್ದತೆ ಮಾಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಮೊದಲ ಅವಧಿಯಲ್ಲಿ ಶಿಕ್ಷಕರು‌ ಮೊದಲು ಮಕ್ಕಳ ಜತೆ ಮಾತನಾಡಬೇಕು. ಮಕ್ಕಳಿಗೆ ಅವರ ಭಾವನೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ಎರಡನೇ ಅವಧಿಯಲ್ಲಿ ಕೊರೊನಾ ಸೋಂಕಿನ ವಿಷಯದಲ್ಲಿ ಮಾರ್ಗದರ್ಶನ ಮಾಡುವಂತೆ ಶಿಕ್ಷಕರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಅಪಾಯಕಾರಿಯಲ್ಲ: ಕೊರೊನಾ ಎರಡನೇ ಅಲೆ ಮತ್ತು ರೂಪಾಂತರಿ ಕೊರೊನಾ ಕೋವಿಡ್​​​ಗಿಂತ ಅಪಾಯಕಾರಿಯಲ್ಲ. ಮೊದಲ ಅಲೆಗೆ ತೆಗೆದುಕೊಂಡ ಕ್ರಮ‌ ಮತ್ತು ಚಿಕಿತ್ಸಾ ಕ್ರಮ ಹಾಗೂ ಔಷಧ, ವ್ಯಾಕ್ಸಿನ್ ಇದಕ್ಕೂ ಸಾಕು ಎಂದು ತಜ್ಞರೇ ಹೇಳಿದ್ದಾರೆ ಎಂದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಜೀವನದ ಪ್ರಮುಖ ಘಟ್ಟ. ಇಂದು ರಾತ್ರಿಯೊಳಗೆ ಕೇಂದ್ರ ಶಿಕ್ಷಣ ಸಚಿವರು ಸಿಬಿಎಸ್ ಸಿ ಮತ್ತು ಜೆಇಟಿ, ಐಐಟಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸುತ್ತಾರೆ ಎಂದು ಹೇಳಿದರು.

ಈ ಮೊದಲು ಜನವರಿ ನಾಲ್ಕರಿಂದ ಶಾಲೆ ಪುನರಾರಂಭಕ್ಕೆ ನಿರ್ಧರಿಸಿದ್ದೆವು. ಅದರೆ ಜನವರಿ 1ಕ್ಕೆ ಪ್ರಾರಂಭಿಸುತ್ತಿದ್ದೇವೆ. ಕನಿಷ್ಠ ಶೇ. 50 ರಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಶೇ. 90 ರಷ್ಟು ಬರಬೇಕೆಂಬ ಅಪೇಕ್ಷೆ ಇದೆ. ಇದು ನನಗೆ ಅಗ್ನಿಪರೀಕ್ಷೆಯಲ್ಲ. ಅಸಹಜ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಸಹಜ ಪ್ರಕ್ರಿಯೆ. ಇದರಲ್ಲಿ ನಾವು ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನವರಿ 15ರ ನಂತರ ಪ್ರಥಮ ಪಿಯುಸಿ ಆರಂಭ: ಜನವರಿ 15ರ ನಂತರ ಪರಿಸ್ಥಿತಿ ಅವಲೋಕಿಸಿ, ತಜ್ಞರ ಸಲಹೆ ಪಡೆದು ಪ್ರಥಮ‌ ಪಿಯುಸಿ ತರಗತಿ ಆರಂಭಿಸಲಾಗುತ್ತದೆ. ಕೋರ್ಟ್ ಕೂಡ ಶಾಲೆಗಳ ಪುನಾರಂಭಕ್ಕೆ ಮತ್ತು ವಿದ್ಯಾಗಮ ಮುಂದುವರಿಸಲು ಸೂಚನೆ ನೀಡಿತ್ತು. ಎಸ್ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಬಸ್ ಪಾಸ್ ಈ ವರ್ಷವೂ‌‌ ಮುಂದುವರಿಯುತ್ತದೆ. ಸಾರಿಗೆ ಇಲಾಖೆಯೂ ಸಹಕಾರ ನೀಡಿದೆ ಎಂದು ಹೇಳಿದರು.

ಶಾಲಾ ಶುಲ್ಕ ಗೊಂದಲ: ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಜತೆ ಮಾತುಕತೆ ನಡೆಸುತ್ತಿದ್ದೇವೆ. ಇಷ್ಟರಲ್ಲೇ ಶಿಕ್ಷಣ ಇಲಾಖೆಯಿಂದ ಒಂದು ಸೂತ್ರವನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.

ಪಠ್ಯ ಗೊಂದಲವಿಲ್ಲ: ಪಠ್ಯ ಕುರಿತು ಯಾವುದೇ ಗೊಂದಲವಿಲ್ಲ‌. ನಾಳೆಯಿಂದ ತರಗತಿ ಆರಂಭವಾದರೂ ದಿನಕ್ಕೆ ಕೇವಲ ನಾಲ್ಕು ಪೀರಿಯಡ್ ಮಾತ್ರ ಇರುತ್ತದೆ. ಹಾಗಾಗಿ ಶೈಕ್ಷಣಿಕ ವರ್ಷಕ್ಕೆ ಎಷ್ಟು ದಿನಗಳು‌ ಲಭ್ಯವಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ, ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಪರೀಕ್ಷಾ ದೃಷ್ಟಿಯಿಂದ ಎಷ್ಟು ಸಿಲಬಸ್ ಇರುತ್ತದೆ ಎಂಬ ಬಗ್ಗೆ ಆರೇಳು ದಿನಗಳಲ್ಲಿ ಪ್ರಕಟಿಸುತ್ತೇವೆ. ಜತೆಗೆ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

Last Updated : Dec 31, 2020, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.