ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಲಾಗಿದ್ದು, ನಾಯಕತ್ವ ಬದಲಾವಣೆ ಕುರಿತು ಪರ - ವಿರೋಧ ಚರ್ಚೆ ಶುರುವಾದ್ರೆ ಅದನ್ನು ತಡೆಯೋದು ಅದರ ಉದ್ದೇಶವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಕಾಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿ, ಕಮಿಟಿ ಮಾಡಿದ್ದೇವೆ. ಕಮಿಟಿಯಲ್ಲಿ ಜನರಲ್ ಸೆಕ್ರೆಟರಿ, ಸಿಎಂ, ಮೂರು ಜನ ಸಚಿವರು ಇದ್ದೇವೆ. ಇನ್ನೊಬ್ಬರು ಉತ್ತರ ಕರ್ನಾಟಕ ಸಚಿವರು ಕಮಿಟಿಗೆ ಸೇರುತ್ತಾರೆ. ಎಲ್ಲವನ್ನ ಕಮಿಟಿ ನೋಡಿಕೊಳ್ಳುತ್ತದೆ. ಇಲ್ಲಿ ಯಾರು ಹೇಳಿಕೆಗಳನ್ನು ವಿರೋಧವಾಗಿಯೂ ನೀಡುವಂತಿಲ್ಲ, ಜೊತೆಗೆ ಸಿಎಂ ಪರವಾಗಿಯೂ ಹೇಳಿಕೆಯನ್ನ ನೀಡುವಂತಿಲ್ಲ ಎಂದರು.
ಸಿಎಂ ಬದಲಾವಣೆ ವಿಚಾರ ಗಾಳಿ ಸುದ್ದಿ. ಈ ಗಾಳಿಸುದ್ದಿಗೆ ನಿನ್ನೆಯೇ ಅಂತ್ಯ ಹಾಡಿದ್ದೇವೆ. ಮುಂದೆ ಯಾರು ಸಹ ಪರವಾಗಿ ಆಗಲಿ-ವಿರೋಧವಾಗಿ ಆಗಲಿ ಮಾತಾಡುವಂತಿಲ್ಲ ಎಂದು ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾತಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.